ಬೇಸಗೆಯಲ್ಲಿ ನಿಶ್ಶಕ್ತಿ ಕಾಡುವುದು ಸಾಮಾನ್ಯ. ಇದಕ್ಕಾಗಿ ಸರಿಯಾದ ಆಹಾರ ಕ್ರಮ ಪಾಲಿಸುವುದು ಎಷ್ಟು ಮುಖ್ಯವೋ ಅಷ್ಟೇ ವ್ಯಾಯಾಮ ಮಾಡುವುದು ಕೂಡ ಮುಖ್ಯವಾಗಿರು ತ್ತದೆ. ಅದರಲ್ಲೂ ಯೋಗದ ಮೂಲಕ ನಿಶ್ಶಕ್ತಿಯನ್ನು ಹೋಗಲಾಡಿಬಹುದು. ಕೆಲವೊಂದು ಯೋಗ ಭಂಗಿಯನ್ನು ನಿತ್ಯವೂ ಅಭ್ಯಾಸ ಮಾಡಿದರೆ ಖಿನ್ನತೆ, ನೋವು, ನಿಶ್ಶಕ್ತಿ ದೂರವಾಗುವುದು.
ಬಾಲಾಸನ ಮಾಡುವುದರಿಂದ ಸೊಂಟ, ಬೆನ್ನಿಗೆ ವಿಶ್ರಾಂತಿ ದೊರೆತು ದೇಹದ ವಿವಿಧ ಭಾಗಗಳಲ್ಲಿರುವ ನೋವು ನಿವಾರಣೆಯಾಗಿ ಖಿನ್ನತೆ, ನಿಶ್ಶಕ್ತಿ ದೂರವಾಗುತ್ತದೆ.
ದನದ ಭಂಗಿಯಲ್ಲಿ ನಿಂತುಕೊಳ್ಳುವುದರಿಂದ ಬೆನ್ನುನೋವು ಕಡಿಮೆಯಾಗುವುದು, ಜೀರ್ಣಕ್ರಿಯೆ ಸುಸ್ಥಿರವಾಗಿರುತ್ತದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.
ಸುಪೈನ್ ಟ್ವಿಸ್ಟ್ ಯೋಗ ಭಂಗಿಯು ಭುಜಗಳಿಗೆ ಆರಾಮ ಒದಗಿಸುವುದು ಮಾತ್ರವಲ್ಲದೆ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ, ಬೆನ್ನಿನ ಕೆಳಭಾಗಕ್ಕೆ ಆರಾಮ ನೀಡುತ್ತದೆ.
ಕುರ್ಚಿಯ ಯೋಗ ಭಂಗಿಯು ನರ ವ್ಯವಸ್ಥೆಯನ್ನು ಶಾಂತಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಿಸಿ, ಬೆನ್ನು, ಕಾಲು, ಪಾದಗಳಲ್ಲಿನ ಸ್ನಾಯುಗಳಿಗೆ ಆರಾಮ ನೀಡುವುದು.
ಚಿಟ್ಟೆಯ ಯೋಗ ಭಂಗಿಯಿಂದ ತೊಡೆ, ಸೊಂಟದಲ್ಲಿನ ಸೆಳೆತ ನಿವಾರಣೆಯಾಗಿ ನಿಶ್ಶಕ್ತಿ ಕಡಿ ಮೆಯಾಗುವುದು. ಕರುಳಿನ ಚಟುವಟಿಕೆಗಳು ಸುಸ್ಥಿರವಾಗಿರುವುದು.
ಶವಾಸನದಿಂದ ಮಾನಸಿಕ, ದೈಹಿಕ ಒತ್ತಡ ಕಡಿಮೆಯಾಗಿ ಸಂಪೂರ್ಣ ವಿಶ್ರಾಂತಿ ದೊರೆಯುವುದು. ಇದರಿಂದ ನಿಶ್ಶಕ್ತಿ ದೂರವಾಗುವುದು.