ಬೆಂಗಳೂರು: ತನ್ನ ಸಹಚರರ ಜತೆ ಗೂಡಿ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಚನ್ನರಾಯಪಟ್ಟಣದ ಅಯ್ಯಪ್ಪ ಅಲಿಯಾಸ್ ಮುರುಗೇಶ್ (36) ಹಾಗೂ ರವಿ ಅಲಿಯಾಸ್ ಚೀಲರವಿ (26) ಸೇರಿದಂತೆ ನಾಲ್ವರು ಬಂಧಿತರು. ಆರೋಪಿಗಳಿಂದ 7 ಸಾವಿರ ರೂ. ನಗದು ಸೇರಿ 15.53 ಲಕ್ಷ ರೂ ಮೌಲ್ಯದ 261 ಗ್ರಾಂ ಚಿನ್ನಾಭರಣ, 500 ಬೆಳ್ಳಿ, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದಾಗಿ 9 ಪ್ರಕರಣಗಳನ್ನು ಪತ್ತೆ ಆಗಿದ್ದು 15.53 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ನಂದಿನಿಲೇಔಟ್‌ನ ರೈಲ್ವೇ ಮೈನ್ಸ್ ಕಾಲೋನಿಯಲ್ಲಿ ವಾಸವಿದ್ದ ವ್ಯಕ್ತಿ ಯೊಬ್ಬರು ಕಳೆದ ಅ.22ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಸ್ವಂತ ಊರಿಗೆ ಹೋಗಿ ವಾಪಸ್ಸು ಬಂದು ನೋಡಿದಾಗ, ಚಿನ್ನಾಭರಣ ಮತ್ತು ನಗ ದು ಕಳವು ಮಾಡಲಾಗಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ಮುರುಗೇಶ್ ಈ ಹಿಂದೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಬಂದಿರುವುದನ್ನು ಆರೋಪಿಯೊಬ್ಬ ಬಾಯ್ಬಿಟ್ಟಿದ್ದಾನೆ. ಆರೋಪಿ ರವಿ ಈಗಾಗಲೇ 9 ಕನ್ನ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದಾನೆ.
ಜತೆಗೆ ಮಾಲೀಕರು ಮನೆಗೆ ಬೀಗ ಹಾಕಿ ಕೀಯನ್ನು ಕಿಟಕಿಯಲ್ಲಿ, ಹೂವಿನ ಕುಂಡಗಳಲ್ಲಿ ಇಟ್ಟು ಹೊರಗೆ ಹೋಗುವುದನ್ನು ಗಮನಿಸಿಕೊಂಡು ಆರೋಪಿಗಳು ಕಳವು ಮಾಡುತ್ತಿದ್ದಾಗಿ ಮತ್ತು ಕೆಲವು ಕೃತ್ಯಗಳಲ್ಲಿ ಮನೆಯ ಡೋರ್ ಲಾಕನ್ನು ಕಬ್ಬಿಣದ ರಾಡಿನಿಂದ ಮೀಟಿ ಕಳವು ಮಾಡುತ್ತಿದ್ದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಆರೋಪಿಗಳ ಬಂಧನದಿಂದ 5 ಪ್ರಕರಣಗಳು ಪತ್ತೆಯಾಗಿವೆ.