Advertisement

ಅರ್ಶದೀಪ್ ಬೆಂಕಿ ಚೆಂಡಿಗೆ ಸ್ಟಂಪ್ ಪೀಸ್ ಪೀಸ್: ಒಂದು LED stump ಬೆಲೆ ಎಷ್ಟು ಲಕ್ಷ ಗೊತ್ತಾ?

08:41 AM Apr 23, 2023 | Team Udayavani |

ಮುಂಬೈ: ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರು ಬ್ಯಾಟರ್ ದೊಡ್ಡ ಸಿಕ್ಸರ್ ಬಾರಿಸಿದಾಗ ಆನಂದ ಪಡುತ್ತಾರೆ. ಹಾಗೆಯೇ ಬೌಲರ್ ತನ್ನ ವೇಗದಿಂದಲೋ ಅಥವಾ ಅದ್ಭುತ ಸ್ಪಿನ್ ನಿಂದ ಬ್ಯಾಟರ್ ನನ್ನು ಬೌಲ್ಡ್ ಮಾಡಿದರೂ ಪ್ರೇಕ್ಷಕರ ಸಂತಸಕ್ಕೆ ಎಣೆ ಇರುವುದಿಲ್ಲ. ಆದರೆ ಶನಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿದ್ದು ಪಂಜಾಬ್ ಬೌಲರ್ ಅರ್ಶದೀಪ್ ಸಿಂಗ್ ಅವರ ಆ ಎರಡು ಎಸೆತಗಳು.

Advertisement

ಮುಂಬೈ ಗೆಲುವಿಗೆ ಒಂದು ಓವರ್ ನಲ್ಲಿ 16 ರನ್ ಬೇಕಿದ್ದಾಗ ಓವರ್ ಎಸೆಯಲು ಬಂದ ಅರ್ಶದೀಪ್ ಬೆಂಕಿ ಚೆಂಡೆಸೆದರು. ಅದರಲ್ಲೂ ಮೂರನೇ ಎಸೆತದಲ್ಲಿ ತಿಲಕ್ ವರ್ಮಾ ಬೌಲ್ಡ್ ಆದರು. ಅಷ್ಟೇ ಅಲ್ಲದೆ ಮಧ್ಯದ ಸ್ಟಂಪ್ ಎರಡು ತುಂಡಾಯಿತು. ಮತ್ತೆ ಹೊಸತೊಂದು ಸ್ಟಂಪ್ ತಂದು ಆಡಬೇಕಾಯಿತು.

ಮುಂದಿನ ಎಸೆತದಲ್ಲಿ ಆ್ಯಕ್ಷನ್ – ರಿಪ್ಲೇ. ಅರ್ಶದೀಪ್ ಬೆಂಕಿ ಚೆಂಡಿಗೆ ನೆಹಾಲ್ ವದೇರಾ ಬೌಲ್ಡ್. ಮತ್ತೆ ಮಿಡಲ್ ಸ್ಟಂಪ್ ತುಂಡು.

ಇದನ್ನೂ ಓದಿ:“ಈಗ ಬೇಕಿದ್ದರೂ ಸಿಎಂ ಆಗಬಲ್ಲೆ’?: ಎನ್‌ಸಿಪಿ ನಾಯಕ Ajith Pawar ನಿಗೂಢ ಹೇಳಿಕೆ

ಕೊನೆಯ ಓವರ್‌ನಲ್ಲಿ ಸ್ಟಂಪ್‌ ಗಳನ್ನು ಎರಡು ಬಾರಿ ಬದಲಾಯಿಸಬೇಕಾಗಿತ್ತು, ಹಾಗಾದರೆ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಬಳಸುವ ಈ ಎಲ್‌ ಇಡಿ ಸ್ಟಂಪ್‌ ಗಳ ಬೆಲೆ ಎಷ್ಟಿರಬಹುದು ಎಂದು ಅಭಿಮಾನಿಗಳಿಗೆ ಕುತೂಹಲ ಹುಟ್ಟಿದೆ.

Advertisement

ವರದಿಗಳ ಪ್ರಕಾರ, ಪಿಚ್‌ನ ಎರಡೂ ತುದಿಗಳಲ್ಲಿರುವ ಮೂರು ಸ್ಟಂಪ್‌ಗಳು ಅಥವಾ ಸ್ಟಂಪ್‌ ಗಳ ಸೆಟ್‌ಗಳ ಬೆಲೆ ಸರಿಸುಮಾರು 25 ಲಕ್ಷ ರೂ. ಇದಲ್ಲದೆ, ಚೆಂಡನ್ನು ಅಥವಾ ಆಟಗಾರನೊಂದಿಗೆ ಸಂಪರ್ಕಕ್ಕೆ ಬಂದ ತಕ್ಷಣ ಫ್ಲ್ಯಾಷ್ ಮಾಡುವ ಜಿಂಗ್ ಬೇಲ್ಸ್ ಬೆಲೆ ಸುಮಾರು 50 ಸಾವಿರ ರೂ ಇರುತ್ತದೆ.

ಹೀಗಾಗಿ ಪ್ರತಿ ತುದಿಯಲ್ಲಿನ ಎರಡು ಸೆಟ್ ಸ್ಟಂಪ್‌ ಗಳ ಬೆಲೆ ಪಂದ್ಯದ ಸಮಯದಲ್ಲಿ 50 ಲಕ್ಷಕ್ಕಿಂತ ಕಡಿಮೆ ಇರುವುದಿಲ್ಲ. ದುಬಾರಿಯಾದರೂ ಆದಷ್ಟು ಮಟ್ಟಿಗೆ ನಿಖರ ಫಲಿತಾಂಶ ಪಡೆಯಲೆಂದು ಸದ್ಯ ಎಲ್ಲಾ ಕ್ರಿಕೆಟ್ ಕೂಟಗಳಲ್ಲಿ ಈ ಸ್ಟಂಪ್ ಗಳನ್ನೇ ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next