Advertisement
1. ಕಟ್ಟುನಿಟ್ಟಾದ ತಿಂಗಳ ಬಜೆಟ್ ನಮಗೆ ನಾವೇ ಬಜೆಟ್ ತಯಾರಿಸಿಟ್ಟುಕೊಂಡಿದ್ದರೂ ಕೆಲವೊಂದು ವೇಳೆ ವಿನಾಯಿತಿ ಕೊಟ್ಟುಕೊಂಡುಬಿಡುತ್ತೇವೆ. ಆದರೆ ಕೋಟ್ಯಧಿಪತಿಗಳು ಮಾತ್ರ ಅಷ್ಟು ಸುಲಭವಾಗಿ ಬಜೆಟ್‌ಅನ್ನು ಮೀರುವುದಿಲ್ಲ. ಎಂಥಾ ಪರಿಸ್ಥಿತಿ ಬಂದರೂ ತಾವೇ ನಿಗದಿ ಪಡಿಸಿದ ಬಜೆಟ್ ಒಳಗೇ ತಿಂಗಳನ್ನು ತಳ್ಳುತ್ತಾರೆ.
ಗರ್ಲ್ಫ್ರೆಂಡ್‌ನ ಸಿನಿಮಾಗೆ ಕರಕೊಂಡು ಹೋಗುವಾಗಲೋ, ಇಲ್ಲಾ ಬಾಯ್‌ಫ್ರೆಂಡ್ ಬರ್ತ್‌ಡೇ ಗೆ ಗಿಫ್ಟ್ ಕೊಡುವಾಗಲೋ ಅಥವಾ ಸ್ನೇಹಿತರಿಗೆ ಟ್ರೀಟ್ ಕೊಡಬೇಕಾಗಿ ಬಂದಾಗಲೋ ದುಡ್ಡಿಗಾಗಿ ಪರ್ಸು ತಡಕಾಡಬೇಕಾದ ಸ್ಥಿತಿಯಿರುತ್ತದೆ. ಇಂಥಾ ಸಂದರ್ಭಗಳಲ್ಲಿ ಸಹಾಯ ಮಾಡಲೆಂದೇ ಆಪತಾºಂಧವ ಸ್ನೇಹಿತರಿರುತ್ತಾರೆ. ಅವರಿಂದ ಸಾಲ ಪಡೆಯುತ್ತೇವೆ. ಆದರೆ ಕೋಟ್ಯಧಿಪತಿಗಳು ದೈನಂದಿನ ಅಗತ್ಯಗಳಿಗೆ ಸಾಲ ಮಾಡುವ ಪರಿಸ್ಥಿತಿ ತಂದುಕೊಳ್ಳುವುದೇ ಇಲ್ಲ. 3. ಟೈಮ್‌ಪಾಸ್‌ಗೆ ಓದಲ್ಲ
ನಮ್ಮಲ್ಲಿ ಕೆಲವರು ಬೆಳಿಗ್ಗೆ ಕಾಫಿ ಸಿಪ್ ಹೀರುವಾಗ, ಕ್ಲಿನಿಕ್‌ಗಳಲ್ಲಿ ವೈದ್ಯರಿಗೆ ಕಾಯುವಾಗ ಟೈಮ್‌ಪಾಸ್ ಮಾಡಲು ಪತ್ರಿಕೆಯನ್ನೋ, ಪುಸ್ತಕವನ್ನೋ ಓದುತ್ತಾರೆ. ಆದರೆ, ಕೋಟ್ಯಧಿಪತಿಗಳು ಟೈಮ್‌ಪಾಸ್‌ಗೆಂದು ಏನನ್ನೂ ಓದುವುದಿಲ್ಲ. ಪತ್ರಿಕೆ ಓದುವಾಗ ತಮ್ಮ ಬದುಕಿಗೆ ಉಪಯೋಗವಾಗುವಂಥದ್ದು ಏನಿದೆ ಎಂದೇ ಓದುತ್ತಿರುತ್ತಾರೆ. ಅದರಲ್ಲಿ ಬರೆದಿರುವುದನ್ನು ಪಾಲಿಸುತ್ತಾರೆ. ಅದರಲ್ಲಿನ ಮಾಹಿತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾರೆ.
Related Articles
ಅವರು ತುಂಬಾ ಶಾಂತಚಿತ್ತರಾಗಿರುತ್ತಾರೆ. ಎಂಥ ಆಘಾತಕಾರಿ ಸುದ್ದಿಗಳೂ ಅವರನ್ನು ಅಷ್ಟು ಸುಲಭಕ್ಕೆ ಉದ್ವಿಗ್ನರನ್ನಾಗಿಸುವುದಿಲ್ಲ. ಇದರಿಂದಾಗಿ ಬಂದದ್ದೆಲ್ಲವನ್ನೂ ಎದುರಿಸುವ ಛಾತಿ ಅವರಲ್ಲಿ ಬೆಳೆಯುತ್ತದೆ. ಮನದಲ್ಲಿ ಶಾಂತತೆಯಿದ್ದಾಗ, ಬಂದ ಸವಾಲನ್ನು ಹೇಗೆ ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದೂ ತಿಳಿದುಹೋಗುತ್ತದೆ.
