Advertisement

ಬಾಲ್‌ ಜಾಯಿಂಟ್ ನಿಮಗೆಷ್ಟು ಗೊತ್ತು?

08:01 AM Jan 25, 2019 | |

ಕಾರುಗಳಲ್ಲಿ ಸುಖ ಸವಾರಿಗೆ ನೆರವು ನೀಡುವ ಪ್ರಮುಖ ಯಾಂತ್ರಿಕತೆಗಳಲ್ಲಿ ಬಾಲ್‌ ಜಾಯಿಂಟ್ ಕೂಡ ಒಂದು. ಬಾಲ್‌ ಜಾಯಿಂಟ್ ಸವೆದಿದ್ದರೆ ಆರಾಮದಾಯಕ ಸವಾರಿ ಸಾಧ್ಯವಿಲ್ಲ. ಇದು ಮಂಡಿಯಂತೆ ಕೆಲಸ ಮಾಡುತ್ತದೆ. ಕಾರಿನ ಮುಖ್ಯ ಸಸ್ಪೆನ್ಷನ್‌ ಮೇಲಕ್ಕೂ ಕೆಳಕ್ಕೂ ಮತ್ತು ಸ್ಟೀರಿಂಗ್‌ ವೀಲ್‌ ಹಿಂದಕ್ಕು ಮುಂದಕ್ಕೂ ಸುಗಮ ವಾಗಿ ಸಂಚರಿಸಲು ಇದು ನೆರವು ನೀಡುತ್ತದೆ.

Advertisement

ಒಂದು ವೇಳೆ ಬಾಲ್‌ ಜಾಯಿಂಟ್ ಸರಿಯಾಗಿಲ್ಲ, ಮುರಿದು ಹೋಗಿದೆ ಎಂದರೆ ಕಾರಿನ ವೀಲ್‌ ಬೇಕಾಬಿಟ್ಟಿ ತಿರುಗಬಹುದು. ಇದರಿಂದ ಸಸ್ಪೆನ್ಷನ್‌ ಮತ್ತು ಕಾರಿನ ಫೆಂಡರ್‌ ಹಾಳಾಗುವ ಅಪಾಯವಿರುತ್ತದೆ.

ಬಾಲ್‌ಜಾಯಿಂಟ್‌ಗೆ ಹಾನಿ; ಪತ್ತೆ ಹೇಗೆ?
ಬಾಲ್‌ಜಾಯಿಂಟ್‌ಗೆ ಹಾನಿಯಾಗಿದ್ದರೆ, ಕೆಲ ವೊಂದು ಸಮಸ್ಯೆಗಳು ಗೋಚರಿಸಬಹುದು. ಮುಂಭಾಗದ ಸಸ್ಪೆನ್ಷನ್‌ನಿಂದ ಶಬ್ದ: ಮುಂಭಾಗದ ಸಸ್ಪೆನ್ಷನ್‌ ಸುಖಾ ಸುಮ್ಮನೆ ಸದ್ದು ಮಾಡಬಹುದು. ಜತೆಗೆ ಸಸ್ಪೆನ್ಷನ್‌ ಲೂಸ್‌ ಆದಂತೆ ಭಾಸವಗುತ್ತದೆ. ಕೆಟ್ಟದಾದ ರಸ್ತೆ, ಹಂಪ್‌ನಲ್ಲಿ, ತಿರುಗುವ ವೇಳೆ ಕ್ಲಿಕ್‌, ಕ್ಲಿಕ್‌ ಶಬ್ದ ಬರಬಹುದು.

ವೈಬ್ರೇಷನ್‌ ಸಮಸ್ಯೆ
ಬಾಲ್‌ ಜಾಯಿಂಟ್ ಹಾಳಾಗಿ ಸಸ್ಪೆನ್ಷನ್‌ ಮತ್ತು ಫೆಂಡರ್‌ ಮಧ್ಯೆ ಸಂಪರ್ಕದ ಸಮಸ್ಯೆಯಾಗಿರುವ ಕಾರಣಕ್ಕೆ ವಾಹನದ ಮುಂಭಾಗದಿಂದ ವಿಪರೀತ ವೈಬ್ರೇಷನ್‌ ಸಮಸ್ಯೆ ಬರಬಹುದು.

