Advertisement

ಉದ್ಘಾಟನೆಯಾಗದ ವಸತಿ ಸಮುಚ್ಛಯ

04:42 PM Oct 14, 2019 | Team Udayavani |

ತಿಪಟೂರು: ಸರ್ಕಾರ ಪೊಲೀಸರಿಗೆ ಉತ್ತಮ ಸೌಲಭ್ಯ ನೀಡಲು ತಿಪಟೂರು ನಗರದ ಪೊಲೀಸ್‌ ಕ್ವಾಟ್ರಸ್‌ ಬಳಿ ಸುಮಾರು 3.60 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಹಾಗೂ ಹೇಮಾವತಿ ವಸತಿ ಸಮುಚ್ಛಯ ನಿರ್ಮಿಸಿದ್ದು, ಒಟ್ಟು 24 ಮನೆಗಳುಳ್ಳ ಸಮುತ್ಛಯಗಳು ನಿರ್ಮಾಣಗೊಂಡು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

Advertisement

ಸರ್ಕಾರದ ಆಶಯದಂತೆ ಉದ್ಘಾಟನೆಗೊಂಡು ಪೊಲೀಸರಿಗೆ ಸೂರು ಒದಗಿಸಬೇಕಿದ್ದ ಸಮುಚ್ಛಯಗಳು ಖಾಲಿಬಿದ್ದಿವೆ. ಪೊಲೀಸ್‌ ಸಿಬ್ಬಂದಿ ವಾಸವಾಗಿರುವ ಮನೆಗಳು ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿ ಮಳೆ ಬಂತೆಂದರೆ ಸೋರುವ ಸೂರು ಬಿರುಕು ಬಿಟ್ಟ ಗೋಡೆಗಳ ಮನೆಯಲ್ಲಿ ಇಲಿ ಹಾವುಗಳ ಕಾಟದ ನಡುವೆಯೇ ವಾಸ ಮಾಡಬೇಕಿದೆ.

ಪೊಲೀಸ್‌ ಇಲಾಖೆಯ ಮೇಲಧಿಕಾರಿಗಳು ಸಿಬ್ಬಂದಿ ಸಮಸ್ಯೆ ಅರಿತು ನಿರ್ಮಾಣವಾಗಿರುವ ವಸತಿ ಸಮುತ್ಛಯಉದ್ಘಾಟನೆ ಮಾಡಿ ಸಿಬ್ಬಂದಿ ವಾಸಕ್ಕೆ ನೀಡಬೇಕಿದೆ. 30-40 ವರ್ಷದ ಹಿಂದೆ ನಿರ್ಮಿಸಿರುವ ಮನೆಗಳಲ್ಲಿ ಪೊಲೀಸರು ವಾಸವಿದ್ದು, ಅವುಗಳು ಶಿಥಿಲವಾಗಿವೆ. ಮಳೆಗಾಲದಲ್ಲಿ ಛಾವಣಿ ಸೋರುತ್ತಿವೆ. ಬಿರುಕು ಬಂದಿರುವ ಗೋಡೆ, ಇಲಿ-ಹಾವುಗಳ ಕಾಟದಿಂದ ವಾಸಿಸಲು ಭಯವಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಬಳಿ ಹೇಳಿಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next