Advertisement

ಮೂತ್ರಪಿಂಡಗಳ ಬಗ್ಗೆ ನಿಮಗೆಷ್ಟು ತಿಳಿದಿದೆ?

03:00 AM Jul 16, 2017 | |

ಕಿಡ್ನಿಗಳು ದೇಹದಲ್ಲಿ ಕೆಲವು ರಾಸಾಯನಿಕಗಳ ಪ್ರಮಾಣವನ್ನು ನಿಯಂತ್ರಿಸುತ್ತವೆ. ರಾಸಾಯನಿಕ ಗಳು ಸರಿಯಾದ ಪ್ರಮಾಣದಲ್ಲಿ ಇದ್ದಾಗ ಮಾತ್ರ ದೇಹದ ಆರೋಗ್ಯ ಸರಿಯಾಗಿರುತ್ತದೆ. ಒಂದೊಮ್ಮೆ  ಈ ರಾಸಾಯನಿಕಗಳು ನಿರ್ದಿಷ್ಟ ಮಟ್ಟವನ್ನು ಮೀರಿದರೆ ದೇಹ ಬಾಧಿತವಾಗುತ್ತದೆ.

Advertisement

ಮಾನವನ ದೇಹದಲ್ಲಿರುವ ಅವರೆಯಾಕೃತಿಯ  ವಿಶಿಷ್ಟ ಅವಳಿ ಅಂಗಗಳೇ ಮೂತ್ರಪಿಂಡಗಳು ಅಥವಾ ಕಿಡ್ನಿಗಳು. ಕಿಡ್ನಿಯ ಗಾತ್ರ ಮುಷ್ಟಿಯಷ್ಟಿರುತ್ತದೆ. ಕಿಡ್ನಿಗಳು ಸಂಕೀರ್ಣವಾಗಿರುವ ಮರುಸಂಸ್ಕರಣಾ ಯಂತ್ರಗಳು. ಕ್ರಿಯಾಶೀಲ ಅಂಗಾಂಶಗಳು ಶಕ್ತಿಗುಂದಿದಾಗ ಮತ್ತು ಮನುಷ್ಯ ಸೇವಿಸುವ ಆಹಾರದಿಂದ ರಕ್ತದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತದೆ. ದೇಹವು ಆಹಾರವನ್ನು  ಶಕ್ತಿಗಾಗಿ ಹಾಗೂ ಸ್ವಯಂದುರಸ್ತಿಗಾಗಿ ಬಳಸುತ್ತದೆ. ಆಹಾರದಲ್ಲಿ ತನಗೆ ಅಗತ್ಯವಿರುವುದನ್ನು ದೇಹವು ತೆಗೆದುಕೊಂಡ ಬಳಿಕ ತ್ಯಾಜ್ಯವು ರಕ್ತಕ್ಕೆ ಬಿಡುಗಡೆಯಾಗುತ್ತದೆ. ಈ ತ್ಯಾಜ್ಯವನ್ನು ಕಿಡ್ನಿಗಳು ತೆಗೆಯದೇ ಇದ್ದಲ್ಲಿ ರಕ್ತದಲ್ಲಿ ತ್ಯಾಜ್ಯ ಪ್ರಮಾಣ ಹೆಚ್ಚಾಗಿ ದೇಹವನ್ನು ಬಾಧಿಸುತ್ತದೆ. ಇದರೊಂದಿಗೆ ಕಿಡ್ನಿಗಳು ಸೋಡಿಯಂ, ಪೊಟ್ಯಾಶಿಯಂ , ಫಾಸ್ಪರಸ್‌ನಂಥ ರಾಸಾಯನಿಕಗಳನ್ನು  ನಿರ್ದಿಷ್ಟ ಪ್ರಮಾಣದಲ್ಲಿ ದೇಹಕ್ಕೆ ಮರುತಲುಪಿಸುತ್ತವೆ. ಈ ರೀತಿ ಕಿಡ್ನಿಗಳು ದೇಹದಲ್ಲಿ ಈ ರಾಸಾಯನಿಕಗಳ ಪ್ರಮಾಣವನ್ನು ನಿಯಂತ್ರಿಸುತ್ತವೆ. ಈ ರಾಸಾಯನಿಕಗಳು ಸರಿಯಾದ ಪ್ರಮಾಣದಲ್ಲಿ ಇದ್ದಾಗ ಮಾತ್ರ ದೇಹದ ಆರೋಗ್ಯ ಸರಿಯಾಗಿರುತ್ತದೆ. ಒಂದೊಮ್ಮೆ  ಈ ರಾಸಾಯನಿಕಗಳು ನಿರ್ದಿಷ್ಟ ಮಟ್ಟವನ್ನು ಮೀರಿದರೆ ದೇಹ ಬಾಧಿತವಾಗುತ್ತದೆ. 

