Advertisement

ಮುಂಬಯಿ ಕೋವಿಡ್ ಗೆದ್ದಿದ್ದು ಹೇಗೆ?

02:02 AM May 10, 2021 | Team Udayavani |

ಮಹಾರಾಷ್ಟ್ರದ ರಾಜಧಾನಿ ಮುಂಬಯಿ ದೇಶದ ಅತೀ ದೊಡ್ಡ ಕೊರೊನಾ ಹಾಟ್‌ಸ್ಪಾಟ್‌ ಆಗಿ ಬದಲಾಗಿತ್ತು. ಆದರೆ ಕೊರೊನಾದ ವೇಗದೊಂದಿಗೆ ಕೆಲಸ ನಿರ್ವಹಿಸಿದ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ವೈರಸ್‌ಗೆ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾಗಿದೆ. ಹಾಗಾದರೆ ಮುಂಬಯಿ ಮಾಡಿದ ಆ ಮ್ಯಾಜಿಕ್‌ ಏನು? ಇಲ್ಲಿದೆ ಮಾಹಿತಿ.

Advertisement

ರೋಗಿಗಳನ್ನು ತಲುಪುವುದೇ ಆದ್ಯತೆ
ಕೊರೊನಾ 2ನೇ ಅಲೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಮಹಾನಗರ ಪಾಲಿಕೆಯ ತಂಡಗಳು ಜನದಟ್ಟಣೆ ಇರುವ ಪ್ರದೇಶಗಳು, ಮಾರುಕಟ್ಟೆಗಳು, ಬೀದಿಗಳು, ರೈಲ್ವೇ ನಿಲ್ದಾಣಗಳು, ಬಸ್‌ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಈ ಸಂದರ್ಭ ಪತ್ತೆಯಾದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಇದು ರೋಗಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಯಿತು. ಆ ಸಮಯದಲ್ಲಿ ಎಲ್ಲ ಸ್ಥಳಗಳಲ್ಲಿ ರೆಮಿಡಿಸಿವಿರ್‌ನ ಕೊರತೆ ಇತ್ತು. ಆ ಬಳಿಕ ಅದು ಸುಲಭವಾಗಿ ದೊರೆಯುವಂತೆ ಮಾಡಲಾಯಿತು.

76 ದಿನಗಳಲ್ಲಿ ದುಪ್ಪಟ್ಟು ಪ್ರಕರಣಗಳು
ಕೊರೊನಾದ ಎರಡನೇ ಅಲೆಯ ಸಂದರ್ಭದಲ್ಲಿ, ಮುಂಬಯಿಯಲ್ಲಿ ಆರಂಭದಲ್ಲಿ ರೋಗಿಗಳ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಲೇ ಸಾಗಿತ್ತು. ಫೆಬ್ರವರಿ 10ರ ಹೊತ್ತಿಗೆ ನಗರದಲ್ಲಿ ಒಟ್ಟು 3 ಲಕ್ಷದ 13 ಸಾವಿರ ಮಂದಿಗೆ ಸೋಂಕು ತಗಲಿತ್ತು. 76 ದಿನಗಳಲ್ಲಿ ಈ ಸಂಖ್ಯೆ 6.22 ಲಕ್ಷ ತಲುಪಿದೆ. ಇನ್ನು ಸಾವಿನ ಅಂಕಿ-ಅಂಶಗಳನ್ನು ಹೋಲಿಸಿದರೆ ಫೆಬ್ರವರಿ 10ರ ವೇಳೆಗೆ ಒಟ್ಟು 11,400 ಸಾವುಗಳು ಸಂಭವಿಸಿವೆ. ಎಪ್ರಿಲ್‌ 25ರ ಹೊತ್ತಿಗೆ ಈ ಸಂಖ್ಯೆ 12,719 ತಲುಪಿತ್ತು. ಆದರೆ ಮೇಯಲ್ಲಿ ಸಾವಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಸದ್ಯ ಮುಂಬಯಿ ಶೇ. 0.04 ಮರಣ ಪ್ರಮಾಣ ಹೊಂದಿದ್ದು, ಇದು ವಿಶ್ವದಲ್ಲೇ ಅತೀ ಕಡಿಮೆಯಾಗಿದೆ. ಇನ್ನು ಪ್ರತೀ ದಿನ 11,000ಕ್ಕೂ ಅಧಿಕ ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದರೆ ಇದೀಗ ಈ ಸಂಖ್ಯೆ 3,000ದ ಆಸುಪಾಸಿನಲ್ಲಿದೆ.

