ಕೊಟ್ಟಾಯಂ: ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಸುರಿಯುತ್ತಿರುವ ಭಾರೀ ಮಳೆಗೆ ನೆರೆ ರಾಜ್ಯ ಕೇರಳ ತತ್ತರಿಸಿದೆ. ನಿರಂತರ ಮಳೆ ಮತ್ತು ಭೂಕುಸಿತದ ಪರಿಣಾಮ ಕೊಟ್ಟಾಯಂ, ಇಡುಕ್ಕಿ ಮತ್ತು ಆಲಪ್ಪುಳದಲ್ಲಿ ಭಾರೀ ನಷ್ಟ ಉಂಟಾಯಿತು.
ಕೊಟ್ಟಾಯಂ ಜಿಲ್ಲೆಯ ಮುಂದಾಕಾಯಂ ನಲ್ಲಿ ಮನೆಯೊಂದು ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಮಳೆ ನದಿಗೆ ಉರುಳುತ್ತಿರುವ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
ನದಿಯ ಬಳಿಯಿರುವ ಮನೆಯೊಂದು ನಿಧಾನಕ್ಕೆ ಜಾರುತ್ತಾ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನದಿಯಲ್ಲಿ ಭಾರೀ ಸೆಳವಿದ್ದು, ಕೊಚ್ಚಿಕೊಂಡು ಹೋಗಿದೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!
ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅದರಲ್ಲೂ ಕೊಟ್ಟಾಯಂ, ಇಡುಕ್ಕಿ ಜಿಲ್ಲೆಗಳಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ. ಶನಿವಾರ ಆರು ಮಂದಿ ಸಾವನ್ನಪ್ಪಿದ್ದು, ಭಾನುವಾರು 20 ಶವಗಳು ದೊರೆತಿದೆ.
ಮೇಘಸ್ಫೋಟ ಅಲ್ಲ: ಇದೇ ವೇಳೆ, ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಡಾ. ಮೃತ್ಯುಂಜಯ ಅವರು ಕೇರಳದ ಈ ಸ್ಥಿತಿಗೆ ಮೇಘಸ್ಫೋಟ ಕಾರಣ ಎಂಬ ಅಂಶವನ್ನು ತಳ್ಳಿಹಾಕಿದ್ದಾರೆ. ಅರಬ್ಬೀ ಸಮುದ್ರದಲ್ಲಿನ ವಾಯುಭಾರ ಕುಸಿತ ಹಾಗೂ ಭಾರೀ ಗಾಳಿಯಿಂದಾಗಿ ಈ ಪರಿ ಮಳೆಯಾಗುತ್ತಿದೆಯೇ ವಿನಾ ಇದನ್ನು ಮೇಘಸ್ಫೋಟ ಎಂದು ಕರೆಯಲಾಗದು ಎಂದಿದ್ದಾರೆ.