Advertisement

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

06:05 PM Nov 28, 2024 | Team Udayavani |

ನವದೆಹಲಿ: ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆ(Blankets)ಯನ್ನು ಎಷ್ಟು ದಿನಗಳಿಗೊಮ್ಮೆ ಒಗೆಯಲಾಗುತ್ತದೆ ಎಂಬ ಲಿಖಿತ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಬುಧವಾರ (ನ.27) ಲೋಕಸಭೆಗೆ ಉತ್ತರ ನೀಡಿದ್ದು, ಪ್ರಯಾಣಿಕರಿಗೆ ನೀಡುವ ಹೊದಿಕೆಯನ್ನು ತಿಂಗಳಿಗೊಮ್ಮೆ ಒಗೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

ರೈಲ್ವೆ ಪ್ರಯಾಣಿಕರಿಗೆ ನೀಡುವ ಬ್ಲ್ಯಾಂಕೆಟ್‌ ಒಗೆಯುವ ಅವಧಿ ಮತ್ತು ಅದರ ಮಾನದಂಡದ ಕುರಿತು ಕಾಂಗ್ರೆಸ್‌ ಸಂಸದ ಕುಲ್‌ ದೀಪ್‌ ಇಂದೋರಾ ಅವರು ಕೇಳಿದ ಲಿಖಿತ ಪ್ರಶ್ನೆಗೆ ಸಚಿವ ವೈಷ್ಣವ್‌ ಈ ಉತ್ತರ ನೀಡಿದ್ದಾರೆ.

ಅಷ್ಟೇ ಅಲ್ಲದೇ ಪ್ರಯಾಣಿಕರಿಗೆ ಒದಗಿಸುವ ಬೆಡ್‌ ರೋಲ್‌ ಕಿಟ್ಸ್‌ ನಲ್ಲಿ ಹೆಚ್ಚುವರಿ ಬೆಡ್‌ ಶೀಟ್‌ ಮತ್ತು ಗುಣಮಟ್ಟದ ಕವರ್‌ ಅನ್ನು ನೀಡಲಾಗುತ್ತದೆ ಎಂದು ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ಪ್ರಸ್ತುತ ಪ್ರಯಾಣಿಕರಿಗೆ ನೀಡುವ ಹೊದಿಕೆ ಹೆಚ್ಚು ಭಾರ ಹೊಂದಿಲ್ಲ, ಒಗೆಯಲು ಅನುಕೂಲವಾಗಿದೆ. ಇದು ಪ್ರಯಾಣಿಕರಿಗೆ ಪ್ರಯಾಣದ ವೇಳೆ ಆರಾಮದಾಯಕ ಅನುಭವ ನೀಡುತ್ತದೆ ಎಂದು ಸಚಿವ ವೈಷ್ಣವ್‌ ತಿಳಿಸಿದ್ದಾರೆ.

Advertisement

ರೈಲ್ವೆ ಇಲಾಖೆ ಸ್ವಯಂಚಾಲಿತ ಲಾಂಡ್ರಿ ವ್ಯವಸ್ಥೆ ಹೊಂದಿದ್ದು, ಗುಣಮಟ್ಟದ ವಾಶಿಂಗ್‌ ಉಪಕರಣ, ನಿರ್ದಿಷ್ಟವಾದ ಕ್ಲೀನಿಂಗ್‌ ಏಜೆಂಟ್ಸ್‌ ಗಳು ಹಾಗೂ ಲಾಂಡ್ರಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಾಗುತ್ತದೆ ಎಂದು ಸಚಿವ ವೈಷ್ಣವ್‌ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು.

ವಲಯ ಕೇಂದ್ರ ಕಚೇರಿಗಳಲ್ಲಿ ವಾರ್‌ ರೂಂಗಳನ್ನು ಸ್ಥಾಪಿಸಲಾಗಿದ್ದು, ಬೆಡ್‌ ರೋಲ್‌ ಸೇರಿದಂತೆ ಇತರ ದೂರುಗಳನ್ನು ವಿಭಾಗೀಯ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next