Advertisement
ಸಂಪುಟಕ್ಕೆ ಸೇರ್ಪಡೆ ಸಂಬಂಧ ಸಿದ್ದರಾಮಯ್ಯ ಒಂದು ಪಟ್ಟಿ, ಡಿ.ಕೆ.ಶಿವಕುಮಾರ್ ಒಂದು ಪಟ್ಟಿ, ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ, ಸುಜೇìವಾಲಾ- ಕೆ.ಸಿ.ವೇಣುಗೋಪಾಲ್ ಅವರ ಬಳಿ ಮತ್ತೂಂದು ಪಟ್ಟಿ ರೆಡಿ ಇತ್ತು. ಆದರೆ ಸಹಮತ ಮೂಡದ ಕಾರಣ ಮೂರೂ ಪಟ್ಟಿಯಲ್ಲಿದ್ದ ಎಂಟು ಮಂದಿ ಸೇರ್ಪಡೆಗೆ ಗ್ರೀನ್ ಸಿಗ್ನಲ್ ದೊರೆಯಿತು ಎಂದು ತಿಳಿದು ಬಂದಿದೆ.
Related Articles
Advertisement
ಬೋಸರಾಜ್‌ಗೆ ವಿರೋಧ: ಇದರ ಜತೆಗೆ ಯಾವುದೇ ಸದನದ ಸದಸ್ಯರಲ್ಲದ ವಿಧಾನಪರಿಷತ್‌ನ ಮಾಜಿ ಸದಸ್ಯ ಎನ್.ಎಸ್.ಬೋಸರಾಜ್ ಹೆಸರು ಮೊದಲ ಪಟ್ಟಿಯಲ್ಲೇ ಸೇರಲು ಒತ್ತಡ ಇತ್ತಾದರೂ, ಬೇರೆ ರೀತಿಯ ಸಂದೇಶ ಹೋಗಬಹುದು ಎಂದು ಕೈ ಬಿಡಲಾಯಿತು ಎಂದು ಹೇಳಲಾಯಿತು.
ಜಮೀರ್‌ಗೆ ಡಿ.ಕೆ. ವಿರೋಧ: ಜಮೀರ್ ಅಹಮದ್ ಅವರ ಹೆಸರನ್ನು ಮೊದಲ ಪಟ್ಟಿಯಲ್ಲಿ ಸೇರಿಸಲು ಡಿ.ಕೆ.ಶಿವಕುಮಾರ್ ಅವರ ವಿರೋಧವಿತ್ತು ಎನ್ನಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಅವ ರು ಪಟ್ಟು ಬಿಡದೆ ಸೇರಿಸಿದರು. ಡಿ.ಕೆ.ಶಿವಕುಮಾರ್ ಪ್ರಸ್ತಾವಿಸಿದ ಮುಸ್ಲಿಂ ಶಾಸಕರ ಬಗ್ಗೆ ಸಿದ್ದರಾಮಯ್ಯ, ತಮ್ಮ ಕ್ಷೇತ್ರ ಹೊರತು ಪಡಿಸಿ ಇನ್ನೊಂದು ಕ್ಷೇತ್ರದಲ್ಲಿ ಮತ ತರದವರಿಗೆ ಅವಕಾಶ ಕೊಡಲು ಆಗದು. ಸ್ಟಾರ್ ಪ್ರಚಾರಕರಾಗಿ 100ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಪಕ್ಷಕ್ಕೆ ಶಕ್ತಿ ತುಂಬಿದ ಜಮೀರ್ ಅಹಮದ್ ಬಿಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹಠ ಹಿಡಿದರು ಎಂದು ಮೂಲಗಳು ಹೇಳಿವೆ. ಆಗ ಇದಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸುಜೇìವಾಲಾ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಹ ಸಮ್ಮತಿಸಿದರು ಎಂದು ಹೇಳಲಾಗಿದೆ.
ಸಾಮಾಜಿಕ ನ್ಯಾಯ ಶನಿವಾರ ಪ್ರಮಾಣ ವಚನ ಸ್ವೀಕಾರ ಮಾಡಿದ ಹತ್ತು ಮಂದಿಯ ಪೈಕಿ ಒಕ್ಕಲಿಗ, ಲಿಂಗಾಯತ ಹಾಗೂ ಹಿಂದುಳಿದ ವರ್ಗದಿಂದ ಒಬ್ಬಬ್ಬರೇ ಪ್ರತಿನಿಧಿ. ಉಳಿದಂತೆ ಎಸ್‌ಸಿ-ಎಸ್‌ಟಿ ಕೋಟಾದ ಬಲಗೈನ ಇಬ್ಬರು, ಎಡಗೈನ ಒಬ್ಬರು, ಪರಿಶಿಷ್ಟ ಪಂಗಡದ ಒಬ್ಬರಿಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಪಸಂಖ್ಯಾಕ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಕ್ಕೆ ಒಂದೊಂದು ಸ್ಥಾನ ನೀಡಲಾಗಿದೆ.