ಕಿಡ್ನಿಗಳು ರೋಗಪೀಡಿತವಾದರೆ, ಅವು ರಕ್ತದಲ್ಲಿರುವ ತ್ಯಾಜ್ಯವನ್ನು ಮತ್ತು ದ್ರವಾಂಶಗಳನ್ನು ತೆಗೆಯಲು ಅಸಮರ್ಥವಾಗುತ್ತವೆ. ಇದೊಂದು ಗಂಭೀರ ಸ್ಥಿತಿಯಾಗಿದ್ದು ಇದರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದಾಗಿದೆ. ಪ್ರತಿ ವ್ಯಕ್ತಿಯೂ ತನ್ನ ದೇಹದ ತೂಕ, ಆಕಾರ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ವಿಭಿನ್ನ ಅಗತ್ಯಗಳನ್ನು ಹೊಂದಿರುತ್ತಾನೆ. ಈ ಎಲ್ಲ ಅಂಶಗಳು ಆತನ ಕಿಡ್ನಿಗಳ ಕ್ರಿಯೆಗಳ ಮೇಲೂ ಪ್ರಭಾವ ಬೀರುತ್ತವೆ ಅಥವಾ ಪ್ರಭಾವಿಸಲ್ಪಡುತ್ತವೆ. ಆದ್ದರಿಂದ ಕಿಡ್ನಿಗಳ ಸಮಸ್ಯೆಗಳಿಂದ ಬಳಲುವ ರೋಗಿಗಳು ಸೂಕ್ತವಾಗಿರುವ ಚಿಕಿತ್ಸೆ ಪಡೆದುಕೊಳ್ಳುವುದು ಮತ್ತು ಸಮಸ್ಯೆ ನಿವಾರಣೆ ದೃಷ್ಟಿಯಿಂದ ಅತ್ಯಂತ ಜಾಗರೂಕತೆಯಿಂದ ಸೂಕ್ತ ಆಹಾರವನ್ನು  ಸೇವಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ.  

ಕಿಡ್ನಿ ಸಮಸ್ಯೆಗಳು ಉಂಟಾಗದಂತೆ 
ರಕ್ಷಣಾತ್ಮಕ ಸಲಹೆಗಳು 

1. ರಕ್ತದೊತ್ತಡವನ್ನು ನಿಯಂತ್ರಿಸಿ
2. ಡಯಾಬಿಟಿಸ್‌ ಇದೆಯೇ? ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಿ
3. ನಿರಂತರ ವ್ಯಾಯಾಮ ಹಾಗೂ ಸಮತೂಕದ ಡಯೆಟ್‌ 
4. ನೀರು ಕುಡಿಯಿರಿ. ದ್ರವಾಂಶವುಳ್ಳ ಆಹಾರ ಹೆಚ್ಚು ಸೇವಿಸಿ
5. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಔಷಧವನ್ನು ಸೇವಿಸದಿರಿ
6. ನಂಜು ಉಂಟುಮಾಡಬಲ್ಲ ಹಾಗೂ ಘನ ಲೋಹಗಳಿಂದ ದೂರವಿರಿ

ಕಿಡ್ನಿ ರೋಗಿಗಳಿಗೆ ಸಲಹೆ
1. ಡಯಾಬಿಟಿಸ್‌ ಇದೆಯೇ? ನಿಮ್ಮ ರಕ್ತದಲ್ಲಿ ರುವ ಸಕ್ಕರೆ ಅಂಶದ ಬಗ್ಗೆ ನಿಗಾ ಇರಲಿ.
2. ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳಿ
3. ಪಥ್ಯಾಹರ: ವೈದ್ಯರು ಮತ್ತು ಡಯೆಟಿಷನ್‌ ಸಲಹೆ ಪಡೆಯಿರಿ
4. ಕಿಡ್ನಿ ಸಮಸ್ಯೆ, ಸಾಮಾನ್ಯ ಆರೋಗ್ಯದ ಅರಿವು ಹೆಚ್ಚಿಸಿಕೊಳ್ಳಿ
5. ಧೂಮಪಾನ ತ್ಯಜಿಸಿ, ನಿತ್ಯ ವ್ಯಾಯಾಮ ಮಾಡಿ
6. ಪೈನ್‌ ಕಿಲ್ಲರ್‌ಗಳನ್ನು ವರ್ಜಿಸಿ; ಯಾಕೆಂದರೆ ಅವು ನಿಮ್ಮ ಕಿಡ್ನಿಗಳನ್ನೇ ಕೊಲ್ಲುತ್ತವೆ!

Advertisement

ಕಿಡ್ನಿ  ಟ್ರಾನ್ಸ್‌ಪ್ಲಾಂಟೇಶನ್‌
ಕ್ರಾನಿಕ್‌ ಕಿಡ್ನಿ ಡಿಸೀಸ್‌ಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ ಒಂದು ಉತ್ತಮ ಚಿಕಿತ್ಸೆಯಾಗಿದೆ. ಅಂತಿಮ ಹಂತದ ಕಿಡ್ನಿ ಕಾಯಿಲೆ ಹೊಂದಿರುವವರಿಗೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. 

ಕ್ರಾನಿಕ್‌ ಕಿಡ್ನಿ ಡಿಸೀಸ್‌ನಿಂದ ಬಳಲುವವರು ಮತ್ತೆ ಸÖಜ ಸ್ಥಿತಿಗೆ ಬರಲು ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ ಉತ್ತಮ ಅವಕಾಶ ಒದಗಿಸುತ್ತದೆ.

ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ನ ಫ‌ಲಿತಾಂಶಗಳಲ್ಲಿ  ನಿರಂತರವಾಗಿ ಸುಧಾರಣೆಗಳು ಕಂಡು ಬರುತ್ತಿರುವುದು ಅಂತಿಮ ಹಂತದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಶಾಭಾವ ಮೂಡಿಸುತ್ತದೆ. 

ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವುದರ ಪುನರಾರ್ತನೆ ತಡೆ
1. ಹೆಚ್ಚು ನೀರು ಕುಡಿಯುವುದು: ಮೂತ್ರಪಿಂಡದ ಕಲ್ಲುಗಳು ಉಂಟಾಗುವುದರ ಪುನರಾವರ್ತನೆ ತಡೆಯಲು ನೀರನ್ನು ಹೆಚ್ಚಾಗಿ ಸೇವಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇದು ಎಲ್ಲ ರೋಗಿಗಳು ಮತ್ತೆ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದನ್ನು ತಡೆಯುವುದಕ್ಕಾಗಿ ನೀಡುವ ಸಾಮಾನ್ಯ ಸಲಹೆಯಾಗಿದೆ. ನೀರನ್ನು ಹೆಚ್ಚಾಗಿ ಸೇವಿಸುವುದು ಮೂತ್ರವನ್ನು ಡೈಲ್ಯೂಟ್‌ ಮಾಡುತ್ತದಲ್ಲದೆ ಕಲ್ಲುಗಳು ಉಂಟಾಗುವುದನ್ನು ತಡೆಯುತ್ತದೆ. ಆದ್ದರಿಂದ ದಿನಕ್ಕೆ 3ರಿಂದ 4 ಲೀಟರ್‌ ನೀರು ಕುಡಿಯುವುದು ಅಗತ್ಯವಾಗಿದೆ.
2. ಎಳನೀರು, ಬಾರ್ಲಿ ನೀರು ಮತ್ತು ಹಣ್ಣುಗಳ ಜ್ಯೂಸ್‌ ಸೇವನೆ ಹೆಚ್ಚಿಸಬೇಕು. ಇದರಿಂದಾಗಿ ಪ್ರತಿನಿತ್ಯ 2000 ಎಂಎಲ್‌ ಮೂತ್ರ ಹೊರಹೋಗುವಂತಾಗಬೇಕು.
3. ಕಡಿಮೆ ಉಪ್ಪು ಇರುವ ಆಹಾರವನ್ನು ಸೇವಿಸಬೇಕು
4. ಪ್ರಾಣಿಜನ್ಯ ಪ್ರೊಟೀನ್‌ನ್ನು ವರ್ಜಿಸಬೇಕು. ಮುಖ್ಯವಾಗಿ ಕೆಂಪು ಮಾಂಸ.
5. ಪೂರಕ ಆಹಾರದಲ್ಲಿ ಕ್ಯಾಲ್ಸಿಯಂ, ವಿಟಾಮಿನ್‌ ಸಿ, ಡಿ ಇರಬಾರದು.
6.  ಹಸಿರೆಲೆ ತರಕಾರಿ, ಕಚ್ಚಾ ತರಕಾರಿ, ಚಹಾ, ಕಾಫಿ, ಕಾಬೊìನೇಟೆಡ್‌ ಪಾನೀಯಗಳನ್ನು ದೂರ ಮಾಡುವುದು ಉತ್ತಮ.