ಆಮ್ಲಜನಕದ ಕೊರತೆಯೇ ಆಗಿಲ್ಲ
ಬಿಎಂಸಿ, ಅಗತ್ಯವಿರುವ ರೋಗಿಗಳಿಗೆ ಆಮ್ಲಜನಕವನ್ನು ಒದಗಿಸಿದ ರೀತಿಯನ್ನು ಸುಪ್ರೀಂ ಕೋರ್ಟ್‌ ಶ್ಲಾ ಸಿದೆ. ಸೂಕ್ಷ್ಮ ಯೋಜನೆ, ಸಮನ್ವಯ ಮತ್ತು ಉತ್ತಮ ನಿರ್ವಹಣೆಯಿಂದಾಗಿ ಮುಂಬಯಿ ಕೊರೊನಾಗೆ ತಡೆಯೊಡ್ಡಿದೆ. ಮೊದಲ ಅಲೆಯಲ್ಲೇ ಸೋಂಕಿನ ತೀವ್ರತೆಯನ್ನು ಅರಿತುಕೊಂಡಿದ್ದ ರಾಜ್ಯ ಸರಕಾರ ಮತ್ತು ಬಿಎಂಸಿಗೆ ಎರಡನೇ ಅಲೆಗೆ ಕಡಿವಾಣ ಹಾಕಲು ಯೋಜನೆಗಳನ್ನು ರೂಪಿಸಲು ಮತ್ತವುಗಳ ಯಶಸ್ವೀ ಅನುಷ್ಠಾನಕ್ಕೆ ಇದು ಸಹಕಾರಿಯಾಯಿತು.

ಖಾಸಗಿ ಆಸ್ಪತ್ರೆಗಳ ಸ್ವಾಧೀನ
ಮುಂಬಯಿಯ ಕೋವಿಡ್‌ ಜಂಬೋ ಸೆಂಟರ್‌ ಮೂಲಕ 9 ಸಾವಿರ ಹಾಸಿಗೆಗಳನ್ನು ಸಿದ್ಧಪಡಿಸಲಾಗಿತ್ತು. ಈ ಬೆಡ್‌ಗಳ ಪೈಕಿ ಶೇ. 60ರಷ್ಟು ಬೆಡ್‌ಗಳಿಗೆ ಆಕ್ಸಿಜನ್‌ ಸೌಲಭ್ಯವನ್ನು ನೀಡಲಾಗಿತ್ತು. ಹೆಚ್ಚಿನ ಬೆಡ್‌ಗಳಿಗಾಗಿ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಪ್ರಸ್ತುತ ಮುಂಬಯಿಯ ದೊಡ್ಡ 35 ಆಸ್ಪತ್ರೆಗಳು, 100 ಸಣ್ಣ ಆಸ್ಪತ್ರೆಗಳ ಶೇ. 80ರಷ್ಟು ಹಾಸಿಗೆಗಳನ್ನು ಮಹಾನಗರ ಪಾಲಿಕೆ ನಿಯಂತ್ರಿಸುತ್ತಿದೆ. ಈ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳ ದರವನ್ನು ನಿಗದಿಪಡಿಸಲಾಗಿದೆ. ಎಲ್ಲ ಹಾಸಿಗೆಗಳನ್ನು ವಾರ್ಡ್‌ ವಾರ್‌ ರೂಮ್‌ನಿಂದ ನಿರ್ವಹಿಸಲಾಗುತ್ತದೆ.

Advertisement

ಆಮ್ಲಜನಕ, ವ್ಯಾಕ್ಸಿನೇಶನ್‌
ಆರೋಗ್ಯ ಇಲಾಖೆಯು ಪಾಲಿಕೆ ವ್ಯಾಪ್ತಿಯ ಎಲ್ಲ ಆಸ್ಪತ್ರೆಗಳಲ್ಲಿ 13ರಿಂದ 26 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಟ್ಯಾಂಕ್‌ಗಳನ್ನು ಅಳವಡಿಸುವ ವ್ಯವಸ್ಥೆ ಮಾಡಿತು. ಹೆಚ್ಚಿನ ಆಸ್ಪತ್ರೆಗಳಲ್ಲಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಆಮ್ಲಜನಕವನ್ನು ಪೂರೈಸಲಾಗುತ್ತಿದೆ.