Advertisement
5. ಹಲವು ಮೂಲಗಳಿಂದಅವರ ಆದಾಯದ ಮೂಲ ಒಂದೇ ಇರುವುದಿಲ್ಲ. ಏಕಕಾಲಕ್ಕೆ ಅವರಿಗೆ ವಿವಿಧ ಮೂಲಗಳಿಂದ ಹಣ ಬರುತ್ತಲೇ ಇರುತ್ತದೆ. ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಇದು ಸಾಧ್ಯವಾಗುತ್ತದೆ. ಇದರಿಂದ ಅವರ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ. ಆರ್ಥಿಕ ಸಮಸ್ಯೆಗಳು ಅವರನ್ನು ಕಾಡುವುದಿಲ್ಲ. ಯಾವುದೋ ಒಂದು ಕ್ಷೇತ್ರದಲ್ಲಿ ನಷ್ಟವಾದರೂ ಭರಿಸುವ ಶಕ್ತಿ ಇರುತ್ತದೆ. ಲಾಭ ಬಂತೆಂದರೆ ಅದನ್ನು ಕೊಳೆಯಲು ಬಿಡದೆ ಇನ್ನೆಲ್ಲಿಯೋ ಹೂಡುತ್ತಾರೆ. 6. ತಮಗೆ ತಾವೇ ಬಾಸ್
ಅವರು ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದನ್ನು ಇಷ್ಟಪಡುವುದಿಲ್ಲ. ತಮಗೆ ಬಾಸ್ ಅಂತ ಇದ್ದರೆ ಅದು ತಾವೇ ಆಗಿರಬೇಕೆಂದು ಅವರು ಬಯಸುತ್ತಾರೆ. ಹೀಗಾಗಿ ಅವರು ಸ್ವಂತ ಉದ್ದಿಮೆಯನ್ನು ಶುರುಮಾಡುತ್ತಾರೆ. ಎಷ್ಟೇ ಕಷ್ಟ ಬಂದರೂ ಏಕಾಂಗಿಯಾಗಿ ಎದುರಿಸುತ್ತಾರೆ. ನಷ್ಟವಾದರೂ ಅವರಿಗೆ, ಯಶಸ್ಸು ಸಿಕ್ಕರೂ ಅವರಿಗೆ. ಅಂಥದ್ದೊಂದು ರಿಸ್ಕ್ ತೆಗೆದುಕೊಳ್ಳಲು ಅವರು ಸಿದ್ಧರಿರುತ್ತಾರೆ. ಸಾಮಾನ್ಯವಾಗಿ ಒಬ್ಬ ಕೋಟ್ಯಧಿಪತಿಯನ್ನು ಕಂಡಾಗ ನಮಗೆ ಅವನು ಸ್ಥಾಪಿಸಿದ ಹಲವು ಸಂಸ್ಥೆಗಳು ಕಣ್ಣಿಗೆ ಬೀಳುತ್ತವೆ. ಆದರೆ, ಆ ಸಂಸ್ಥೆಗಳನ್ನು ಶುರುಮಾಡುವುದಕ್ಕೆ ಮುನ್ನ ನಷ್ಟ ಅನುಭವಿಸಿ ಮುಚ್ಚಿದ ಸಂಸ್ಥೆಗಳು ಮಾತ್ರ ಯಾರ ಗಮನಕ್ಕೂ ಬರುವುದೇ ಇಲ್ಲ. ಅವರ ಒಂದು ಯಶಸ್ಸಿನ ಹಿಂದೆ ಹಲವು ವಿಫಲ ಪ್ರಯತ್ನಗಳಿರುತ್ತವೆ. 7. ಶ್ರೀಮಂತರಂತೆ ಕಾಣೋದಿಲ್ಲ
ಪತ್ರಿಕೆಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಸರಳವಾಗಿ ಬದುಕುವ ಶ್ರೀಮಂತರ ಕುರಿತು ವರದಿಗಳನ್ನು ಓದಿದ್ದು, ನೋಡಿದ್ದು ನೆನಪಿದೆಯಾ? ವಿಷಯವೇನೆಂದರೆ ಕೋಟ್ಯಧಿಪತಿಗಳು ಯಾವತ್ತೂ ತಾವು ಕೋಟ್ಯಧಿಪತಿಗಳೆಂದು ತೋರಿಸಿಕೊಳ್ಳಲು ಇಚ್ಚಿಸುವುದಿಲ್ಲ. ಅವರು ಸರಳ ಬದುಕನ್ನು ಬದುಕಲು ಇಷ್ಟಪಡುತ್ತಾರೆ. ಈ ಮಾತಿಗೆ ಅಪವಾದವೆಂಬಂತೆ ಶೋಕಿಯಾಗಿ ಬದುಕುತ್ತಿರುವವರು ನಮ್ಮ ನಡುವೆ ಇರಬಹುದು. ಆದರೆ, ಎಲ್ಲರೂ ಹಾಗಿಲ್ಲ. ಮನೀಶಾ