ನಿಮ್ಮ ಮೂತ್ರಪಿಂಡಗಳು 
ಸುರಕ್ಷಿತವೇ?

ಡಯಾಬಿಟಿಸ್‌ ಹೊಂದಿರುವವರು, ಅಧಿಕ ರಕ್ತದೊತ್ತಡ ಹೊಂದಿರುವವರು ಮತ್ತು ಕೌಟುಂಬಿಕವಾಗಿ ಕಿಡ್ನಿ ಸಮಸ್ಯೆಗಳನ್ನು ಹೊಂದಿರುವವರು ಮೂತ್ರಪಿಂಡಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. 
– ಪ್ರತಿದಿನ ಮೂತ್ರಪಿಂಡಗಳು 200 ಲೀಟರ್‌ ರಕ್ತವನ್ನು ಶುದ್ಧಗೊಳಿಸುತ್ತವೆ. ಹಾಗಾಗಿ ಮೂತ್ರಪಿಂಡಗಳ ಕಾಳಜಿ ಇರಲಿ. 
– ಕ್ರಾನಿಕ್‌ ಕಿಡ್ನಿ ಡಿಸೀಜ್‌ ಸಾಮಾನ್ಯವಾದುದು, ಅಪಾಯ ಉಂಟು ಮಾಡಬಹುದಾದದ್ದು ಮತ್ತು ಚಿಕಿತ್ಸೆ ನೀಡಬಹುದಾಗಿದ್ದಾಗಿದೆ. ಆರಂಭಿಕ ಹಂತದಲ್ಲೇ ಕ್ರಾನಿಕ್‌ ಕಿಡ್ನಿ ಡಿಸೀಜ್‌ನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದಾಗಿದೆ. 
– ಕ್ರಾನಿಕ್‌ ಕಿಡ್ನಿ ಡಿಸೀಜ್‌ನಿಂದಾಗಿ ಹೃದಯಾಘಾತ ಸ್ಟ್ರೋಕ್‌ ಅಪಾಯ ಸಾಧ್ಯತೆಗಳು ಹೆಚ್ಚಿವೆ. 

ಹಾಗಾಗಿ ಮೂತ್ರಪಿಂಡಗಳು ಆರೋಗ್ಯಕರವಾಗಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. 

