Advertisement

ಮೌಡ್ಯಕ್ಕೆ ಬಲಿಯಾದ ಗೃಹಿಣಿ

12:30 AM Jan 01, 2019 | |

ಮುಂಬಯಿ: ಮಕ್ಕಳ ವಿಚಾರದಲ್ಲಿ ಗಂಡು, ಹೆಣ್ಣೆಂಬ ಬೇಧ ಬೇಡ ಎಂಬ ಅರಿವನ್ನು ಮೂಡಿಸಲು ಸರಕಾರಗಳು ದಶಕಗಳಿಂದ ಪ್ರಯತ್ನಿಸುತ್ತಿದ್ದರೂ, ದೇಶದ ಕೆಲವು ಭಾಗಗಳಲ್ಲಿ ಅದರ ಪ್ರಭಾವ ಅಷ್ಟಾಗಿ ಆಗಿಲ್ಲ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ, ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಜಲ್ಗಾಂವ್‌ ಪಟ್ಟಣದಲ್ಲಿ ಹಿರಿಯರ ಗಂಡು ಸಂತಾನದ ದುರಾಸೆಗೆ ಗೃಹಿಣಿಯೊಬ್ಬರು ಬಲಿಯಾಗಿದ್ದಾರೆ. ಮೀರಾ ಎಖಾಂಡೆ ಅವರು ಮೃತ ದುರ್ದೈವಿ. 

Advertisement

ಮಜಲ್ಗಾಂವ್‌ನಲ್ಲಿ ಪಾನ್‌ ಬೀಡಾ ಅಂಗಡಿ ನಡೆಸುತ್ತಿದ್ದ ಮೀರಾ, ಏಳು ಹೆಣ್ಣುಮಕ್ಕಳ ತಾಯಿ. ಇದಾದ ನಂತರ ಆಕೆ ಎರಡು ಬಾರಿ ಗರ್ಭಿಣಿಯಾದಾಗಲೂ ಪ್ರಸವ ಪೂರ್ವ ಪರೀಕ್ಷೆಗಳಿಂದ ಗರ್ಭದಲ್ಲಿರುವುದು ಹೆಣ್ಣು ಮಗುವೆಂದು ದೃಢಪಡಿಸಿಕೊಂಡಿದ್ದ ಅವರ ಗಂಡನ ಮನೆಯವರು ಗರ್ಭಪಾತ ಮಾಡಿಸಿದ್ದರು. “ಗಂಡು ಮಗು ಬೇಕೇ ಬೇಕು’ ಎಂದು ಆಕೆಯ ಮೇಲೆ ಒತ್ತಡವಿದ್ದಿದ್ದರಿಂದ ಹತ್ತನೇ ಬಾರಿ ಗರ್ಭಿಣಿಯಾಗಿದ್ದರು. 24 ವಾರಗಳ ಗರ್ಭಿಣಿಯಾಗಿದ್ದ ಅವರು ಶನಿವಾರ ಆಸ್ಪತ್ರೆಗೆ ದಾಖಲಾಗಿ ಗರ್ಭದಲ್ಲೇ ತೀರಿ ಹೋದ ಮಗುವಿಗೆ ಜನ್ಮ ನೀಡಿದ್ದಾರೆ. ಈ ಹೆರಿಗೆಯ ವೇಳೆ ಅಧಿಕವಾದ ರಕ್ತಸ್ರಾವವಾಗಿದ್ದರಿಂದ ಅವರು ಹೆರಿಗೆ ಸಂದರ್ಭದಲ್ಲೇ ತೀರಿ ಹೋದರೆಂದು ಆಸ್ಪತ್ರೆಯ ಮೂಲಗಳು ಹೇಳಿವೆ. ಆಧುನಿಕತೆಯ ನೆರಳಲ್ಲಿ ಭಾರತ ಬದಲಾಗುತ್ತಿದ್ದರೂ ಜನರ ಮೌಡ್ಯ ಮಾತ್ರ ಇನ್ನೂ ಹಾಗೆಯೇ ಉಳಿದಿದೆ ಎಂಬುದನ್ನು ಈ ಪ್ರಕರಣ ಸಾಬೀತು ಪಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next