ವಿಪರೀತ ಶಬ್ದ
ಕಾರಿನ ವೀಲ್‌ ಭಾಗದಿಂದ ಕೆಲವೊಮ್ಮೆ ವಿಪರೀತ ಶಬ್ದ ಬರುತ್ತಿದ್ದರೆ ನಿಸ್ಸಂಶಯವಾಗಿ ಅದು ಬಾಲ್‌ ಜಾಯಿಂಟ್ ಸಮಸ್ಯೆ. ವಾಹನ ಚಲಿಸುತ್ತಲೇ ಇದರ ಶಬ್ದ ಹೆಚ್ಚಾಗಬಹುದು. ಕೆಲವೊಮ್ಮೆ ಸ್ಟೀರಿಂಗ್‌ ವೀಲ್‌ನಲ್ಲಿ ಮಾತ್ರ ವೈಬ್ರೇಷನ್‌ ಸಮಸ್ಯೆ ಕಾಣಿಸಿಕೊಳ್ಳಬಹುದು.

Advertisement

ಟಯರ್‌ ಸವೆತ
ಬಾಲ್‌ ಜಾಯಿಂಟ್ ಹಾಳಾದರೆ ಟಯರ್‌ನ ಒಳ ಮತ್ತು ಹೊರಭಾಗ ಎರಡರಲ್ಲೂ ಸವೆತ ಕಾಣಿಸಿಕೊಳ್ಳಬಹುದು. ಚಕ್ರವನ್ನು ನಿರ್ದಿಷ್ಟ ಸ್ಥಿತಿಯಲ್ಲಿ ಅದು ಹಿಡಿದಿಡದಿರುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ದಿಕ್ಕು ತಪ್ಪುವ ಸ್ಟೀರಿಂಗ್‌
ಬಾಲ್‌ ಜಾಯಿಂಟ್ ಸಂಪೂರ್ಣ ಕೆಟ್ಟರೆ ಸ್ಟೀರಿಂಗ್‌ ವೀಲ್‌ ಎಡಕ್ಕೂ ಬಲಕ್ಕೂ ದಿಕ್ಕು ತಪ್ಪಿದಂತೆ ಹೊರಳಾಡ ಬಹುದು. ಜಾಯಿಂಟ್ ಸವೆತದ ಸಮಸ್ಯೆಯಿಂದ ಬೇಕಾಬಿಟ್ಟಿಯಾಗಿ ತಿರಗುತ್ತದೆ. ಇದರಿಂದ ವೀಲ್‌ ಅಲೈನ್‌ಮೆಂಟ್ ಕೂಡ ಹೋಗಬಹುದು.

ವಾಹನದ ಸಸ್ಪೆನ್ಷನ್‌ ವ್ಯವಸ್ಥೆಗೆ ಬಾಲ್‌ಜಾಯಿಂಟ್ ಅತಿ ಅಗತ್ಯ. ಒಂದು ವೇಳೆ ಈ ಸಮಸ್ಯೆ ಕಂಡುಬಂದರೆ ಕೂಡಲೇ ವಾಹನ ದುರಸ್ತಿ ಪಡಿಸಬೇಕು. ಹೆಚ್ಚಾಗಿ ಆಫ್ರೋಡಿಂಗ್‌ ಹೋಗುವ ವಾಹನಗಳಲ್ಲಿ ಈ ಸಮಸ್ಯೆ ಕಾಣ ಬಹುದು. ಕಾರುಗಳಲ್ಲಿ ಕೆಲವು ಸಾವಿರ ಕಿ.ಮೀ.ಗಳ ವರೆಗೆ ಈ ಸಮಸ್ಯೆ ಕಂಡುಬರುವುದು ಕಡಿಮೆ.

ಈಶ

Advertisement

Udayavani is now on Telegram. Click here to join our channel and stay updated with the latest news.

Next