ಬೆಂಗಳೂರು: ಗೌರಿ ಲಂಕೇಶ್ ಮನೆ ಮುಂಭಾಗದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಕೆಲ ದೃಶ್ಯಗಳು ಸೆರೆಯಾಗಿವೆ. ರಾತ್ರಿ ಸುಮಾರು 8.10 ನಿಮಿಷಕ್ಕೆ ಕಾರು ಮನೆ ಮುಂದೆ ನಿಲ್ಲುತ್ತದೆ. ಬಳಿಕ ಕಾರಿನ ಮೇಲೆ ಬೆಳಕು ಬೀಳುತ್ತದೆ. ಆದರೆ, ಯಾವ ಬೆಳಕು ಎಂಬುದು ಗೊತ್ತಾಗುವುದಿಲ್ಲ. ಇದಾದ ಕೆಲ ಕ್ಷಣಗಳಲ್ಲೇ ಬೆಳಕು ಮಾಯವಾಗುತ್ತದೆ. ಅನಂತರ ವ್ಯಕ್ತಿಯೊಬ್ಬ ನಾಲ್ಕೈದು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ.
ಕೃತ್ಯವೆಸಗಿದ ವ್ಯಕ್ತಿ ಹೆಲ್ಮೆಟ್ ಹಾಕಿದ್ದ. ದಾಳಿ ಬಳಿ ದುಷ್ಕರ್ಮಿ ಯಾವುದೇ ಗಾಬರಿಯಾಗದೆ ನಡೆದುಕೊಂಡು ಹೋಗುತ್ತಾನೆ. ಇದಾದ ಕ್ಷಣ ಹೊತ್ತಿನಲ್ಲೇ ಕಾರಿನ ಮೇಲೆ ಮತ್ತೂಂದು ಬೆಳಕು ಬೀಳುತ್ತದೆ. ಅದು ಬೈಕ್ ಅಥವಾ ಬೇರೆ ಯಾವ ವಾಹನದು ಎಂದು ತಿಳಿಯುವುದಿಲ್ಲ.
ಗುಂಡಿನ ಶಬ್ಧಕ್ಕೆ ಗೌರಿ ಅವರ ಮನೆ ಮುಂಭಾಗದ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಮತ್ತು ಮನೆಯ ಮಹಿಳೆಯೊಬ್ಬರು ಬಂದು ನೋಡಿ, ನೀರು ತರಲು ಹೋಗುತ್ತಾರೆ. ಯುವಕನೊಬ್ಬ ಕಾರಿನ ಸುತ್ತ ಹುಡುಕಾಟ ನಡೆಸುತ್ತಾನೆ. ಇದಿಷ್ಟು ಗೌರಿ ಲಂಕೇಶ್ ಅವರ ಮನೆ ಮುಂದೆ ಘಟನೆ ವೇಳೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಶೋಧಕ ಎಂ.ಎಂ.ಕಲುರ್ಗಿ, ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್ ಹತ್ಯೆಗೈದ ಗುಂಡಿನ ಗಾತ್ರಕ್ಕೂ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಗುಂಡಿನ ಗಾತ್ರಕ್ಕೂ ಸಾಮತ್ಯೆ ಕಂಡು ಬರುತ್ತಿದೆ. ಈ ಮೂವರನ್ನು ಕೊಂದಾಗ ಪತ್ತೆಯಾದ ಗುಂಡಿನ ಗಾತ್ರ 7.65 ಎಂಎಂ. ಕಂಟ್ರಿಮೇಡ್ ಪಿಸ್ತೂಲ್ ಅನ್ನು ಗೌರಿ ಲಂಕೇಶ್ ಹತ್ಯೆಗೂ ಬಳಸಿರುವ ಶಂಕೆಯಿದೆ. ವಿಧಿ ವಿಜ್ಞಾನ ಪರೀûಾ ಕೇಂದ್ರದ ವರದಿ ಬಂದ ನಂತರ ಎಲ್ಲದಕ್ಕೂ ಉತ್ತರ ದೊರೆಯಲಿದೆ ಎಂದು ಅವರು ವಿವರಿಸಿದರು.