Advertisement
ಗ್ರೀನ್ ಪಾರ್ಕ್ ವಸತಿ ಸಮುತ್ಛಯದಲ್ಲಿ ಆಯೋಜಿಸಲಾಗಿದ್ದ ಫ್ಯ್ಲಾಟ್‌ಗಳ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ಸಮೀಪದ ಕೆಂಗೇರಿ, ಮಂಗಳೂರು ಮತ್ತು ಕಲಬುರಗಿಯಲ್ಲಿ 3 ವರ್ಷಗಳಿಂದ ದರ, ಸ್ಥಳ ಮತ್ತು ಪ್ರಚಾರದ ಕೊರತೆಯಿಂದ ಬಾಕಿ ಉಳಿದಿದ್ದ ಫ್ಯ್ಲಾಟ್‌ಗಳಿಗೆ ಶೇ.10ರಷ್ಟು ರಿಯಾಯಿತಿ ನೀಡುವ ಮೂಲಕ ಸುಮಾರು 10 ಸಾವಿರ ವಿಲೇವಾರಿಗೆ ಚಾಲನೆ ನೀಡಿದ್ದೇನೆ. ಕರ್ನಾಟಕ ರಾಜ್ಯೋತ್ಸವದ ಕೊಡುಗೆಯಾಗಿ ಕಲಬುರಗಿಯ ಈ ಸಮುತ್ಛಯದಲ್ಲಿ ಖರೀದಿಸುವ ಗ್ರಾಹಕರಿಗೆ ಶೇ.2ರಷ್ಟು ಹೆಚ್ಚುವರಿ ರಿಯಾಯಿತಿ ಸಹ ನೀಡಲಾಗುತ್ತಿದೆ ಎಂದು ಹೇಳಿದರು.
Related Articles
ಮಾರಾಟಕ್ಕೆ ಲಭ್ಯವಿದೆ. 2 ಬಿಎಚ್‌ಕೆ ಫ್ಯ್ಲಾಟ್‌ಗಳ ಮೊತ್ತ 15,22,880 ರೂ. ಹಾಗೂ 2.5 ಬಿಎಚ್‌ಕೆ ಪ್ಲಾಟ್‌ಗಳ
ಮೊತ್ತ 20,38,800 ರೂ. ನಿಗದಿಪಡಿಸಲಾಗಿದೆ. ಪ್ರಾಪರ್ಟಿ ಎಕ್ಸಪೋ ಅಂಗವಾಗಿ ಮೌಲ್ಯದಲ್ಲಿ ಶೇ.2ರಷ್ಟು ವಿಶೇಷ
ರಿಯಾಯಿತಿ ಮತ್ತು 12 ತಿಂಗಳ ಹಣ ಪಾವತಿಗೆ ವಿಶೇಷ ಅವಕಾಶ ಕಲಬುರಗಿ ಜನರಿಗೆ ನೀಡಲಾಗುತ್ತಿದೆ ಎಂದು
ಮಂಡಳಿ ಉಪ ಪ್ರಧಾನ ವ್ಯವಸ್ಥಾಪಕ ಸುರೇಶ ಮಾಹಿತಿ ನೀಡಿದರು.
Advertisement
ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕರ್ನಾಟಕ ಗೃಹ ಮಂಡಳಿ ಆಯುಕ್ತ ಬಿ.ಶಿವಮೂರ್ತಿ, ನಿರ್ದೇಶಕ ಅನೀಲಸಿಂಗ್, ಮುಖ್ಯ ಅಭಿಯಂತ ಗಣೇಶ, ಕಾರ್ಯಪಾಲಕ ಅಭಿಯಂತ ಕೆ.ಎನ್.
ಕುಲಕರ್ಣಿ, ಸಹಾಯಕ ಕಾರ್ಯಪಾಲಕ ಅಭಿಯಂತ ಪಾಶಾ, ಎಪಿಎಂಸಿ ನಿರ್ದೇಶಕ ಭೂಕಾಂತಗೌಡ ಎಸ್.
ಪಾಟೀಲ, ರಾಜ್ಯ ಖಾದಿ ಮಂಡಳಿ ನಿರ್ದೇಶಕ ಮಲ್ಲಿನಾಥ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವಣಪ್ಪ ಪಾಟೀಲ
ಅಂಕಲಗಿ, ಮುಖಂಡರಾದ ಶಿವಪುತ್ರಪ್ಪ ಕರೂರ, ಚಂದ್ರಕಾಂತ ಬಸನಾಳ, ಬಸಣ್ಣಗೌಡ ತಿಪ್ಪಶೆಟ್ಟಿ ಸರಡಗಿ
ಇದ್ದರು.