Advertisement

House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!

04:12 AM Jan 05, 2025 | Team Udayavani |

ವಾಷಿಂಗ್ಟನ್‌: ಅಮೆರಿಕದ 119ನೇ ಅಮೆರಿಕ ಕಾಂಗ್ರೆಸ್‌(ಸಂಸತ್ತು) ಔಪಚಾರಿಕವಾಗಿ ಆರಂಭವಾಗಿದೆ. ವಿಶೇಷವೆಂದರೆೆ, ಜನಪ್ರತಿನಿಧಿಗಳ ಸಭೆಯಲ್ಲಿ ಈ ಬಾರಿ 4 ಹಿಂದೂಗಳಿದ್ದು, ಈವರೆಗಿನ ಹಿಂದೂ ಅಲ್ಪಸಂಖ್ಯಾತರ ಗರಿಷ್ಠ ಸಂಖ್ಯೆಯಾಗಿದೆ. ಹಾಗಿದ್ದೂ, ಒಟ್ಟಾರೆ 6 ಅಮೆರಿಕನ್‌ ಭಾರತೀಯರು ಪ್ರಮಾಣವಚನ ಸ್ವೀಕರಿಸಿದ್ದಾರೆ.

Advertisement

6 ಇಂಡಿಯನ್‌ ಅಮೆರಿಕನ್‌ ಪೈಕಿ ಸುಹಾಸ್‌ ಸುಬ್ರಮಣಿಯಂ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ ಮತ್ತು ಶ್ರೀ ಥಾಣೆದಾರ್‌ ಹಿಂದೂ ಎಂದು ಗುರುತಿಸಿಕೊಂಡಿದ್ದಾರೆ. ಇನ್ನು ಪ್ರಮೀಳಾ ಜಯಪಾಲ್‌ ಧಾರ್ಮಿಕವಾಗಿ ಗುರುತಿಸಿಕೊಂಡಿಲ್ಲ ಮತ್ತು ಡಾ.ಆ್ಯಮಿ ಬೇರಾ ಅವರು ಏಕತಾವಾದಿಯಾಗಿ ಗುರುತಿಸಿಕೊಂಡಿದ್ದಾರೆ. 117ನೇ ಅಮೆರಿಕ ಸಂಸತ್ತಿನಲ್ಲಿ 5 ಇಂಡಿಯನ್‌ ಅಮೆರಿಕನ್ನರಿದ್ದರು.

ಈ ಬಾರಿಯೂ ಅಮೆರಿಕದ ಸಂಸತ್ತಿನಲ್ಲಿ ಕ್ರಿಶ್ಚಿಯನ್‌ ಸಮುದಾಯದವರೇ ಹೆಚ್ಚಿದ್ದಾರೆ. 14 ಜನಪ್ರತಿನಿಧಿಗಳು ಕ್ರಿಶ್ಚಿಯನ್‌ನೇತರ ಹಾಗೂ ಯಹೂದಿಗಳೇತರಾಗಿದ್ದಾರೆ. ಇವರೆಲ್ಲರೂ ಡೆಮಾಕ್ರಟಿಕ್‌ ಪಕ್ಷಕ್ಕೆ ಸೇರಿದ್ದಾರೆ. ಯಹೂದಿಗಳ(13) ನಂತರ 4 ಹಿಂದೂಗಳು, 3 ಮುಸ್ಲಿಮರು ಮತ್ತು 3 ಬೌದ್ಧರಿದ್ದಾರೆ. ಇನ್ನು ಶೇ.98 ರಿಪಬ್ಲಿಕನ್ನರು ಮತ್ತು ಶೇ.75ರಷ್ಟು ಡೆಮಾಕ್ರಟ್‌ಗಳು ಕ್ರಿಶ್ಚಿಯನ್‌ ಎಂದು ಗುರುತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next