Advertisement

ಐಯೋಡಿನ್‌ಯುಕ್ತ ಉಪ್ಪಿನ ಗುಣಮಟ್ಟ ಹೇಗಿದೆ ಗೊತ್ತಾ?

03:45 AM Feb 20, 2017 | Harsha Rao |

ಭಾರತದ ಎಲ್ಲರಿಗೂ ಐಯೋಡಿನ್‌ ಅವಶ್ಯಕತೆ ಇಲ್ಲವೆಂದು ಒಂದು ವರ್ಗ ಹೇಳಿದರೆ, ಅದನ್ನು ಕಡ್ಡಾಯವಾಗಿ ನೀಡಲೇ ಬೇಕೆಂಬುದು ಇನ್ನೊಂದು ವರ್ಗದವಾದ. ಈ ಎಲ್ಲ ವಿವಾದಗಳ ನಡುವೆ ಐಯೋಡಿನ್‌ ಯುಕ್ತ ಉಪ್ಪನ್ನು ಖಡ್ಡಾಯಗೊಳಿಸಲಾಗಿದೆ. ಐಯೋಡಿನ್‌ ಎಲ್ಲದ ಉಪ್ಪು ಈಗ ಮಾರುಕಟ್ಟೆಯಲ್ಲಿ ದುರ್ಲಭ. ಆದರೆ ನೀವು ದುಬಾರಿ ಹಣಕೊಟ್ಟು ಖರೀದಿಸುವ ಐಯೋಡಿನ್‌ ಯುಕ್ತ ಉಪ್ಪಿನಲ್ಲಿರುವ ಅಯೋಡಿನ್‌ ಪ್ರಮಾಣ ಎಷ್ಟು ಎಂಬುದರ ಬಗ್ಗೆ ದೆಹಲಿಯ ವಾಯ್ಸ ಎಂಬ ಗ್ರಾಹಕ ಸಂಸ್ಥೆ ಪರೀಕ್ಷೆ ನಡೆಸಿದ್ದು ಅದರ ವರದಿ ಪ್ರಕಟವಾಗಿದೆ.

Advertisement

ದಿನನಿತ್ಯ ಬಳಸುವ ಉಪ್ಪಿಗೆ ಐಯೋಡಿನ್‌ ಸೇರಿಸುವ ವಿಷಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಭಾರತದ ಎಲ್ಲರಿಗೂ ಐಯೋಡಿನ್‌ ಅವಶ್ಯಕತೆ ಇಲ್ಲವೆಂದು ಒಂದು ವರ್ಗ ಹೇಳಿದರೆ, ಅದನ್ನು ಕಡ್ಡಾಯವಾಗಿ ನೀಡಲೇ ಬೇಕೆಂಬುದು ಇನ್ನೊಂದು ವರ್ಗದವಾದ. ಈ ಎಲ್ಲ ವಿವಾದಗಳ ನಡುವೆ ಐಯೋಡಿನ್‌ಯುಕ್ತ ಉಪ್ಪನ್ನು ಖಡ್ಡಾಯಗೊಳಿಸಲಾಗಿದೆ.
ಐಯೋಡಿನ್‌ ಎಲ್ಲದ ಉಪ್ಪು ಈಗ ಮಾರುಕಟ್ಟೆಯಲ್ಲಿ ದುರ್ಲಭ. ಆದರೆ ನೀವು ದುಬಾರಿ ಹಣ ಕೊಟ್ಟು ಖರೀದಿಸುವ ಐಯೋಡಿನ್‌ ಯುಕ್ತ ಉಪ್ಪಿನಲ್ಲಿರುವ ಅಯೋಡಿನ್‌ ಪ್ರಮಾಣ ಎಷ್ಟು ಎಂಬುದರ ಬಗ್ಗೆ ದೆಹಲಿಯ ವಾಯ್ಸ ಎಂಬ ಗ್ರಾಹಕ ಸಂಸ್ಥೆ ಪರೀಕ್ಷೆ ನಡೆಸಿದ್ದು ಅದರ ವರದಿ ಪ್ರಕಟವಾಗಿದೆ.

