Advertisement
ನವ ಕಾನೂನುಗಳ ಅನುಷ್ಠಾನಈ ಹಿಂದೆ ಜಮ್ಮು ಕಾಶ್ಮೀರದಲ್ಲಿ 354 ರಾಜ್ಯ ಕಾನೂನುಗಳಿದ್ದವು, ಇವುಗಳಲ್ಲಿ ಈಗ 164 ಕಾನೂನುಗಳನ್ನು ರದ್ದುಪಡಿಸಿದ್ದಷ್ಟೇ ಅಲ್ಲದೇ, 138 ಕಾನೂನುಗಳನ್ನು ಬದಲಿಸಲಾಗಿದೆ. ಇನ್ನು ಈವರೆಗೂ ಆ ಭಾಗಕ್ಕೆ ಅನ್ವಯವಾಗದಿದ್ದ 170 ಕೇಂದ್ರೀಯ ಕಾನೂನುಗಳನ್ನೀಗ ಜಾರಿ ಮಾಡಲಾಗಿದೆ.
ಪಹಾಡಿ ಭಾಷಿಗ ಜನರು ಕಾಶ್ಮೀರ ಕೇಂದ್ರಿತ ರಾಜಕಾರಣಿಗಳ ಅವಗಣನೆಗೆ ಗುರಿಯಾಗುತ್ತಲೇ ಬಂದಿದ್ದರು. ಈಗ ಪಹಾಡಿ ಜನರಿಗೆ 4 ಪ್ರತಿಶತ ಮೀಸಲಾತಿ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10 ಪ್ರತಿಶತ ಮೀಸಲಾತಿ ಕಲ್ಪಿಸಲಾಗಿದೆ. ಇಲ್ಲಿಯವರೆಗೂ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಗ್ರಾಮಗಳಲ್ಲಿ ವಾಸಿಸುತ್ತಿದ್ದ ಜನರಿಗಷ್ಟೇ ಮೀಸಲಾತಿ ಸಿಗುತ್ತಿತ್ತು. ಇನ್ನು ಅಲ್ಪಸಂಖ್ಯಾಕ ವರ್ಗಗಳಿಗೆ ನೀಡಲಾಗುತ್ತಿದ್ದ ಸ್ಕಾಲರ್‌ಶಿಪ್‌ಗ್ಳಲ್ಲಿ ಕಳೆದೊಂದು ವರ್ಷದಲ್ಲಿ 262 ಪ್ರತಿಶತ ಏರಿಕೆಯಾಗಿದೆ. ನಿದ್ದೆಗೆಟ್ಟ ಉಗ್ರ ಸಂಘಟನೆಗಳು
ಸದಾ ಕಲ್ಲು ತೂರಾಟಗಳಿಂದಲೇ ಸುದ್ದಿಯಲ್ಲಿರುತ್ತಿದ್ದ ಕಣಿವೆಯಲ್ಲಿ ಈಗ ಹಿಂಸಾತ್ಮಕ ಘಟನೆಗಳು ಗಣನೀಯವಾಗಿ ತಗ್ಗಿವೆ. ಆರ್ಟಿಕಲ್ 370 ರದ್ದತಿಯ ಒಂದೇ ವರ್ಷದಲ್ಲಿ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಲ್ಲಿ 46 ಪ್ರತಿಶತ ಇಳಿಕೆಯಾಗಿದೆ. ಇದು ಕಳೆದ 4 ದಶಕಗಳಲ್ಲೇ ಅತ್ಯಧಿಕ ಇಳಿಕೆ ಎಂಬುದು ಗಮನಾರ್ಹ. ಕಳೆದ ಒಂದು ವರ್ಷದಲ್ಲಿ ಹಿಜ್ಬುಲ್, ಲಷ್ಕರ್ ಉಗ್ರ ಸಂಘಟನೆಗಳ ಅನೇಕ ಸ್ಥಳೀಯ ನಾಯಕರು, ಜೆಹಾದಿಗಳು ಭದ್ರತಾಪಡೆಗಳ ಕಾರ್ಯಾಚರಣೆಗೆ ಬಲಿಯಾಗಿದ್ದಾರೆ. ಕಳೆದ ಆಗಸ್ಟ್ ತಿಂಗಳಿಂದ ಇಲ್ಲಿಯವರೆಗೂ 178 ಉಗ್ರರು ಹತರಾಗಿದ್ದಾರೆ. ಇದರಲ್ಲಿ 78 ಹಿಜ್ಬುಲ್ ಉಗ್ರರು , 20 ಲಷ್ಕರ್-ಎ-ತಯ್ಯಬಾ ಉಗ್ರರು, 32 ಉಗ್ರರು ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ಬಲಿಯಾಗಿದ್ದರೆ, ಐಎಸ್‌ಜೆಕೆ ಮತ್ತು ಬೆಳೆಯುತ್ತಿದ್ದ ಅನ್ಸರ್ ಗಜ್ವತ್-ಉಲ್ ಹಿಂದ್‌ನ ಪ್ರಮುಖ ಜೆಹಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಕಳೆದೊಂದು ವರ್ಷದಲ್ಲಿ ಉಗ್ರ ಸಂಘಟನೆಗಳಿಗೆ ಸೇರುತ್ತಿದ್ದ ಯುವಕರ ಸಂಖ್ಯೆಯಲ್ಲಿ 40 ಪ್ರತಿಶತ ಇಳಿಕೆಯಾಗಿದೆ.
