Advertisement
ಇಂದು ಪಾಕಿಸ್ತಾನದ ಪದವಿ ವಿದ್ಯಾರ್ಥಿಗಳಲ್ಲಿ ಲೋಕದ ಬಗ್ಗೆ ಅರೆಬರೆ ಜ್ಞಾನವೇಕಿದೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿದಾಗ ನನ್ನ ಗಮನಕ್ಕೆ ಬಂದ ಮೊದಲ ಅಂಶವೆಂದರೆ “ವಿದ್ಯಾರ್ಥಿ ವಲಯದಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿರು ವುದು’! ಈಗಂತೂ ಸಾಕಷ್ಟು ಟೆಕ್‌ಸೇವಿಯಾಗಿರುವ ವಿದ್ಯಾರ್ಥಿ ಗಳು ಯಾವುದೇ ಡೌಟ್ ಎದುರಾದ ಕೂಡಲೇ ತಟ್ಟನೆ ಅಂತರ್ಜಾಲಕ್ಕೆ ಲಗ್ಗೆಯಿಟ್ಟು ಆ ಕ್ಷಣದ ಅನುಮಾನವನ್ನು ಬಗೆಹರಿಸಿಕೊಂಡುಬಿಡುತ್ತಾರೆಯೇ ಹೊರತು, ಆ ಒಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡುವ ಅಗತ್ಯವೇ ಇಲ್ಲ ಎಂದವರು ಭಾವಿಸುತ್ತಾರೆ. ನಾನು ನನ್ನ ಕಂಪ್ಯೂಟರ್ ಸೈನ್ಸ್ ಕ್ಲಾಸ್‌ಗಳಲ್ಲಿ ವಿದ್ಯಾರ್ಥಿ
ಗಳಿಗೆ ಹಲವು ಪುಸ್ತಕಗಳ ಬಗ್ಗೆ ಮಾಹಿತಿ ಕೊಡುತ್ತೇನೆ. “ಈ ಕಾದಂಬರಿ ಓದು, ಈ ವಿಜ್ಞಾನ ಪುಸ್ತಕ ಓದು’ ಎಂದು ಸಲಹೆ ನೀಡುತ್ತೇನೆ. ಆದರೆ ಪುಸ್ತಕ ಓದುವುದರಲ್ಲಿ ಅವರಿಗೆ ಆಸಕ್ತಿಯೇ ಇಲ್ಲ. ಪಠ್ಯದಲ್ಲಿರುವಷ್ಟೇ ಓದುತ್ತೇನೆ ಎಂಬ ನಿಲುವು ಅವರದ್ದು.
ಇನ್ಸ್‌ಟಿಟ್ಯೂಟ್‌ಗೆ ಹೋಗಬಹುದಿತ್ತಲ್ಲ? ವಿಶ್ವವಿದ್ಯಾಲಯಕ್ಕೆ ಬಂದದ್ದು ಏಕೆ?’ ಎಂಬ ಪ್ರಶ್ನೆ ಪದೇ ಪದೆ ಕಾಡುತ್ತದೆ.
1970-80ರ ದಶಕದಲ್ಲಿ ಪುಸ್ತಕ ಓದುವ ಪರಿಪಾಠ ನಮ್ಮಲ್ಲಿ ಬಹಳ ಸಾಮಾನ್ಯವಾಗಿತ್ತು. ಆಗಿನ ಪೋಷಕರೆಲ್ಲ ಮಕ್ಕಳಿಗಾಗಿಯೇ ಕಾದಂಬರಿಗಳನ್ನು ಖರೀದಿಸುತ್ತಿದ್ದರು, ಹೊಸ ಲೇಖಕರನ್ನು ಪರಿಚಯಿಸುತ್ತಿದ್ದರು. ಆದರೆ ಈಗಿನ ಪೋಷಕರು ಮಕ್ಕಳಿಗೆ ಪುಸ್ತಕಗಳನ್ನು ತಂದು ಓದಿಸುವುದಿರಲಿ, ತಾವೇ ಕುಳಿತು ಓದುವುದಕ್ಕೂ ಪುರುಸೊತ್ತಿಲ್ಲ(ಅಥವಾ ಅವರು ಹಾಗೆ ಭಾವಿಸುತ್ತಾರೆ). ನನಗಿನ್ನೂ ನೆನಪಿದೆ. ನಾನು ಚಿಕ್ಕವನಾಗಿದ್ದಾಗ ನನ್ನ ತಂದೆಯಿಂದ ಪಡೆದ ಅತಿದೊಡ್ಡ ಬಳುವಳಿಯೆಂದರೆ ಆತನ ಬುಕ್‌ರ್ಯಾಕ್‌ನಲ್ಲಿದ್ದ ನೂರಾರು ಪುಸ್ತಕಗಳು! ನನ್ನ ಅಣ್ಣನಿಗೂ ವಿಪರೀತ ಓದುವ ಅಭ್ಯಾಸವಿತ್ತು. ಆತ ಹೆಚ್ಚಾಗಿ ಕಾದಂಬರಿಯೇತರ ಪುಸ್ತಕಗಳನ್ನೇ ಓದುತ್ತಿದ್ದ. ತಾನು ಓದಿ ಮುಗಿಸಿದ ಮೇಲೆ ನಾನು ಯಾವ ಪುಸ್ತಕಗಳನ್ನು ಓದಬೇಕು ಎಂದು ಆಯ್ಕೆ ಮಾಡಿಕೊಡುತ್ತಿದ್ದ. ಈ ರೀತಿಯ ಮಾರ್ಗ ದರ್ಶನ ಈಗಂತೂ ಅಸ್ತಿತ್ವದಲ್ಲೇ ಇಲ್ಲ. ಆಗೆಲ್ಲ ಜನರು “ನನ್ನ ಮಗ ಬಹಳ ಓದುತ್ತಾನೆ’ ಎಂದು ಹೇಳುತ್ತಿದ್ದದ್ದು ಆತ ಕಥೆ- ಕಾದಂಬರಿ, ಕಾವ್ಯ, ಪುರಾಣ, ವಿಜ್ಞಾನ ಸೇರಿದಂತೆ ಪಠ್ಯೇತರ ಪುಸ್ತಕಗಳನ್ನು ಓದುತ್ತಿದ್ದ ಎಂಬ ಕಾರಣಕ್ಕಾಗಿ. ಈಗಿನ ಪೋಷಕರು ನನ್ನ ಮಗ ಬಹಳ ಓದುತ್ತಾನೆ ಅನ್ನೋದು ಆತ ಶಾಲೆ-ಕಾಲೇಜಿನ ಪಠ್ಯವನ್ನು ರಟ್ಟುಹೊಡೆಯುತ್ತಾ ಕುಳಿತರೆ ಮಾತ್ರ! ನಾನು ವಿದ್ಯಾರ್ಥಿಗಳಿಗೆಂದೇ ಸ್ವಂತ ಹಣ ಖರ್ಚು ಮಾಡಿ ಅಥವಾ ಅವರಿವರಿಂದ ಕೇಳಿ ಪಡೆದು ಅನೇಕ ಪುಸ್ತಕಗಳನ್ನು ವಿಶ್ವವಿದ್ಯಾಲಯದ ಕೊಠಡಿಯಲ್ಲಿಟ್ಟುಕೊಂಡಿದ್ದೇನೆ. ಆದರೆ ಬಹುತೇಕ ವಿದ್ಯಾರ್ಥಿಗಳು ಅವುಗಳತ್ತ ಕಣ್ಣೆತ್ತಿಯೂ ನೋಡುವು ದಿಲ್ಲ. ಒಂದು ವೇಳೆ ಒಬ್ಬ ಸ್ಟೂಡೆಂಟ್ ಪುಸ್ತಕ ಪಡೆದರೂ (ಹೆಚ್ಚಾಗಿ ವಿದ್ಯಾರ್ಥಿನಿಯರೇ ಕೇಳಿ ಪಡೆಯುತ್ತಾರೆ) ತೆಗೆದುಕೊಂಡಷ್ಟೇ ವೇಗದಲ್ಲಿ ಅದನ್ನು ಹಿಂದಿರುಗಿಸಿಬಿಡು ತ್ತಾರೆ. ಅವರು ಅದನ್ನು ಓದೇ ಇಲ್ಲ, ಓದಿದರೂ ಅರ್ಧಂಬರ್ಧ ಎನ್ನುವುದು ಸ್ಪಷ್ಟ. ಆದರೆ ಆ ಪುಸ್ತಕಕ್ಕೆ ಅಂತರ್ಜಾಲದಲ್ಲಿ ಎಷ್ಟು ರೇಟಿಂಗ್ ಇದೆ ಎಂದು ಕೇಳಿ ನೋಡಿ. ಪಟ್ ಅಂತ ತಮ್ಮ ಗೂಗಲ್ ಜ್ಞಾನದಿಂದ ಹೇಳುತ್ತಾರೆ!
