Advertisement

ಭೂಗ್ರಹದ ಸಮೀಪವೇ ಹಾದು ಹೋಗುತ್ತೆ ಕ್ಷುದ್ರ ಗ್ರಹ

07:35 AM Oct 12, 2017 | Harsha Rao |

ಲಂಡನ್‌: ಒಂದು ಮನೆಯಷ್ಟು ದೊಡ್ಡ ಗಾತ್ರದ ಕ್ಷುದ್ರಗ್ರಹವೊಂದು ಈ ವಾರ ಭೂಮಿಯ ಸಮೀಪ  ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ ಇದು ಭೂಮಿಯ ಮೇಲ್ಪದರದಿಂದ ಸಾಕಷ್ಟು ದೂರದಲ್ಲಿ ಹಾದುಹೋಗಲಿರುವುದರಿಂದ ಯಾವುದೇ ಅಪಾಯವಿಲ್ಲ. 2012 ಟಿಸಿ4 ಎಂಬ ಹೆಸರಿನ ಈ ಕ್ಷುದ್ರಗ್ರಹ 44 ಸಾವಿರ ಕಿ.ಮೀ. ದೂರದಲ್ಲಿ ಹಾದುಹೋಗಲಿದೆ. ಇಲ್ಲಿಂದ ಸ್ವಲ್ಪವೇ ದೂರದಲ್ಲಿ ಎಂದರೆ 36 ಸಾವಿರ ಕಿ.ಮೀ. ದೂರದಲ್ಲಿ ಸಾಕಷ್ಟು ಪ್ರಮಾಣದ ಸ್ಯಾಟಲೈಟ್‌ಗಳು ಪರಿಭ್ರಮಿಸುತ್ತಿರುತ್ತವೆ. ಆದರೆ ಸ್ಯಾಟಲೈಟ್‌ಗಳಿಗೂ ಈ ಕ್ಷುದ್ರಗ್ರಹದಿಂದ ಯಾವುದೇ ಅಪಾಯವಿಲ್ಲ ಎಂದು ನಾಸಾದ ವಿಜ್ಞಾನಿ ಮೈಕ್‌ ಕೆಲ್ಲಿ ಹೇಳಿದ್ದಾರೆ. ಕಳೆದ ಎರಡು ತಿಂಗಳಿಂದ ನಾಸಾ ಈ ಕ್ಷುದ್ರಗ್ರಹದ ಅಧ್ಯಯನ ನಡೆಸುತ್ತಿದೆ. ಆಸ್ಟ್ರೇಲಿಯಾ ಭಾಗದಲ್ಲಿ ಇದು ಹಾದುಹೋಗಲಿದೆ ಎನ್ನಲಾಗಿದೆ.

Advertisement

2070ರಲ್ಲಿ ಅಪ್ಪಳಿಸಲಿದೆ ಈ ಕ್ಷುದ್ರಗ್ರಹ: ಈ ಕ್ಷುದ್ರಗ್ರಹವು ಭೂಮಿಯನ್ನಾಗಲೀ ಅಥವಾ ಸ್ಯಾಟಲೈಟ್‌ಗಳನ್ನಾಗಿ ಹಾದು ಹೋಗುವ ಸಾಧ್ಯತೆಯಿಲ್ಲ. ಆದರೆ ಇದು ಇನ್ನೊಮ್ಮೆ 2050ರಲ್ಲಿ ಭೂಮಿಗೆ ಸಮೀಪದಲ್ಲಿ ಹಾದುಹೋಗಲಿದೆ. ಸದ್ಯದ ಅಂಕಿ ಅಂಶದ ಪ್ರಕಾರ ಇದು 2050ರಲ್ಲೂ ಭೂಮಿಗೆ ಅಪ್ಪಳಿಸುವುದಿಲ್ಲ. ಆದರೆ ಮತ್ತೂಂದು ಬಾರಿ, ಅಂದರೆ 2070ರಲ್ಲಿ ಭೂಮಿಯನ್ನು ಹಾದು ಹೋಗುವಾಗ ಅಪ್ಪಳಿಸುವ ಸಾಧ್ಯತೆಯಿದೆ.

ವಿಜ್ಞಾನಿಗಳಿಗೆ ಸವಾಲು: ಟಿಸಿ4 ಕ್ಷುದ್ರಗ್ರಹದ ಬಗ್ಗೆ ಅಧ್ಯಯನ ನಡೆಸುವುದಕ್ಕೆ ವಿಜ್ಞಾನಿಗಳಿಗೆ ಇದು ಸೂಕ್ತ ಕಾಲವಾಗಿದೆ. ವೈಜ್ಞಾನಿಕ ವಿಶ್ಲೇ ಷಣೆಯ ನಿಖರತೆ ಸಾಬೀತುಪಡಿಸಲೂ ಇದು ಪ್ರಮುಖವಾಗಿದೆ. ಅಲ್ಲದೆ ಇದರಿಂದ ಕ್ಷುದ್ರ ಗ್ರಹದ‌ ರಚನೆಗೆ ಕಾರಣವಾದ ಅಂಶವನ್ನು ಕಂಡುಹಿಡಿಯ ಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next