Advertisement
ಹಾಗೆಂದು ಇದು ಅಲ್ಲೆಲ್ಲೋ ಒಂದೇ ಮನೆಯಲ್ಲಿ ನಡೆದ ಘಟನೆ ಎಂದು ಸುಮ್ಮನಾಗಲು ಸಾಧ್ಯವೇ? ಖಂಡಿತ ಇಲ್ಲ, ವಾಸ್ತವವಾಗಿ ಇಂದು ದೇಶದ ಪ್ರತಿ ಯೊಂದು ಊರಿನ ಅನೇಕ ಮನೆಗಳಲ್ಲಿ ಹಿರಿಯರು ಈ ರೀತಿಯ ಹಿಂಸೆಯನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ಎದುರಿಸುತ್ತಲೇ ಇರುತ್ತಾರೆ. ಹೀಗೆಲ್ಲ ತಮ್ಮ ತಂದೆ ತಾಯಿಯನ್ನು ಥಳಿಸುವವರು ಮಾನಸಿಕರಾಗಿ ಅಸ್ವಸ್ಥರು, ಮೆಂಟಲ್‌ಗಳು ಎಂದುಬಿಡ ಲಾಗುತ್ತದೆ. ಆಧುನಿಕ ಲೋಕದ ಸಮಸ್ಯೆಯೆಂದರೆ ಅದು ಪ್ರತಿಯೊಂದಕ್ಕೂ ಒಂದು ಹೆಸರು ಕೊಡುವ ಗುಣ ಬೆಳೆಸಿಕೊಂಡುಬಿಟ್ಟಿದೆ ಎನ್ನುವುದು. ಆದರೆ ಬಹುತೇಕ ಸಂದರ್ಭದಲ್ಲಿ ಮಕ್ಕಳು ಮಾನಸಿಕವಾಗಿ ಸ್ವಸ್ಥರೇ ಆಗಿರುತ್ತಾರೆ, ಆದರೆ ಅವರಿಗೆ ತಮ್ಮ ತಂದೆ ಅಥವಾ ತಾಯಿಯು ಬೇಡವಾಗಿರುತ್ತಾರೆ. ಕೆಲವು ಬಾರಿ ಮಕ್ಕಳು ಆಸ್ತಿಗಾಗಿ ತಮ್ಮ ತಂದೆ-ತಾಯಿಯನ್ನು ಕೊಲೆಗೈದ ಸುದ್ದಿಯನ್ನೂ ನಾವು ಓದುತ್ತಿರುತ್ತೇವೆ. ಮೇಲೆ ಹೇಳಲಾದ ಘಟನೆಯಲ್ಲೂ ಆ ಮುದುಕಿಗೆ ಆಸ್ತಿಯಿತ್ತಂತೆ, ಆಕೆ ಸತ್ತರೆ ಆಸ್ತಿ ತನಗೆ ಬರುತ್ತದೆ ಎಂದು ಮಗಳಿಗೆ ಗೊತ್ತು. ಆದರೆ ಮುದುಕಿ ಸಾಯುತ್ತಿಲ್ಲ, ಮಗಳಿಗೆ ಅಸಹನೆ! ಅಮಾನವೀಯತೆಯ ಪರಮಾವಧಿಯಲ್ಲವೇ ಇದು? ಇದು ಕಾಲ ಚಕ್ರದ ಪ್ರಭಾವವೂ ಇರ ಬಹುದು. ಇಂದು ಕೂಡು ಕುಟುಂಬಗಳು ಮುರಿದು ಬೀಳುತ್ತಾ ಸಾಗಿವೆ. ನಗರಗಳಲ್ಲಂತೂ ಯಾರ ಮನೆಯಲ್ಲಿ ಏನಾಗುತ್ತಿದೆ ಎನ್ನುವುದೇ ತಿಳಿಯುವು ದಿಲ್ಲ. ತಿಳಿದರೂ ಒಬ್ಬರು ಇನ್ನೊಬ್ಬರ ವಿಷಯದಲ್ಲಿ ತಲೆ ಹಾಕಲು ಹೆದರುತ್ತಾರೆ. ಒಂದು ವೇಳೆ ಇಂಥ ಘಟನೆಗಳು ಹಳ್ಳಿಗಳಲ್ಲಿ ನಡೆದರೆ ಇಡೀ ಸಮಾಜವೇ ತಪ್ಪಿತಸ್ಥರಿಗೆ ಛೀಮಾರಿ ಹಾಕುತ್ತದೆ.