ವಾಯ್ಸ ಸಂಸ್ಥೆಯು 14 ಬ್ರಾಂಡ್‌ ಐಯೋಡೈಸ್ಡ್ ಉಪ್ಪನ್ನು ಪರೀಕ್ಷಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಫ್ಎಸ್‌ಎಸ್‌ಎಐ ಪ್ರಕಟಿಸಿರುವ ನಿಯಮ ಮತ್ತು ಭಾರತೀಯ ಮಾನಕ ಬ್ಯೂರೋ ನಿಗದಿಪಡಿಸಿರುವ ನಿಯಮಾನುಸಾರ ಈ ಬ್ರಾಂಡ್‌ಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ, ಎನ್‌ಎಬಿಎಲ್‌ ಪರೀûಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ. ಉಪ್ಪಿನಲ್ಲಿ ಸೋಡಿಯಂ ಮತ್ತು ಐಯೋಡಿನ್‌ ಪ್ರಮಾಣ ಎಷ್ಟಿದೆ ಎಂಬುದನ್ನು ಪರೀಕ್ಷಿಸಲಾಗಿದೆ.
ಜೊತೆಗೆ ಉಪ್ಪಿನ ತೇವಾಂಶ, ಕರಗುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಅದರಲ್ಲಿ ಲೆಡ್‌ ಸೀಸನ ಪ್ರಮಾಣ ಎಷ್ಟಿದೆ ಎಂಬುದನ್ನು ಸಹ ಪರೀಕ್ಷಿಸಲಾಗಿದೆ. ನಿಯಮಾನುಸಾರ ಐಯೋಡೈಸ್ಡ್ ಉಪ್ಪಿನಲ್ಲಿ ಶೇ. 97ರಷ್ಟು ಸೋಡಿಯಂ ಅಥವಾ ಸೋಡಿಯಂ ಕ್ಲೋರೈಡ್‌ ಇರಬೇಕು. ಪರೀಕ್ಷೆಯ ಪ್ರಕಾರ ಫ್ರೆಷ್‌ ಅಂಡ್‌ ಪ್ಯೂರ್‌ ಬ್ರಾಂಡ್‌ ಐಎಸ್‌ಐ ಚಿಹ್ನೆಯನ್ನು ಹೊಂದಿದ್ದರೂ ನಿಯಮಕ್ಕೆ ಅನುಸಾರವಾಗಿ ಇರಲಿಲ್ಲ. ಟಾಟಾ ಮತ್ತು ನಿರ್ಮಾ ಬ್ರಾಂಡ್‌ನ‌ಲ್ಲಿ ಅಗತ್ಯಕ್ಕೆ ತಕ್ಕಂತೆ ಸೋಡಿಯಂ ಇದ್ದದ್ದು ಪರೀಕ್ಷೆಯಿಂದ ಸ್ಥಿರಪಟ್ಟಿದೆ. 

ಸಫೋಲಾಲೆಸ್‌ ಸೋಡಿಯಂ ಬ್ರಾಂಡ್‌ನ‌ಲ್ಲಿ ಶೇ. 36.77 ಸೋಡಿಯಂ ಇದ್ದರೂ ಶೇ. 35.3 ಸೋಡಿಯಂ ಇದೆ ಎಂದು ಅದರ ಮೇಲಿನ ಲೇಬಲ್‌ ಹೇಳುತ್ತದೆ. ಟಾಟಾ ಲೋ ಸೋಡಿಯಂ ಬ್ರಾಂಡ್‌ನ‌ಲ್ಲಿ ಶೇಕಡಾ 33.2 ಸೋಡಿಯಂ ಇದೆ ಎಂದು ಲೇಬಲ್‌ ಹೇಳಿದರೂ, ಅದಲ್ಲಿದ್ದ ಸೋಡಿಯಂ ಅಂಶ ಶೇ. 37.38. ಐಯೋಡಿನ್‌ ಉಪ್ಪಿನಲ್ಲಿ ಇರಬೇಕಾದ
ಐಯೋಡಿನ್‌ ಅಂಶವನ್ನು ಕಾನೂನು ಸ್ಪಷ್ಟಪಡಿಸಿದೆ. ಬಳಕೆದಾರರು ಉಪ್ಪನ್ನು ಸೇವಿಸುವ ಹಂತದಲ್ಲಿ ಐಯೋಡಿನ್‌ 15 ಪಿಪಿಎಂ ಗಿಂತ ಕಡಿಮೆ ಇರಬಾರದು. ತಯಾರಿಕೆಯ ಹಂತದಲ್ಲಿ ಅದರ ಪ್ರಮಾಣ ಶೇಕಡಾ 30 ಪಿಪಿಎಂ. ಟಾಟಾ ಸಾಲ್ಟ್ ಪ್ಲಸ್‌ ಬ್ರಾಂಡ್‌ ಹೊರತುಪಡಿಸಿ ಪರೀಕ್ಷೆಗೆ ಒಳಪಡಿಸಿದ ಎಲ್ಲಾ 13 ಬ್ರಾಂಡ್‌ಗಳಲ್ಲಿ 15 ಪಿಪಿಎಂ ಇದ್ದದ್ದು
ಕಂಡುಬಂದಿದೆ. ಟಾಟಾ ಬ್ರಾಂಡ್‌ನ‌ಲ್ಲಿ 14.83 ಪಿಪಿಎಂ ಇತ್ತೆಂದು ವರದಿ ಹೇಳುತ್ತದೆ. ನೀರಿನಲ್ಲಿ ಬೆರೆಯುವ ಖನಿಜ ಉಪ್ಪು ಮಿನರಲ್‌ ಸಾಲ್ಟ್ ಶೇಕಡಾ 1 ಕ್ಕಿಂತ ಹೆಚ್ಚಾಗಿರಬಾರದೆಂದು ಐಎಸ್‌ಐ ನಿಯಮ ಹೇಳುತ್ತದೆ. ಪರೀಕ್ಷೆ ಪ್ರಕಾರ ಸಫೋಲಾ ಲೆಸ್‌ ಸೋಡಿಯಂ ಬ್ರಾಂಡ್‌ನ‌ಲ್ಲಿ ಶೇ. 1.14ರಷ್ಟು ಇತ್ತೆಂದು ತಿಳಿದುಬಂದಿದೆ. ಉಳಿದ ಎಲ್ಲಾ ಬ್ರಾಂಡ್‌
ಗಳೂ ನಿಯಮಕ್ಕೆ ಅನುಸಾರವಾಗಿದೆ.

