Advertisement
ಇದೀಗ ಮತದಾನ ದಿನಾಂಕ ಸಮೀಪಿಸು ತ್ತಿರುವುದರಿಂದ ಬೂತ್ ಮಟ್ಟದಲ್ಲಿ ಆಗಿರುವ ಕಾರ್ಯಗಳು, ಮನೆ ಮನೆ ಸಂಪರ್ಕ, ಕಾರ್ಯಕರ್ತರ ಸಭೆ, ವಿವಿಧ ಸಮಾ ವೇಶಗಳನ್ನು ಆಧರಿಸಿ ಬರಬಹುದಾದ ಮತಗಳ ಮಾಹಿತಿ ಸಂಗ್ರಹಕ್ಕೆ ಎಲ್ಲ ಪಕ್ಷಗಳ ತಂತ್ರಗಾರಿಕೆಯ ತಂಡ ಮುಂದಾಗಿದೆ.
Related Articles
Advertisement
ಪ್ರತ್ಯೇಕ ವ್ಯವಸ್ಥೆಮತ ಲೆಕ್ಕಾಚಾರದ ಮಾಹಿತಿ ಸಂಗ್ರಹಕ್ಕೆ ಪ್ರತೀ ಪಕ್ಷದಲ್ಲೂ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಸದ್ಯ ಆನ್‌ಲೈನ್, ದೂರವಾಣಿ ಮೂಲಕ ಪ್ರತೀ ದಿನ ಸಂಜೆ ಬೂತ್ ಪ್ರಮುಖರಿಗೆ ಕರೆ ಮಾಡಿ ಅಥವಾ ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರ ಆಧಾರದಲ್ಲಿ ಯಾವ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಬೇಕು ಎಂಬುದನ್ನು ತಿಳಿಸಲಾಗುತ್ತದೆ. ಅದರಂತೆ ಅಂತಿಮ ತಂತ್ರಗಾರಿಕೆಯನ್ನು ರೂಪಿಸಲಾಗುತ್ತದೆ. ಆ ಮೂಲಕ ಮತ ಸೆಳೆಯುವ ಪ್ರಯತ್ನ ನಡೆಯುತ್ತದೆ. ತಮ್ಮ ಪಕ್ಷಕ್ಕೆ ಮತ ಬರುವುದು ಕಷ್ಟ ಎನ್ನುವ ಬೂತ್‌ಗಳಲ್ಲಿ ಅಂತಿಮ ತಂತ್ರಗಾರಿಕೆ ಎಲ್ಲ ಪಕ್ಷದಲ್ಲೂ ಇದೆ. ಮತದಾನಕ್ಕೂ ಮೊದಲ ದಿನ ರಾತ್ರಿ ವಿಶೇಷ ಅಸ್ತ್ರ ಬಳಸಿ ಮತ ಸೆಳೆಯುತ್ತಾರೆ. ಇದರಿಂದ ಮತ ಪ್ರಮಾಣ ಹೆಚ್ಚಾಗುವುದು ಉಂಟು ಅಥವಾ ಆ ಅಸ್ತ್ರ ಗುರಿ ಮುಟ್ಟದೆಯೂ ಇರಬಹುದು. ಆದರೆ ಅದರ ಪ್ರಯೋಗದಲ್ಲಿ ಯಾರು ಹಿಂದೆ ಬೀಳುವುದಿಲ್ಲ. ಹೊಸ ಮತದಾರರಿಗೆ ಪತ್ರ
ಪರಿಷ್ಕೃತ ಮತದಾರರ ಪಟ್ಟಿಯನ್ನು ನೀಡಲಾಗಿದೆ. ಅದರಂತೆ ಪಕ್ಷಗಳು ಹೊಸ ಮತದಾರರಿಗೆ ಅಭ್ಯರ್ಥಿ ಅಥವಾ ಪಕ್ಷದ ಹಿರಿಯ ಮುಖಂಡರ ಸಂದೇಶ ಆಧಾರಿತ ಪತ್ರವನ್ನು ಅಂಚೆ ಮೂಲಕ ರವಾನಿಸುತ್ತಿವೆ.ಕ್ಷೇತ್ರದ ಸಮಗ್ರ ಪ್ರಗತಿಗೆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಕೋರಲಾಗಿದೆ. - ರಾಜು ಖಾರ್ವಿ ಕೊಡೇರಿ