Related Articles
Advertisement
ಆದರೆ ಬಹಳಷ್ಟು ಜನರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಗೊತ್ತಿರುವವರೂ ಕೂಡ ಕುಟುಂಬದ ಮರ್ಯಾದೆ ಹೋಗುತ್ತದೆ ಎನ್ನುವ ಭಯದಲ್ಲೋ, ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುವ ಮಮತೆಯಿಂದಲೋ ಕಾನೂನಿನ ಸಹಾಯ ಪಡೆಯಲು ಮುಂದಾಗುವುದೇ ಇಲ್ಲ.ಮೇಲೆ ಹೇಳಲಾದ ಸಮೀಕ್ಷೆಯಲ್ಲಿ ಭಾಗವಹಿಸಿದ ವರಲ್ಲಿ 70 ಪ್ರತಿಶತ ವೃದ್ಧರು ತಮಗೆ ಪೊಲೀಸ್ ಸಹಾಯವಾಣಿಯ ಬಗ್ಗೆ ತಿಳಿದಿರುವುದಾಗಿ, ಆದರೆ ಮನೆಯ ವಾತಾವರಣವನ್ನು ಹಾಳು ಮಾಡಲು ಮನಸ್ಸಿಲ್ಲದ್ದರಿಂದ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ. ಇವರಲ್ಲಿ ಕೆಲವರಿಗೆ, ಎಲ್ಲಿ ತಾವು ಪೊಲೀಸರಿಗೆ ದೂರು ಕೊಟ್ಟುಬಿಟ್ಟರೆ ಮನೆಯಲ್ಲಿ ತಮಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಹೆಚ್ಚಾಗಿ ಬಿಡುತ್ತದೋ ಎನ್ನುವ ಭಯವೂ ಇದೆ! ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ 61 ಪ್ರತಿಶತ ವೃದ್ಧರು ತಮ್ಮ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಸೊಸೆಯೇ ಕಾರಣ ಎಂದು ಹೇಳಿದರು. ಹಾಗೆಂದು ಹಿಂಸೆ ನೀಡುವ ಮಗ-ಮಗಳ ಸಂಖ್ಯೆ ಕಡಿಮೆ ಇದೆ ಎಂದು ಸಮಾಧಾನಪಡಲು ಆದೀತೇನು? “ಹೆಲ್ಪೆಸ್ ಇಂಟನ್ಯಾìಷನಲ್ ನೆಟವರ್ಕ್ ಆಫ್ ಚಾರಿಟೀಸ್’ ಸುಮಾರು 96 ದೇಶಗಳಲ್ಲಿ ಈ ರೀತಿಯ ಸಮೀಕ್ಷೆ ನಡೆಸಿ ತಯ್ನಾರಿಸಿದ “ಗ್ಲೋಬಲ್ ಏಜ್ ವಾಚ್ ಇಂಡೆಕ್ಸ್ 2015′ “ಯಾವ ದೇಶಗಳಲ್ಲಿ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಿದೆಯೋ ಅಲ್ಲಿ ವೃದ್ಧರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು’ ಎಂದು ಹೇಳಿರುವುದನ್ನು ನಾವು ಗಮನಿಸಲೇಬೇಕು. ಇಲ್ಲಿ ನಾನು ಹೇಳಲು ಹೊರಟಿರುವುದೇನೆಂದರೆ ಭಾರತದಲ್ಲಿ ಹಿರಿಯರ ಸುರಕ್ಷೆ, ಅವರ ದೇಖರೇಖೀಯ ವಿಷಯದಲ್ಲಿ ಬಹಳ ಕೆಟ್ಟ ವಾತಾವರಣ ಸೃಷ್ಟಿ ಆಗುತ್ತಿದೆ. ಕಾನೂನು ಇದೆಯಾದರೂ ಜನರು ಹೋಗಿ ಬಾಗಿಲುತಟ್ಟುವವರೆಗೂ ಅದು ಕೆಲಸ ಮಾಡುವುದಿಲ್ಲ. ಯಾರಾದರೂ ತಮ್ಮ ಮನೆಯಲ್ಲಿ ಹಿರಿಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂದರೆ ಅವರಿಗೆ ಶಿಕ್ಷೆಯಾಗಲೇಬೇಕು. ಕನಿಷ್ಠಪಕ್ಷ ಶಿಕ್ಷೆಗಾದರೂ ಹೆದರಿ ಇವರು ಸುಮ್ಮನಾಗಬಹುದು. ಹಿರಿಯರೂ ಕೂಡ ತಮ್ಮ ಮನೋಧೋರಣೆಯನ್ನು ಬದಲಿಸಿಕೊಳ್ಳಲೇ ಬೇಕು. ನಿಮಗೆ ಹಿಂಸೆ ನೀಡುವ ಮಕ್ಕಳ ಮೇಲೆ ನಿಮ್ಮದೆಂಥ ಪ್ರೀತಿ? ಯಾಕೆ ವ್ಯಾಮೋಹ? ಆದರೆ ಈ ರೀತಿಯ ಚಿಂತನೆ ಹಿರಿಯರಲ್ಲಿ ಬರುವುದು ಅಷ್ಟು ಸುಲಭವಲ್ಲ ಎನ್ನುವುದು ನಮಗೆ ಗೊತ್ತಿದೆ. ಆದರೆ ಒಂದು ಸಮಾಜವಾಗಿ ನಾವು ಈ ಹಿಂಸಾ ಚಕ್ರವನ್ನು ನಿಲ್ಲಿಸಲು ಎಲ್ಲಿಂದಲಾದರೂ ಪ್ರಯತ್ನ ಆರಂಭಿಸಲೇಬೇಕಲ್ಲವೇ? (ಕೃಪೆ: ಅಮರ್ ಉಜಾಲಾ)
ಅವಧೇಶ್ ಕುಮಾರ್