Related Articles
ಇದೇ ವರ್ಷದ ಜನವರಿ ತಿಂಗಳಲ್ಲಿ ಮೋದಿ ಸರಕಾರ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳಿಗಾಗಿ 80 ಸಾವಿರ ಕೋಟಿ ರೂಪಾಯಿ ಗಳ ಪ್ಯಾಕೇಜ್ ಘೋಷಿಸಿದೆ. ಇದರಿಂದಾಗಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆಲ್ಲ ಮರುಜೀವ ದೊರೆತಂತಾಗಿದೆ. ಈ ಅನುದಾನದಲ್ಲಿ ಐಐಟಿ, ಐಐಎಂ ಮತ್ತು ಏಮ್ಸ್‌ನಂಥ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಲಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಕಾನೂನು ಹಾಗೂ ನಿಯಮಗಳ ಬದಲಾವಣೆ ಯಿಂದಾಗಿ ಭಾರತದ ಇತರ ಭಾಗಗಳಿಗೆ ಸಿಗುತ್ತಿದ್ದ ಸ್ಕೀಮುಗಳ ಪ್ರಯೋಜನವೂ ಈ ಪ್ರದೇಶಕ್ಕೆ ವಿಸ್ತರಣೆಗೊಂಡಿದೆ. ಕೇಂದ್ರ ಸರಕಾರ ಪಿಎಂ- ಕಿಸಾನ್, ಪಿಎಂ-ಕಿಸಾನ್ ಪೆನ್ಶನ್, ಪ್ರಧಾನಮಂತ್ರಿ ಜನಧನ ಯೋಜನೆ, ಸ್ಟಾಂಡ್ ಅಪ್ ಇಂಡಿಯಾ ಸೇರಿದಂತೆ 85 ಜನಾಭಿವೃದ್ಧಿ ಸ್ಕೀಮುಗಳನ್ನು ಜಮ್ಮು-ಕಾಶ್ಮೀರಕ್ಕೆ ತಲುಪಿಸಿದೆ. ಇನ್ನು ಅಟಲ್ ಪೆನ್ಶನ್ ಯೋಜನೆ ಸೇರಿದಂತೆ ಹಲವಾರು ವಿಮಾ ಯೋಜನೆಗಳನ್ನೂ ಪರಿಚಯಿಸಲಾಗಿದೆ.