ಲಸಿಕೆ ಅಭಿಯಾನದಲ್ಲಿ ಮುಂಬಯಿ ಮುನ್ನಡೆ ಸಾಧಿಸಿದೆ. ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು, “ಮಿಷನ್‌ ಝೀರೋ’ ಜಾರಿಗೆ ತರಲಾಗಿದೆ. “ಮೇರಾ ಪರಿವಾರ್‌ ಮೇರಿ ಜ್ಯೋತಿ’ ಅಭಿಯಾನದಡಿಯಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಆರೋಗ್ಯ ಸಂದೇಶವಾಹಕರಾಗಿ ನಿಯುಕ್ತಿಗೊಳಿಸಿ 35.10 ಲಕ್ಷ ಮನೆಗಳನ್ನು ಪರಿಶೀಲಿಸಲಾಗಿದೆ. ಅವರ ಸಂಗ್ರಹಣೆಯ ಮಾಹಿತಿಯ ಆಧಾರದ ಮೇಲೆ ಸೋಂಕಿಗೆ ಬಲಿಯಾದ 51 ಸಾವಿರ ಜನರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ¨ªಾರೆ. ಈ ಸಂದರ್ಭ ಕಂಡುಕೊಂಡಂತೆ ಮಾಸ್ಕ್ ಧರಿಸಿದ 27 ಲಕ್ಷ ಜನರ ಮೇಲೆ ಕ್ರಮ ಕೈಗೊಂಡಿದ್ದಲ್ಲದೇ ಅವರಿಗೆ ಮಾಸ್ಕ್
ಅನ್ನೂ ಸರಕಾರ ನೀಡಿತ್ತು. ಇದು ರೋಗಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡಿತು.

ಹೇಗಿತ್ತು ಮುಂಬಯಿ ವರ್ಸಸ್‌ ಕೊರೊನಾ ವಾರ್‌
- ಪ್ರಾಥಮಿಕ ಹಂತದಲ್ಲಿ “ಚೇಸ್‌ ದಿ ವೈರಸ್‌’ ಅಡಿಯಲ್ಲಿ ಪ್ರತೀ ಮನೆಯ ವರು ಕೋವಿಡ್‌ ಸೆಂಟರ್‌ಗೆ ಹೋಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸ ಲಾಯಿತು. ಇದಾದ ಬಳಿಕ ಬಿಎಂಸಿ ವ್ಯಾಪ್ತಿಯಲ್ಲಿ ಮನೆಮನೆಗಳಿಗೆ ತೆರಳಿ ಜನರನ್ನು ಪರೀಕ್ಷೆಗೊಳ ಪಡಿಸಲಾಯಿತು.

-ಪ್ರತಿಯೊಂದು ವಿಭಾಗದಲ್ಲೂ “ವಾರ್ಡ್‌ ವಾರ್‌ ರೂಮ…’ ರಚಿಸಿ, ಆ ಮೂಲಕವೇ ಎಲ್ಲ ಹಾಸಿಗೆಗಳ ನಿರ್ವಹಣೆ.

– ಜನದಟ್ಟಣೆ ಇರುವ ಸ್ಥಳಗಳು ಮತ್ತು ಕೊಳೆಗೇರಿಗಳಲ್ಲಿ ತೀವ್ರವಾಗಿ ಪರಿಶೀಲನೆ ನಡೆಸಿ ಕೊರೊನಾ ಜಾಗೃತಿಯ ಜತೆ
ಕೊರೊನಾ ಟೆಸ್ಟ್‌.

– ಜಂಬೋ ಕೋವಿಡ್‌ ಕೇಂದ್ರಗಳಲ್ಲಿ 9,000 ಹಾಸಿಗೆಗಳ ವ್ಯವಸ್ಥೆ.

– ಶೇ. 60ಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯ.

– ಪ್ರತೀದಿನ 40ರಿಂದ 50 ಸಾವಿರ ಜನರ ಪರೀಕ್ಷೆ.

– ಬಿಎಂಸಿಯ ಎಲ್ಲ ಆಸ್ಪತ್ರೆಗಳಲ್ಲಿ ಆಮ್ಲಜನಕ ಟ್ಯಾಂಕ್‌ಗಳ ವ್ಯವಸ್ಥೆ.

– ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ವ್ಯವಸ್ಥೆ.

Advertisement

Udayavani is now on Telegram. Click here to join our channel and stay updated with the latest news.

Next