Related Articles
ಪುಸ್ತಕಗಳೆಡೆಗಿನ ಪ್ರೀತಿ ಕಡಿಮೆಯಾಗುತ್ತಿರುವುದರಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಇಂದು ಪಾಕಿಸ್ತಾನದ ಶಿಕ್ಷಣ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಕ್ರಾಂತಿಯಾಗುವ ಅಗತ್ಯವಿದೆ ಎಂದು ನನಗನ್ನಿಸುತ್ತದೆ. ಓದು ಎಂದರೆ ಪಠ್ಯವಷ್ಟೇ ಅಲ್ಲ ಎನ್ನುವ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕಾದ ಅಗತ್ಯವಿದೆ. ಆದರೆ ಇದೆಲ್ಲ ಸಾಧ್ಯವಾಗುತ್ತಲೇ ಇಲ್ಲ. ಈ ಕಾರಣದಿಂದಲೇ ಇಂದು ಅಮೆಜಾನ್‌ನಂಥ ಬುಕ್ ಡೆಲಿವರಿ ಸೇವೆಗಳು ಪಾಕಿಸ್ತಾನದಿಂದ ಕಾಲ್ಕಿàಳಲಾರಂಭಿಸಿವೆ. ಆದರೆ ಇದೇ ಕಂಪೆನಿಗಳು ಭಾರತದಲ್ಲಿ ಸಂತೋಷದಿಂದ ಬೆಳೆಯುತ್ತಿವೆ. ಪಾಕಿಸ್ತಾನದಲ್ಲಿ ನಮಗೆ “ಶಸ್ತ್ರಾಸ್ತ್ರಗಳ’ ಬಗ್ಗೆ, “ಟ್ಯಾಕ್ಸ್ ಮತ್ತು ಹಣದುಬ್ಬರ’ದ ಬಗ್ಗೆ, “ಚಿಕ್ಕ ಸುದ್ದಿಯನ್ನು ದೊಡ್ಡದಾಗಿ ನೋಡುವ ಬಗ್ಗೆ!’ ಕಲಿಸಿಕೊಡಲಾಗುತ್ತಿದೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಜ್ಞಾನದಿಂದ ಮಾತ್ರ ನಮ್ಮನ್ನು ವಂಚಿತರನ್ನಾಗಿ ಮಾಡಲಾಗಿದೆ.
ನಮ್ಮ ದೇಶ ಹೇಗಾಗಿದೆಯೆಂದರೆ ನಮ್ಮಲ್ಲಿ ಭಿಕ್ಷುಕನೊಬ್ಬ ತಿಂಗಳಿಗೆ 30,000 ರೂಪಾಯಿಗಿಂತಲೂ ಹೆಚ್ಚು ಹಣ ಭಿûಾಟಣೆಯಿಂದಲೇ ಗಳಿಸಬಲ್ಲ, ಆದರೆ ವಿದ್ಯಾವಂತ ವ್ಯಕ್ತಿಗೆ ಉದ್ಯೋಗದ ಖಾತ್ರಿಯಿಲ್ಲ. ನಮ್ಮ ದೇಶದಲ್ಲಿ ಕೃತಿಚೌರ್ಯ
ಮಾಡಿ ಪಿಎಚ್‌ಡಿ ಪಡೆದವರೂ ನಿರ್ವಿಘ್ನವಾಗಿ ಉಪ ಚಾನ್ಸಲರ್‌ಗಳ ಹುದ್ದೆಗಳಲ್ಲಿ ಕುಳಿತಿದ್ದಾರೆ. ನಾವು ನಮ್ಮ ವಿಶ್ವವಿದ್ಯಾಲಯಗಳನ್ನು, ಶಿಕ್ಷಣ ಕ್ಷೇತ್ರವನ್ನು ಈ ರೀತಿ ನಡೆಸುತ್ತೀವಿ ಎಂದಾದರೆ, ಅದ್ಹೇಗೆ ತಾನೆ ನಮ್ಮ ಮಕ್ಕಳಿಗೆ ಪುಸ್ತಕಗಳ ಬಗ್ಗೆ ಪ್ರೀತಿ ಮೂಡಿಸಬಲ್ಲೆವು? ಆ ಬಗ್ಗೆ ಅರಿವು ನಮ್ಮಲ್ಲಿ ಪ್ರಬಲವಾಗಿ ಮೂಡಬಲ್ಲದು?
Advertisement
(ಲೇಖಕರು ಇಸ್ಲಾಮಾಬಾದ್‌ನ ವಿ.ವಿಯೊಂದರಲ್ಲಿ ಉಪನ್ಯಾಸಕರು ಮತ್ತು ಬ್ಲಾಗರ್)
– ಖಾಲಿದ್ ಶೇಖ್