ಉಪ್ಪಿನಲ್ಲಿ ತೇವಾಂಶ ಮಾಯಿಶ್ಚರ್‌ ಎಷ್ಟು ಕಡಿಮೆ ಇರುತ್ತದೋ ಅಷ್ಟೂ ಉತ್ತಮ. ಕಾರಣ ಉಪ್ಪನ್ನು ಹೆಚ್ಚು ದಿನ ಉಪಯೋಗಿಸಬಹುದು. ಅದರ ಸೆಲ್ಪ್ಲೈಫ್ ಹೆಚ್ಚಾಗುತ್ತದೆ. ಎಫ್ಎಸ್‌ಎಸ್‌ ನಿಯಮದ ಪ್ರಕಾರ ಉಪ್ಪಿನ ತೇವಾಂಶ ಶೇಕಡಾ 6ಕ್ಕಿಂತ ಹೆಚ್ಚಾಗಿರಬಾರದು. ಪರೀಕ್ಷೆಯಲ್ಲಿ ಕಂಡು ಬಂದ ಅಂಶದ ಪ್ರಕಾರ ಫ್ರೆಷ್‌ ಅಂಡ್‌ ಪ್ಯೂರ್‌ ಮತ್ತು ಪತಂಜಲಿ ಐಎಸ್‌ಐ ಮಾನಕ ಹೊಂದಿದ್ದರೂ ಪರೀಕ್ಷೆಯಲ್ಲಿ ಪಾಸ್‌ ಆಗಿಲ್ಲ. ಟಾಟಾ ಈ ಶಕ್ತಿ ಮತ್ತು ಟಾಟಾ ಬ್ರಾಂಡ್‌ಗಳು ಸಹ ಪರೀಕ್ಷೆಯಲ್ಲಿ ಪೇಲ್‌ ಆಗಿದೆ. ಅದೃಷ್ಟವಶಾತ್‌ ಯಾವ ಬ್ರಾಂಡ್‌ ಉಪ್ಪಿನಲ್ಲೂ ಕಲಬೆರಕೆ ಕಂಡುಬಂದಿಲ್ಲ.
ಉಪ್ಪಿನಲ್ಲಿ ಕ್ಯಾಲ್‌ಷಿಯಂ ಪ್ರಮಾಣ ಎಷ್ಟಿರ ಬೇಕೆಂದು ಐಎಸ್‌ಐ ನಿಗದಿಪಡಿಸಿದೆ. ಅದರ ಪ್ರಕಾರ ಉಪ್ಪಿನಲ್ಲಿ ಶೇಕಡಾ 0.15ರಷ್ಟು ಕ್ಯಾಲ್‌ಷಿಯಂ ಇರಬೇಕು. ಎಲ್ಲಾ 14 ಬ್ರಾಂಡ್‌ಗಳಲ್ಲೂ ಈ ಪ್ರಮಾಣದಲ್ಲಿ ಕ್ಯಾಲ್‌ಷಿಯಂ ಇದ್ದದ್ದು ಕಂಡು
ಬಂದಿದೆ. ಇದೆ ರೀತಿ ಉಪ್ಪಿನಲ್ಲಿರಬೇಕಾದ ಮ್ಯಾಗ್ನಿàಶಿಯಂ ಅಂಶ ಶೇಕಡಾ 0.10ರಷ್ಟು ಇರಬೇಕು. ಟಾಟಾ ಬ್ರಾಂಡ್‌ ಹೊರತುಪಡಿಸಿ ಎಲ್ಲಾ ಬ್ರಾಂಡ್‌ ಗಳಲ್ಲಿ ಈ ಪ್ರಮಾಣದ ಮ್ಯಾಗ್ನಿàಶಿಯಂ ಇತ್ತು. ಎಲ್ಲಾ 14 ಬ್ರಾಂಡ್‌ಗಳೂ ಮಾಹಿತಿ ನೀಡುವ ವಿಷಯದಲ್ಲಿ ಪಾಸ್‌ ಆಗಿದೆ. ನಿಯಮಾನುಸಾರ ಯಾವ ಮಾಹಿತಿ ನೀಡಬೇಕೋ ಅದೆಲ್ಲವನ್ನೂ ಮುದ್ರಿಸಿದೆ
ಹಾಗೂ ಪ್ಯಾಕೆಟ್‌ ಮೇಲೆ ಮುದ್ರಿಸಿರುವ ತೂಕವೂ ಸರಿಯಾಗಿದೆ.

Advertisement

– ವೈ.ಜಿ.ಮುರಳೀಧರನ್‌,
ಸದಸ್ಯರು: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತು, ಭಾರತ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next