Advertisement
ಕೋವಿಡ್ ಬಗ್ಗೆ ಏನೇನೂ ಅರಿವಿಲ್ಲದ ಬಯೊಜೆನ್ ಅಧಿಕಾರಿಗಳು ಪ್ರಯಾಣಿಕರಿಂದ ತುಂಬಿದ್ದ ವಿಮಾನಗಳಲ್ಲಿ ಪ್ರಯಾಣಿಸಿದರು, ಮನೆಗೆ ಹೋಗಿ ಹೆಂಡತಿ ಮಕ್ಕಳೊಂದಿಗೆ ವಾರಾಂತ್ಯವನ್ನು ಕಳೆದರು, ಮಾಲ್, ಸಿನೆಮಾಗಳಿಗೆ ಹೋದರು ಮತ್ತು ತಾವು ಹೋದಡೆಗಳಲ್ಲಿ ಕೋವಿಡ್ ಸೋಂಕು ಹರಡಿದರು. ಬಯೊಜೆನ್ ಸಿಬಂದಿಯಿಂದಾಗಿ ಆರು ರಾಜ್ಯಗಳಿಗೆ, ಕೊಲಂಬಿಯ ಜಿಲ್ಲೆ ಮತ್ತು ಮೂರು ದೇಶಗಳಿಗೆ ಕೋವಿಡ್ ಹರಡಿತು.
Related Articles
Advertisement
ಜರ್ಮನಿ, ಇಟಲಿ, ಸ್ವಿಜರ್‌ಲ್ಯಾಂಡ್ ಮತ್ತಿತರ ದೇಶಗಳ ಎಕ್ಸಿಕ್ಯೂಟಿವ್‌ಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.ಮಹಾಸಭೆಯ ಮೊದಲ ರಾತ್ರಿ ಬೋಸ್ಟನ್ ಹಾರ್ಬರ್‌ಗೆ ಅಭಿಮುಖವಾಗಿರುವ ಮಾರಿಯಟ್ ಲಾಂಜ್ ವಾಫ್ì ಹೊಟೇಲಿನಲ್ಲಿ 175 ಎಕ್ಸಿಕ್ಯೂಟಿವ್‌ಗಳು ಸೇರಿದ್ದರು. ಒಂದು ವರ್ಷದ ಬಳಿಕ ಭೇಟಿಯಾದ ಸಹೋದ್ಯೋಗಿಗಳು ಹಸ್ತಲಾಘವವಿತ್ತು ಪರಸ್ಪರರನ್ನು ಅಭಿನಂದಿಸಿದರು. ಕೆನ್ನೆಗೆ ಮುತ್ತಿಕ್ಕುವುದು ನಡೆಯಿತು. ಇದು ಕೋವಿಡ್ ವೈರಸ್ ಹರಡುವ ಅತ್ಯುತ್ತಮ ತಾಣವಾಗಿತ್ತು. ಮರುದಿನವೂ ಇದೇ ಮಾದರಿಯ ಪಾರ್ಟಿ ಇನ್ನೊಂದು ಪಂಚತಾರಾ ಹೊಟೇಲಿನಲ್ಲಿ ನಡೆಯಿತು. ಈ ಪಾರ್ಟಿಯಲ್ಲಿ ಭಾಗವಹಿಸಿದವರೆಲ್ಲ ತಮ್ಮ ಜತೆಗೆ ಕೋವಿಡ್ ವೈರಸ್‌ನ್ನು ಒಯ್ದರು. ವಾರಾಂತ್ಯಕ್ಕಾಗುವಾಗ ಪಾರ್ಟಿಯಲ್ಲಿ ಭಾಗವಹಿಸಿದ ಒಬ್ಬೊಬ್ಬರೇ ಅಸ್ವಸ್ಥರಾಗತೊಡಗಿದರು. ಜೈಲಿಯಂಥ ಪಾರ್ಟಿಗೆ ಹೋಗದವರಿಗೂ ವೈರಸ್ ತಗಲಿತ್ತು. ಜೈಲಿ ಪಾರ್ಟಿಯಲ್ಲಿ ಭಾಗವಹಿಸುವಷ್ಟು ಉನ್ನತ ಮಟ್ಟದ ಅಧಿಕಾರಿಯಲ್ಲ. ಆದರೆ ಅವರ ಬಾಸ್ ಪಾರ್ಟಿಗೆ ಹೋಗಿದ್ದರು. ಬಾಸ್‌ನಿಂದ ಜೈಲಿಗೆ ವೈರಸ್ ಹರಡಿತ್ತು. ಇಂಥ ಹಲವು ಪ್ರಕರಣಗಳು ಬಯೊಜೆನ್ ಒಳಗಿದೆ.
