Advertisement

ಸಾರ್ವಜನಿಕ ರಸ್ತೆ ಹೇಗೆ ಬಂದ್ ಮಾಡಿದ್ದೀರಿ: ಶಹೀನ್ ಬಾಗ್ ಪ್ರತಿಭಟನೆಗೆ ಸುಪ್ರೀಂ

09:56 AM Feb 11, 2020 | Nagendra Trasi |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಿಲ್ಲಿಯ ಶಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ನಡೆಸಿದ್ದು, ಪ್ರತಿವಾದಿಗಳ ಅರ್ಜಿ ವಿಚಾರಣೆ ನಡೆಸದೇ ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ಆದೇಶ ನೀಡಿ ಫೆ.17ಕ್ಕೆ ವಿಚಾರಣೆಯನ್ನು ಮುಂದೂಡಿದೆ.

Advertisement

ಜನರಿಗೆ ಪ್ರತಿಭಟನೆ ನಡೆಸಲು ಒಂದು ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಸಂಪೂರ್ಣ ರಸ್ತೆಯನ್ನಾಗಲಿ ಅಥವಾ ನಗರವನ್ನು ಬಂದ್ ಮಾಡುವಂತಿಲ್ಲ ಎಂದು ಅರ್ಜಿ ವಿಚಾರಣೆ ವೇಳೆ ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.

ಶಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರ, ದಿಲ್ಲಿ ಸರ್ಕಾರ ಮತ್ತು ರಾಜ್ಯ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಸಿಎಎ ವಿರೋಧಿ ಪ್ರತಿಭಟನೆ ದೇಶಾದ್ಯಂತ ಗಮನಸೆಳೆಯುತ್ತಿದ್ದಂತೆ ಶಹೀನ್ ಬಾಗ್ ನಲ್ಲಿಯೂ ಪ್ರತಿಭಟನೆ ಆರಂಭವಾಗಿತ್ತು. ಇದರಲ್ಲಿ ಮುಸ್ಲಿಂ ಮಹಿಳೆಯರು ಹೆಚ್ಚಾಗಿ ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next