Advertisement
ಪ್ರವಾಸೋದ್ಯಮಕ್ಕೆ ಹೊಡೆತಆರ್ಟಿಕಲ್ 370 ರದ್ದತಿಯ ಅನಂತರದ ಮೂರು ದಿನಗಳಲ್ಲಿ ಕೇಂದ್ರ ಸರಕಾರ, ಪ್ರವಾಸಿಗರಿಗೆಲ್ಲ ಕಾಶ್ಮೀರ ತೊರೆಯಲು ಹೇಳಿತ್ತು. ತದನಂತರ ಸುರಕ್ಷತ ದೃಷ್ಟಿಯಿಂದ ಕಣಿವೆ ಭಾಗದಲ್ಲಿ ಕಠಿನತಮ ನಿರ್ಬಂಧಗಳನ್ನು ಜಾರಿ ಮಾಡಿದ ಕಾರಣ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಪೆಟ್ಟು ಬಿದ್ದಿತು. ಕಳೆದ ಡಿಸೆಂಬರ್ ತಿಂಗಳಲ್ಲಿ ಕಾಶ್ಮೀರದ ಆರ್ಥಿಕತೆಗೆ 17,800 ಕೋಟಿ ರೂಪಾಯಿ ನಷ್ಟವಾದರೆ, ಆಗಸ್ಟ್‌ನಿಂದ ಅಕ್ಟೋಬರ್ 2019ರ ನಡುವೆ 4.9 ಲಕ್ಷ ಉದ್ಯೋಗಗಳು ಹಾನಿಯಾದವು. ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಸಿದ ಅನಂತರ 2020ರಲ್ಲಿ ಪರಿಸ್ಥಿತಿ ಸುಧಾರಣೆಯಾಗಬಹುದು ಎನ್ನುವ ನಿರೀಕ್ಷೆಯಿತ್ತಾದರೂ, ದುರ್ದೈವವಶಾತ್ ಕೋವಿಡ್ ಕಾರಣದಿಂದಾಗಿ ಕಾಶ್ಮೀರದ ಪ್ರವಾಸೋದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಅಭಿವೃದ್ಧಿ ಕಾಮಗಾರಿಗಳ ಪರ್ವ
ಮುಂದಿನ ವರ್ಷದೊಳಗೆ ಪ್ರಪಂಚದಲ್ಲೇ ಅತೀ ಎತ್ತರದ ರೈಲ್ವೇ ಸೇತುವೆ ಉದ್ಘಾಟನೆಯಾಗಲಿದೆ. ಈ ಸೇತುವೆ ಚೆನಾಬ್ ನದಿಯ ಮೇಲೆ ಹಾದು ಹೋಗಲಿದ್ದು, ಕಣಿವೆ ಪ್ರದೇಶವನ್ನು ಭಾರತದ ಇತರೆ ಭಾಗಗಳೊಂದಿಗೆ ರೈಲ್ವೇ ಮೂಲಕ ಬೆಸೆಯಲಿದೆ. ಇದಷ್ಟೇ ಅಲ್ಲದೇ ಗಡಿ ಭಾಗದ ಪ್ರಾಂತ್ಯಗಳಲ್ಲಿನ ಸುಗಮ ಸಂಚಾರಕ್ಕೆ ಈ ಒಂದು ವರ್ಷದಲ್ಲೇ ಆರು ಸೇತುವೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಳೆದ 50 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಾಹ್‌ಪುರ್ ಖಂಡಿ ವಿದ್ಯುತ್ ಮತ್ತು ಕೃಷಿ ಯೋಜನೆ ಮರು ಜೀವ ಪಡೆದುಕೊಂಡಿದೆ. ಇನ್ನು ಕಾಶ್ಮೀರ ಕಣಿವೆಯನ್ನು ಶೋಪಿಯಾಂ ಮೂಲಕ ಗಡಿ ಪ್ರದೇಶವಾದ ಪೂಂಛ…ಗೆ ಬೆಸೆಯುವ ಐತಿಹಾಸಿಕ ಮೊಘಲ್ ರಸ್ತೆಯ ಅಭಿವೃದ್ಧಿಯಂತೂ ಭರದಿಂದ ಸಾಗಿದೆ. ಶ್ರೀನಗರ ಮತ್ತು ಜಮ್ಮು ನಡುವೆ ಮೆಟ್ರೋ ರೈಲು ಯೋಜನೆಯೂ ನಿರ್ಮಾಣಗೊಳ್ಳುತ್ತಿದೆ. ಸೆಪ್ಟಂಬರ್ 2019ರಲ್ಲೇ ಕೇಂದ್ರವು 15 ವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಿದ್ದಷ್ಟೇ ಅಲ್ಲದೇ 10 ಸಾವಿರ ಕೋಟಿ ವೆಚ್ಚದ ಇನ್ನಿತರ 20 ಅಭಿವೃದ್ಧಿ ಯೋಜನೆಗಳ ಆರಂಭಕ್ಕೂ ಸಹಿ ಹಾಕಿದ್ದು, ವೇಗವಾಗಿ ಅನುಷ್ಠಾನಗೊಳ್ಳುತ್ತಿವೆ.