Advertisement

ಟೀಂ ಇಂಡಿಯಾ ಮೆಂಟರ್ ಆಗಿ ಧೋನಿ ಆಯ್ಕೆಯಾಗಿದ್ದು ಹೇಗೆ? ಏನಿದು ಬಿಸಿಸಿಐ ತಂತ್ರ

09:12 AM Sep 09, 2021 | Team Udayavani |

ಮುಂಬೈ: ಟಿ20 ವಿಶ್ವಕಪ್ ಗೆ ಭಾರತ ತಂಡ ಪ್ರಕಟವಾಗಿದೆ. ಹಲವು ಅಚ್ಚರಿಗಳ ತಂಡವನ್ನು ಬಿಸಿಸಿಐ ಬುಧವಾರ ಪ್ರಕಟಿಸಿದೆ. ನಾಲ್ಕು ವರ್ಷಗಳ ಬಳಿಕ ಸ್ಪಿನ್ನರ್ ರವಿ ಅಶ್ವಿನ್ ಟಿ20 ತಂಡಕ್ಕೆ ಆಯ್ಕೆಯಾಗಿದ್ದರೆ, ಪ್ರಮುಖ ಸ್ಪಿನ್ನರ್ ಆಗಿದ್ದ ಯುಜಿ ಚಾಹಲ್ ರನ್ನು ಕೈ ಬಿಡಲಾಗಿದೆ.

Advertisement

ಅದಲ್ಲದೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಈಗಾಗಲೇ ನಾಯಕನಾಗಿ ಟಿ20 ವಿಶ್ವಕಪ್ ಗೆದ್ದಿರುವ ಧೋನಿ ಈ ಬಾರಿ ವಿಶ್ವಕಪ್ ಗೆ ಮೆಂಟರ್ ಆಗಿರಲಿದ್ದಾರೆ.

ಯುಎಇಯಲ್ಲಿ ವಿರಾಟ್ ಕೊಹ್ಲಿ ಮತ್ತು ಅವರ ತಂಡದ ಮಾರ್ಗದರ್ಶಕರಾಗಿ ಬರಲು ಧೋನಿ ಒಪ್ಪಿಕೊಂಡಿದ್ದಕ್ಕೆ ಸಂತೋಷವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದರು.

ಇದನ್ನೂ ಓದಿ:ಮುಂದಿನ ವರ್ಷ ಇಂಗ್ಲೆಂಡ್‌ನ‌ಲ್ಲಿ ಟಿ20, ಏಕದಿನ ಆಡಲಿದೆ ಭಾರತ

ತಂಡ ಪ್ರಕಟಣೆಗೆ ಎರಡು ತಿಂಗಳ ಮುಂಚೆಯೇ ಎಂ.ಎಸ್.ಧೋನಿಯ ಅನುಭವವನ್ನು ಬಳಸಿಕೊಳ್ಳಲು ಜಯ್ ಶಾ ಯೋಚಿಸಿದ್ದರು. ಯುಎಇಯಲ್ಲಿ ಮಾರ್ಗದರ್ಶಕರಾಗಿ ಭಾರತೀಯ ತಂಡದೊಂದಿಗೆ ಕೆಲಸ ಮಾಡುವ ಅವಕಾಶದ ಬಗ್ಗೆ ಧೋನಿಯೊಂದಿಗೆ ಶಾ ಅವರು ವರ್ಚುವಲ್ ಸಂವಾದವನ್ನು ನಡೆಸಿದ್ದರು. ಟಿ 20 ವಿಶ್ವಕಪ್‌ನಲ್ಲಿ ತಮ್ಮ ಪಾತ್ರದ ಬಗ್ಗೆ ಸ್ಪಷ್ಟತೆ ಪಡೆದ ನಂತರ ಧೋನಿ ಬಿಸಿಸಿಐ ಪ್ರಸ್ತಾವನೆಯನ್ನು ಒಪ್ಪಿಕೊಂಡಿದ್ದಾರೆ. ಜಯ್ ಶಾ ನಂತರ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರನ್ನು ಸಂಪರ್ಕಿಸಿ ಈ ವಿಚಾರವನ್ನು ತಿಳಿಸಿದ್ದಾರೆ.

Advertisement

ಬಿಸಿಸಿಐ ಕಾರ್ಯದರ್ಶಿ ಶಾ ನಂತರ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿಯವರೊಂದಿಗೆ ಮಾತನಾಡಿದರು. ರವಿ ಶಾಸ್ತ್ರೀ ಜೊತೆ ಧೋನಿ ಸಮಾನ  ಜವಾಬ್ದಾರಿ ವಹಿಸಲಿದ್ದಾರೆ ಎನ್ನಲಾಗಿದೆ. ರವಿ ಶಾಸ್ತ್ರಿಯವರು ಬಿಸಿಸಿಐ ನ ಈ ಐಡಿಯಾವನ್ನು ಸ್ವಾಗತಿಸಿದ್ದು, ಧೋನಿ ಮಾರ್ಗದರ್ಶಕರಾಗಿ ಬರುತ್ತಿರುವುದಕ್ಕೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲಾ ಆದ ಬಳಿಕವೇ ಶಾ ಈ ವಿಚಾರವನ್ನು ಬಿಸಿಸಿಐ ನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಮತ್ತು ಬುಧವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next