Advertisement

ಹೇಗೆ ನಡೆಯಿತು ಕಾರ್ಯತಂತ್ರ?

08:34 PM May 24, 2019 | Lakshmi GovindaRaj |

-ಎಡಪಕ್ಷಗಳ ಪ್ರಾಬಲ್ಯವಿದ್ದ ಬುಡಕಟ್ಟು ಪ್ರದೇಶಗಳ ಮೇಲೆ ಬಿಜೆಪಿ ಕಣ್ಣಿಟ್ಟಿತು. ಚುನಾವಣೆಗೂ ಹಲವು ತಿಂಗಳುಗಳ ಮುಂಚೆಯೇ ಆ ಪ್ರದೇಶಗಳಿಗೆ ಆರೆಸ್ಸೆಸ್‌ ಪ್ರವೇಶವಾಯಿತು.

Advertisement

-ಈ ಪ್ರದೇಶಗಳಲ್ಲಿ ಆರೆಸ್ಸೆಸ್‌ ಒಟ್ಟು 150 ಏಕಾಲ್‌ ವಿದ್ಯಾಲಯಗಳನ್ನು ನಿರ್ಮಿಸಿತು. ತಳಮಟ್ಟದಲ್ಲೇ ಪಕ್ಷ ಸಂಘಟನೆಯ ಕೆಲಸ ಶುರು ಮಾಡಿತು.

-ಟಿಎಂಸಿಯೊಳಗೇ ನಾಯಕರಲ್ಲಿನ ಭಿನ್ನಮತವನ್ನು ಅರಿತು, ಬಂಡಾಯ ನಾಯಕರನ್ನು ತನ್ನತ್ತ ಎಳೆದುಕೊಳ್ಳುವಲ್ಲಿ ಬಿಜೆಪಿ ಸಫ‌ಲವಾಯಿತು.

-ಎಡಪಕ್ಷದ ಮತಗಳನ್ನು ಬಿಜೆಪಿಯ ಮತಗಳಾಗಿ ಪರಿವರ್ತಿಸುವಲ್ಲಿ ನಡೆಸಿದ ಕಾರ್ಯತಂತ್ರವೂ ಯಶಸ್ವಿಯಾಯಿತು.

-ಬಂಗಾಳದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಹೊಡೆದೋಡಿಸುವುದಾಗಿ ಪಣ ತೊಡಲಾಯಿತು. ಪ್ರಚಾರ ರ್ಯಾಲಿಗಳಲ್ಲಿ ಈ ವಿಚಾರಕ್ಕೆ ಹೆಚ್ಚು ಆದ್ಯತೆ ನೀಡಲಾಯಿತು.

Advertisement

-ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪಶ್ಚಿಮ ಬಂಗಾಳದಲ್ಲಿ 17ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಿದರು. ಚುನಾವಣೆ 7 ಹಂತಗಳಲ್ಲಿ ನಡೆದಿದ್ದು ಇನ್ನೂ ಅನುಕೂಲವಾಯಿತು.

-ಅಮಿತ್‌ ಶಾ ಅವರು ಅಧ್ಯಕ್ಷರಾದ ಮೇಲೆ ದೀದಿಯ ಭದ್ರಕೋಟೆಗೆ ಬರೋಬ್ಬರಿ 84 ಬಾರಿ ಭೇಟಿ ನೀಡಿದ್ದು, ಪಕ್ಷದ ನಾಯಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿದರು.

-ತಳಮಟ್ಟದಲ್ಲೇ ಪಕ್ಷದ ಸಂಘಟನೆಗೆ ತೊಡಗಿದರು. ಪಕ್ಷಕ್ಕೆ ಅಡಿಪಾಯವೇ ಇಲ್ಲದಂಥ ಒಂದು ರಾಜ್ಯದಲ್ಲಿ ಕಾರ್ಯಕರ್ತರ ದಂಡನ್ನೇ ಹುಟ್ಟುಹಾಕುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next