Advertisement

ಅಡಿಲೇಡ್ ನಲ್ಲಿ ಹೀನಾಯ ಸೋಲು: ಕೋಚ್‌ ರವಿ ಶಾಸ್ತ್ರಿ ತಲೆದಂಡಕ್ಕೆ ಒತ್ತಾಯ

03:38 PM Dec 22, 2020 | keerthan |

ನವದೆಹಲಿ: ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ತನ್ನ ಕನಿಷ್ಠ ಮೊತ್ತ ಪೇರಿಸಿ ಅಡಿಲೇಡ್‌ನ‌ಲ್ಲಿ ಹೀನಾಯ ಸೋಲು ಕಂಡು ಎಲ್ಲರ ಆಕ್ರೋಶಕ್ಕೆ ತುತ್ತಾಗಿದೆ. ಇದೇ ವೇಳೆ ಮುಖ್ಯ ಕೋಚ್‌ ರವಿ ಶಾಸ್ತ್ರಿ ಅವರ ತಲೆದಂಡಕ್ಕೆ ಕ್ರಿಕೆಟ್‌ ಅಭಿಮಾನಿಗಳು ಆಗ್ರಹಿಸಿದ್ದಾರೆ.

Advertisement

ಭಾರತ ತಂಡದ ಆಡುವ ಬಳಗದ ಆಯ್ಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಟೀಮ್‌ ಇಂಡಿಯ ಅಭಿಮಾನಿಗಳು, ರವಿ ಶಾಸ್ತ್ರಿ ರಾಜೀನಾಮೆ ನೀಡಬೇಕು ಅಥವಾ ಬಿಸಿಸಿಐ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೋಚ್‌ ಕೂಡ ಹೊಣೆ: ತಂಡದ ಸೋಲಿಗೆ ಕೇವಲ ಆಟಗಾರರು ಮಾತ್ರವಲ್ಲ, ಕೋಚ್‌ ರವಿ ಶಾಸ್ತ್ರಿ ಕೂಡ ಹೊಣೆಗಾರರಾಗುತ್ತಾರೆ. ಕಳಪೆ ಫಾರ್ಮ್ ನಲ್ಲಿದ್ದ ಪೃಥ್ವಿ ಶಾ ಅವರನ್ನು ಆಡಿಸಿದ್ದು ಎಷ್ಟರ ಮಟ್ಟಿಗೆ ಸರಿ? ರವಿ ಶಾಸ್ತ್ರಿ ಅವರನ್ನು ಕೂಡಲೇ ತಂಡದಿಂದ ಹೊರಹಾಕಬೇಕು. ಈ ವಿಚಾರವಾಗಿ ವಿರಾಟ್‌ ಕೊಹ್ಲಿ ಶಾಸ್ತ್ರಿಗೆ ಬೆಂಬಲವಾಗಿ ನಿಲ್ಲಬಾರದು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮುಂದಿನ ಪಂದ್ಯ ಗೆಲ್ಲಲು ಹೀಗೆ ಮಾಡು! ಅಜಿಂಕ್ಯ ರಹಾನೆಗೆ ಜಾಫರ್‌ ರಹಸ್ಯ ಸಂದೇಶ!

2019ರಲ್ಲಿಭಾರತ ತಂಡದ ಮುಖ್ಯ ಕೋಚ್‌ ಆಗಿ ಮರು ನೇಮಕಗೊಂಡಿದ್ದ ರವಿ ಶಾಸ್ತ್ರಿ, 2021ರ ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ವರೆಗೆ ಅಧಿಕಾರಾವಧಿ ಹೊಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next