ಮಾರ್ಚ್ 2ರಂದು ಕಂಪೆನಿಯ ಮುಖ್ಯ ಮೆಡಿಕಲ್ ಆಫೀಸರ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಕೆಲವರು ಅಸ್ವಸ್ಥರಾಗಿರುವ ಕಾರಣ ಭಾಗವಹಿಸಿದವರೆಲ್ಲರೂ ವೈದ್ಯಕೀಯ ತಪಾಸಣೆಗೊಳಪಡಬೇಕೆಂದು ಸೂಚಿಸಿ ಇ-ಮೈಲ್ ರವಾನಿಸಿದರು. ಆದರೆ ಅಷ್ಟರಲ್ಲಿ ಆಗಬೇಕಾದ ಅನಾಹುತ ಆಗಿಹೋಗಿತ್ತು. ಮುಂದಿನ ಕೆಲವು ವಾರಗಳು ಬಯೊಜೆನ್ ಸಿಬಂದಿಯ ಪಾಲಿಗೆ ಯಾತನಾದಾಯಕವಾಗಿದ್ದವು. ಯಾರೆಲ್ಲ ಅಸ್ವಸ್ಥರಾಗಿದ್ದಾರೆಂದು ಮನೆಮನೆಗೆ ಹೋಗಿ ಹುಡುಕುವುದೇ ಅವರ ಕೆಲಸವಾಗಿತ್ತು. ಬಯೊಜೆನ್ ಕಾರ್ಯಕ್ರಮಗಳ ಛಾಯಾಚಿತ್ರಗ್ರಾಹಕಿಯಾಗಿದ್ದ ಮಿಸ್ ಟರಂಟೊ ಅವರನ್ನೂ ಕೋವಿಡ್ ಬಿಡಲಿಲ್ಲ. ಟರಂಟೊ ತನಗರಿವಿಲ್ಲದೆ ಸ್ನೇಹಿತೆಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ಅಲ್ಲೂ ವೈರಸ್‌ಹರಡಿದರು. ಇದೀಗ ಬಯೊಜೆನ್ ವಿರ್ ಟೆಕ್ನಾಲಜಿ ಎಂಬ ಇನ್ನೊಂದು ಕಂಪೆನಿಯ ಜತೆಗೆ ಸೇರಿಕೊಂಡು ಕೋವಿಡ್‌ಗೆ ಔಷಧ ಕಂಡುಹಿಡಿಯಲು ಮುಂದಾಗಿದೆ. ಸಮಾರಂಭಗಳಿಂದ ಹರಡಿತು ವೈರಸ್
ಬಯೊಜೆನ್ ಎಂಬ ಔಷಧ ತಯಾರಿಸುವ ಕಂಪೆನಿ ಇರುವುದು ಬೋಸ್ಟನ್‌ನಲ್ಲಿ. ಕಂಪೆನಿ ಇತ್ತೀಚೆಗೆ ಶೋಧಿಸಿದ ಅಲ್ಜೀಮರ್ ಔಷಧ ಯಶಸ್ವಿಯಾಗುವ ಸೂಚನೆ ಲಭಿಸಿತ್ತು. ಹೀಗಾಗಿ ಕಂಪೆನಿಯಲ್ಲಿ ಸಡಗರದ ವಾತಾವರಣವಿತ್ತು. ಔಷಧ ಸಂಶೋಧನೆ ಯಶಸ್ವಿಯಾಗಿರುವ ಸಂಭ್ರಮಾಚಾರಣೆಯನ್ನು ನಡೆಸಲಾಗಿತ್ತು. ದುರಂತವೆಂದರೆ ಇಂಥ ಸಮಾರಂಭಗಳೇ ಕೋವಿಡ್ ವೈರಸ್ ಹರಡುವ ವಾಹಕಗಳಾದವು. ಬಯೊಜೆನ್‌ನ ಉನ್ನತ ಅಧಿಕಾರಿಗಳು ಪಂಚತಾರಾ ಹೊಟೇಲುಗಳಲ್ಲಿ ಅಲ್ಜೀಮರ್ ಔಷಧದ ಯಶಸ್ಸಿನ ಸಂಭ್ರಮದಲ್ಲಿರುವಾಗ ಕೋವಿಡ್ ವೈರಸ್ ಸದ್ದಿಲ್ಲದೆ ಪ್ರಸರಣವಾಗುತ್ತಿತ್ತು.