ಆಹಾರ ಯೋಜನೆ ಅಗತ್ಯ
ಕಿಡ್ನಿ ರೋಗಿ ಶಿಫಾರಸು ಮಾಡಲ್ಪಟ್ಟ ಪ್ರೊಟೀನನ್ನು ಹೊಂದುವಂತಾಗಲು ನಿತ್ಯವೂ ಅನುಸರಿ
ಸಬಹುದಾದ ಆಹಾರ ಯೋಜನೆಯನ್ನು ಹೊಂದಿರಬೇಕು. ಯಾಕೆಂದರಲ್ಲಿ ಇದರಲ್ಲಿ ಪೂರಕವಾ ಗಿರುವ ತಾಜಾ ಹಾಗೂ ಕಡಿಮೆ ಪೊಟ್ಯಾಶಿಯಂ ಇರುವ ಹಣ್ಣುಗಳು, ತರಕಾರಿಗಳು, ಜತೆಗೆ ಇವುಗಳಿಗೆ ಪರ್ಯಾಯವಾಗಿ ಕಡಿಮೆ ಉಪ್ಪು ಇರುವ ಸ್ನ್ಯಾಕ್ಸ್‌ (ತಿಂಡಿಗಳು) ಒಳಗೊಂಡಿರುತ್ತವೆ. ಇವು ರುಚಿಕರವೂ ಆಗಿರುತ್ತವೆ. ಜತೆಗೆ ಜೀವ ಸಂರಕ್ಷಿಸುವ ಆರೋಗ್ಯ ಲಾಭಗಳನ್ನು ಸಾಧಿಸುವಂಥವು ಆಗಿರುತ್ತವೆ. ಆದ್ದರಿಂದ ಆಹಾರ ಯೋಜನೆ ಅತಿಮುಖ್ಯ ಎನಿಸುತ್ತದೆ. 

ಮೂತ್ರಪಿಂಡದ ಕಲ್ಲುಗಳು:  ಸಾಮಾನ್ಯ ಸಲಹೆಗಳು
ನಿರ್ದಿಷ್ಟ ಖನಿಜಾಂಶವೊಂದರೊಂದಿಗೆ ಮೂತ್ರವು ಹೆಚ್ಚಾಗಿ ಸಂಪೂರಿತಗೊಂಡಿದ್ದರೂ ಇದರ ಹೆಚ್ಚಿನಂಶ ಮೂತ್ರದೊಂದಿಗೆ ಹೊರ ಹಾಕಲ್ಪಡದೆ ಉಳಿದುಕೊಳ್ಳುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುತ್ತವೆ. (ಉದಾ: ಶೀತಲೀಕೃತ ಚಹಾದಲ್ಲಿ ಮಿತಿಗೂ ಮೀರಿ ಸಕ್ಕರೆಯನ್ನು ಕರಗಿಸಲು ಪ್ರಯತ್ನಿಸುವ ಹಾಗೆ.) ಮೂತ್ರದಲ್ಲಿ ಹೊರಹಾಕಲ್ಪಡದೆ ಉಳಿದುಕೊಂಡ ಖನಿಜಾಂಶ ಹರಳುಗಳಾಗಿ ಮಾರ್ಪಟ್ಟು  ಕ್ರಮೇಣ ಒಗ್ಗೂಡಿ ಗಾತ್ರವೃದ್ಧಿಯಾಗಿ ಗಟ್ಟಿಯಾದ ಕಲ್ಲುಗಳಾಗಿ ಮಾರ್ಪಡುತ್ತವೆ. ಸಾಮಾನ್ಯವಾಗಿ ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದಲ್ಲೇ ಉಂಟಾಗುತ್ತವೆ. ಆದಾಗ್ಯೂ ಆ ಕಲ್ಲುಗಳು ಮೂತ್ರದ ಹರವಿನಲ್ಲಿ ಎಲ್ಲಿಯಾದರೂ ಉಂಟಾಗಬಹುದಾಗಿವೆ. ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದನ್ನು ತಡೆಯುವ ಚಿಕಿತ್ಸೆಯ ಮಹಣ್ತೀದ ಭಾಗವೇ ಮತ್ತೆ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದನ್ನು ತಡೆಯುವುದೇ ಆಗಿದೆ. 

ಡಾ| ಶಂಕರನ್‌ ಸುಂದರ್‌ ,   
ಕನ್ಸಲ್ಟೆಂಟ್‌ ನೆಫೊÅàಲಜಿಸ್ಟ್‌,
ಹೆಡ್‌: ಇಂಟರ್‌ನ್ಯಾಶನಲ್‌ ಟ್ರಾನ್ಸ್‌ಪ್ಲಾನೆಂಟ್‌ ಸರ್ವಿಸ್‌, ಮಣಿಪಾಲ್‌ ಆಸ್ಪತ್ರೆ, ಬೆಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next