Advertisement

72 ಗಂಟೆಯೊಳಗೆ ಮದುವೆ ಆಗಬೇಕು.. ಮದುವೆಗೂ ಮುನ್ನ ಗರ್ಭಿಣಿ ಆಗಿದ್ದ ನಟಿಗೆ ಮನೆಯವರ ಷರತ್ತು.!

09:15 PM May 18, 2023 | Team Udayavani |

ಮುಂಬಯಿ: ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಬಿಟೌನ್‌ ನ ಫೇಮ್‌ ಜೋಡಿಗಳಲ್ಲಿ ಒಂದು. ಪ್ರೀತಿಸಿ ಮದುವೆಯಾದ ಜೋಡಿಗೆ ದಂಪತಿಗೆ ಮೆಹರ್, ಗುರಿಕ್ ಸಿಂಗ್ ಎನ್ನುವ ಮಕ್ಕಳಿದ್ದಾರೆ. ಎಲ್ಲ ಸೆಲೆಬ್ರಿಟಿಗಳ ಹಾಗೆ ಇಬ್ಬರ ಮದುವೆ ಅದ್ದೂರಿಯಾಗಿ ನಡೆದಿಲ್ಲ. ಈ ಬಗ್ಗೆ ಸ್ವತಃ ನಟಿ ನೇಹಾ ಧೂಪಿಯಾ ಅವರೇ ಮಾತನಾಡಿದ್ದಾರೆ.

Advertisement

ನೇಹಾ – ಅಂಗದ್ ಬೇಡಿ ಸಂಬಂಧವನ್ನು ಅವರ ಮನೆಯವರು ಒಪ್ಪಿಕೊಂಡಿದ್ದರು. ಆದರೆ ನೇಹಾ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು. ಈ ವಿಚಾರದೊಂದಿಗೆ ಪ್ರೀತಿಯ ವಿಚಾರವನ್ನು ಮನೆಯವರ ಮುಂದೆ ನೇಹಾ ಹೇಳಿ ಅವರನ್ನು ಒಪ್ಪಿಸುವುದು ಅಷ್ಟು ಸುಲಭ ಮಾತಾಗಿರಲಿಲ್ಲ.

ಇದನ್ನೂ ಓದಿ: “ಪಕ್ಷಕ್ಕಾಗಿ ಒಪ್ಪಿಕೊಂಡೆ…”: DCM ಹುದ್ದೆಯ ಬಗ್ಗೆ ಡಿಕೆ ಶಿವಕುಮಾರ್ ಮಾತು

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ ನನ್ನ ಆಯ್ಕೆ ಯಾರನ್ನೂ ನೋಯಿಸುವ ಹಾಗೆ ಇರಬಾರದೆಂದುಕೊಂಡು ನಮ್ಮ ಪ್ರೀತಿಯ ವಿಚಾರವನ್ನು ಮನೆಯವರ ಬಳಿ ಹೇಳಿದೆ. ನಾನು ಗರ್ಭಿಣಿ ಆಗಿದ್ದೇನೆ ಎಂದು ಹೇಳಿದಾಗ, ಮನೆಯವರು ಇದಕ್ಕೆ ಆಯತೆಂದು ಹೇಳಿದರು. ಆದರೆ ಮುಂದಿನ 72 ಗಂಟೆಯೊಳಗೆ ಮದುವೆಯಾಗಬೇಕೆಂದು ಹೇಳದರು. ಬಾಂಬೆಗೆ ಹಿಂತಿರುಗಿ ಮದುವೆಯಾಗಲು ನನಗೆ ಎರಡೂವರೆ ದಿನಗಳ ಕಾಲಾವಕಾಶ ನೀಡಿದ್ದರು. ಆ ಬಳಿಕ ಕೆಲ ಆತ್ಮೀಯರ ಸಮ್ಮುಖದಲ್ಲಿ ನಾವು ಮದುವೆ ಆದೆವು” ಎಂದು ನಟಿ ಹೇಳಿದ್ದಾರೆ.

2018 ರ ಮೇ ತಿಂಗಳಲ್ಲಿ ಮದುವೆಯಾದ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಇತ್ತೀಚೆಗೆ ತಮ್ಮ 5ನೇ ವರ್ಷದ ಮದುವೆ ದಿನವನ್ನು ಆಚರಿಸಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next