Advertisement

ಧರ್ಮದ ದೇಶ; ಬಿಜೆಪಿಯವರು ಹಿಂದೂ ದೇಶ ಮಾಡಲು ಹೇಗೆ ಸಾಧ್ಯ, ಸಚಿವ ತಂಗಡಗಿ ಪ್ರಶ್ನೆ?

03:04 PM Dec 19, 2023 | Team Udayavani |

ಗಂಗಾವತಿ: ಸಾವಿರಾರು ವರ್ಷ ಭಾರತವನ್ನು ಆಳಿದ ಮುಸ್ಲಿಂ ಹಾಗೂ ಕ್ರೈಸರಿಗೆ ಅವರವರ ಧರ್ಮದ ದೇಶ ಮಾಡಲು ಸಾಧ್ಯವಾಗಿಲ್ಲ. ಹಲವು ಸಂಸ್ಕೃತಿ, ಜಾತಿ, ಭಾಷೆ, ಪ್ರಾಂತ್ಯವುಳ್ಳ ಭಾರತವನ್ನು ಬಿಜೆಪಿಯವರು ಹಿಂದೂ ರಾಷ್ಟ್ರ ಮಾಡುವ ಯತ್ನ ಕಾರ್ಯ ಸಾಧ್ಯವಲ್ಲ ಎಂದು ಕನ್ನಡ ಸಂಸ್ಕೃತಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ತಿಳಿಸಿದರು.

Advertisement

ಅವರು ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿರಿಯರ ತ್ಯಾಗ ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ವಿಶ್ವದಲ್ಲಿ ಶ್ರೇಷ್ಠ ಸಂವಿಧಾನದ ಮೂಲಕ ಅಂಬೇಡ್ಕರ್ ದೇಶದ ವಿವಿಧತೆಯಲ್ಲಿ ಏಕತೆ ಸಾರುವ ಪ್ರಜಾಪ್ರಭುತ್ವ ವ್ಯವಸ್ಥೆ ಅನುಷ್ಠಾನ ಮಾಡಿದ್ದಾರೆ ಎಂದರು.

ಬಿಜೆಪಿಯವರು ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಹೇಳಿಕೆಯಿಂದ ಕ್ರೈಸ್ತ, ಮುಸ್ಲಿಂ, ಸಿಖ್ ಸೇರಿ ನೂರಾರು ಜಾತಿಯವರಿಗೆ ನೋವಾಗುತ್ತದೆ. ಓಟ್ ಬ್ಯಾಂಕ್ ರಾಜಕೀಯ ಮಾಡಲು ಬಿಜೆಪಿಯವರು ಹಿಂದೂ ರಾಷ್ಟ್ರದ ಜಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ದೇಗುಲ ಸಂಸತ್ತಿನ ಮೇಲೆ ಬಿಜೆಪಿ ಆಡಳಿತ ಅವಧಿಯಲ್ಲಿ ದಾಳಿ ನಡೆದರೂ ಪ್ರಧಾನಿ ಮೋದಿ, ಗೃಹ ಸಚಿವರು, ರಕ್ಷಣಾ ಸಚಿವರು ಪಾರ್ಲಿಮೆಂಟ್ ನಲ್ಲಿ ಮಾತನಾಡಿಲ್ಲ ಎಂದರು.

Advertisement

ದೇಶದೊಳಗೆ ನೂರಾರು ಕೆಜಿ ಆರ್ ಡಿ ಎಕ್ಸ್ ಪೂರೈಕೆ ಮಾಡಿದರೂ ಸೈನಿಕರು ಹುತಾತ್ಮರಾದರೂ ಪ್ರಧಾನಿ ಘಟನೆ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಹಾಗೂ ಪತ್ರಿಕಾ ಮಾಧ್ಯಮವರ ಜತೆ ಮಾತನಾಡಿಲ್ಲ. ಇಂತಹ ಬಿಜೆಪಿಯವರಿಗೆ ದೇಶ ಜನತೆಯ ಬಗ್ಗೆ ಗೌರವವಿಲ್ಲ ಎಂದು ಹೇಳಿದರು.

ಅಧಿಕಾರದ ಆಸೆಯಿಂದ ಧರ್ಮ, ಜಾತಿ, ಶ್ರೀ ರಾಮ, ಆಂಜನೇಯ ಎಂದು ಸುಳ್ಳು  ಭಾಷಣ ಮಾಡುತ್ತಿದ್ದಾರೆ. ಬಿಜೆಪಿಯವರ ಕನಸು ನನಸಾಗುವುದಿಲ್ಲ. ದೇಶದ ಜನರ ಬಡತನ,ನಿರುದ್ಯೋಗ, ಮನೆ,ಶಿಕ್ಷಣ, ಆರೋಗ್ಯ, ಒಕ್ಕೂಟ ವ್ಯವಸ್ಥೆ ಮಾಡುವ ಬಗ್ಗೆ ಬಿಜೆಪಿಯವರು ಎಂದಿಗೂ ಮಾತನಾಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next