Advertisement

ಡಿಜಿಟಲ್ ಸಹಿ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ !

08:32 PM Nov 29, 2020 | Adarsha |

ನವದೆಹಲಿ: ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಶರವೇಗದ ಬೆಳವಣಿಗೆ ಕಾಣುತ್ತಿದೆ. ಅದರಲ್ಲೂ ಕೋವಿಡ್ ಆರಂಭವಾದ ಮೇಲಂತೂ ಬ್ಯಾಂಕ್ ವಹಿವಾಟು ಸೇರಿದಂತೆ, ಇತರ ಅನೇಕ  ಕಾರ್ಯಗಳು ಆನ್ ಲೈನ್ ಮೂಲಕವೇ ನಡೆಯುತ್ತಿದೆ. ಆನ್ ಲೈನ್ ವಹಿವಾಟು ಸಂದರ್ಭದಲ್ಲಿ ಡಿಜಿಟಲ್ ಸಹಿ ಹಾಕುವುದನ್ನು ನೀವು ಹಲವು ಭಾರೀ ಗಮನಿಸಿರಬಹುದು. ಹಾಗಾದರೆ ಅತ್ಯಂತ ಸುಲಭವಾಗಿ ಡಿಜಿಟಲ್ ಸಿಗ್ನೇಚರ್ ಹಾಕುವುದು ಹೇಗೆ? ಇಲ್ಲಿದೆ ಮಾಹಿತಿ.

Advertisement

ಮೊದಲು ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ನಿಮ್ಮ ಸಹಿ ಹಾಕಬೇಕು. ನಂತರ ಹಾಳೆಯ ಮೇಲಿರುವ ಸಹಿಯನ್ನು ಸ್ಜ್ಯಾನರ್ ಮುಖಾಂತರ ಸ್ಕ್ಯಾನ್ ಮಾಡಿ ನಿಮ್ಮ ಕಂಪ್ಯೂಟರ್ ನ ನಿಗದಿತ ಜಾಗದಲ್ಲಿ ಸೇವ್ ಮಾಡಿ. ನೀವು ಸೇವ್ ಮಾಡಿದ ಸಹಿಯನ್ನು ವರ್ಡ್ ಪ್ರೊಸೆಸರ್ ಅಥವಾ ಇಮೇಜ್ ಎಡಿಟರ್ ಸಹಾಯದಿಂದ ನಿಮಗೆ ಬೇಕಾದ ಜಾಗದಲ್ಲಿ ಪೇಸ್ಟ್ ಮಾಡಬಹುದು.

ಇದನ್ನೂ ಓದಿ: ಭಾರತೀಯ ಯುವಕನಿಂದ ಲವ್ ಪ್ರಪೋಸ್; ಒಪ್ಪಿಗೆ ನೀಡಿದಳಾ ಆಸೀಸ್ ಯುವತಿ ? ವಿಡಿಯೋ ವೈರಲ್

ಪೋನ್ ಬಳಕೆದಾದರು ಡಿಜಿಟಲ್ ಸಹಿ ಮಾಡುವುದು ಹೇಗೆ?

ನೀವು ಐಪೋನ್  ಅಥವಾ ಐ ಪ್ಯಾಡ್ ಬಳಕೆದಾರರಾಗಿದ್ದು ನಿಮಗೆ ಡಿಜಿಟಲ್ ಸಹಿಯ ಅವಶ್ಯಕತೆ ಇದ್ದರೆ ಈ ಕೆಳಗಿನ ಮಾರ್ಗ ಅನುಸರಿಸಿ.

  • ಐ ಪೋನ್ ಇ-ಮೇಲ್ ಕ್ಲೈಂಟ್ ಮಾರ್ಕ್ ಅಪ್ ಎಂಬ ಸೌಲಭ್ಯವಿದೆ. ಇದರ ಸಹಾಯದಿಂದ ಬಳಕೆದಾರರು  ಇ-ಮೇಲ್ ಕಳಿಸುವ ವೇಳೆ ಡಿಜಿಟಲ್ ಸಹಿ ಮಾಡಬಹುದು.
  • ಪಿಡಿಎಫ್ ದಾಖಲೆಗಳನ್ನು ಇಮೇಲ್ ಮೂಲಕ ತೆಗೆದು ನಂತರ ಮಾರ್ಕ್ ಅಪ್ ಮತ್ತು ರಿಪ್ಲೈ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಆ್ಯಪಲ್ ಪೆನ್ಸಿಲ್ ಹೊಂದಿರುವ ಐಪ್ಯಾಡ್ ಬಳಸಿದರೆ ಈ ಪ್ರಕ್ರಿಯೆ ಅತ್ಯಂತ ಸುಲಭವಾಗಿ ಆಗುತ್ತದೆ.
  • ಇದಷ್ಟೇ ಅಲ್ಲದೆ ಇನ್ನು ಹಲವಾರು ಆಯ್ಕೆಗಳಿದ್ದು ಅಡೋಬ್ ಆಟೋಮ್ಯಾಟಿಕ್ ಸಿಗ್ನೇಚರ್ ಮೂಲಕ ನೀವು ಹೆಸರನ್ನು ಟೈಪ್ ಮಾಡಿದ ತಕ್ಷಣ  ಅದು ಸಹಿಯಾಗಿ ಪರಿವರ್ತನೆಯಾಗುವಂತಹ ಫೀಚರ್ ಗಳಿವೆ.
  • ಇನ್ನು ಆ್ಯಂಡ್ರಾಯ್ಡ್ ಬಳಕೆದಾರರು ಕೂಡಾ ಈ ಡಿಜಿಟಲ್ ಸಹಿಯನ್ನು ತಮ್ಮ ಮೊಬೈಲ್ ಮೂಲಕವೇ ಮಾಡಬಹುದಾಗಿದ್ದು  ಇದಕ್ಕೆಂದು ಹಲವಾರು ಆ್ಯಪ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next