Advertisement
ಮಳೆ ಮತ್ತು ಚಳಿಗಾಲಕ್ಕೆ ಹೆಸರುವಾಗಿರುವಸಕಲೇಶಪುರದಲ್ಲಿ ಇದೀಗ ಬಿಸಿಲಿನ ಆರ್ಭಟ ಮಿತಿಮೀರಿದ್ದು ಬಯಲು ಸೀಮೆಯ ಪ್ರದೇಶಗಳ ಬಿಸಿಲನ್ನು ನಾಚಿಸುವಂತೆ ತಾಲೂಕಿನಲ್ಲಿ ಬಿಸಿಲುಏರುತ್ತಿದೆ. ಬಡವರ ಊಟಿಯೆಂದೆ ಖ್ಯಾತವಾಗಿರುವಸಕಲೇಶಪುರದ ವಾತಾವರಣ, ಗುಡ್ಡಗಾಡುಗಳಿಗೆಮನ ಸೋತು ಬ್ರಿಟಿಷರು, ಟಿಪ್ಪು, ಐಗೂರುಪಾಳೇಗಾರರು ಸೇರಿದಂತೆ ಇನ್ನು ಹಲವಾರು ರಾಜಮಹಾರಾಜರು ಪಾಳೇಗಾರರು ತಾಲೂಕಿಗೆ ಹೊರ ಊರುಗಳಿಂದ ಬಂದು ಹೋಗುತ್ತಿದ್ದರು.
Related Articles
Advertisement
ಕೆಲವೆಡೆ ಜಲ ಮೂಲಗಳೆ ಬತ್ತಿಹೋಗುತ್ತಿದ್ದು ಕೃಷಿಚಟುವಟಿಕೆಗಳಿರಲಿಕುಡಿಯುವ ನೀರಿಗಾಗಿ ಸಹ ಪರದಾಡಬೇಕಾದ ಪರಿಸ್ಥಿತಿ ಮಲೆನಾಡಿನಲ್ಲಿ ಅಲ್ಲಲ್ಲಿಉಂಟಾಗಿದೆ. ಜಾನುವಾರುಗಳು ಕಾಡುಪ್ರಾಣಿಗಳುಸಹ ಬಿಸಿಲಿನಿಂದ ಪರದಾಡುತ್ತಿದ್ದುಕುಡಿಯುವ ನೀರಿಗಾಗಿ ಹುಡುಕಾಟ ಮಾಡುವಪರಿಸ್ಥಿತಿ ಜಾನುವಾರುಗಳು ಹಾಗೂ ಕಾಡುಪ್ರಾಣಿಗಳಿಗೆಉಂಟಾಗಿದೆ.
ಫ್ಯಾನ್ ಹಾಗೂ ಗಾಳಿ ಬೀಸುವ ವಸ್ತುಗಳಿಗೆ ಮೊರೆ: ಈ ಹಿಂದೆ ಮಲೆನಾಡಿನಲ್ಲಿ ಜನಫ್ಯಾನ್, ಎ.ಸಿಗಳನ್ನುಅಷ್ಟಾಗಿ ಬಳಸುತ್ತಿರಲಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿ ಕುಟುಂಬಗಳು ಅನಿವಾರ್ಯವಾಗಿ ಫ್ಯಾನ್ ಬಳಸುತ್ತಿದ್ದು ಜೊತೆಗೆ ಏರ್ ಕೂಲರ್, ಎಸಿಗಳನ್ನುಕೆಲವು ಕುಟುಂಬಗಳುಬಳಸುತ್ತಿದೆ. ಜನ ಬಿಸಿಲಿನಿಂದರಕ್ಷಣೆ ಪಡೆಯಲು ಮರಗಳ ಅಡಿಗಳಲ್ಲಿ,ಗಾಳಿ ಬೀಸುವ ವಸ್ತುಗಳಿಗೆ ಮೊರೆ ಹೋಗುತ್ತಿದ್ದಾರೆ.ಬಿಸಿಲ ಧಗೆಯಿಂದ ತಂಪು ಪಾನೀಯಗಳ ಮಾರಾಟಭರ್ಜರಿಯಾಗಿದ್ದು ಜನ ತಂಪು ಪಾನೀಯಗಳನ್ನುಹಣ್ಣು ಹಂಪಲುಗಳನ್ನು ಹೆಚ್ಚಾಗಿ ಬಳಸಲುಆರಂಭಿಸಿದ್ದಾರೆ. ಎಳನೀರು ಹಾಗೂ ಕಲ್ಲಂಗಡಿಹಣ್ಣುಗಳ ಬಳಕೆ ಹೆಚ್ಚಾಗಿದ್ದು ಇದರಿಂದಮಾರಾಟಗಾರರು ಉತ್ತಮ ಲಾಭ ಕಾಣುತ್ತಿದ್ದಾರೆ.
ಆರೋಗ್ಯದ ಮೇಲೆ ಪರಿಣಾಮ: ಅತಿಯಾದಬಿಸಿಲಿನಿಂದ ಜನರ ಆರೋಗ್ಯದ ಮೇಲೆದುಷ್ಪರಿಣಾಮ ಬೀರುತ್ತಿದೆ. ಮಿತಿ ಮೀರಿದ ತಂಪುಪಾನೀಯ ಹಾಗೂ ನೀರಿನ ಬಳಕೆಯಿಂದ ಜನ ಶೀತ ಸಂಬಂಧಿತ ರೋಗಗಳಿಗೆ ತುತ್ತಾಗುತ್ತಿದ್ದಾರೆ.ಬಿಸಿಲಿನಲ್ಲೇ ಕಾರ್ಯ ನಿರ್ವಹಿಸಬೇಕಾದವರು ಸನ್ ಬರ್ನ್ ಗೆ ತುತ್ತಾಗುತ್ತಿದ್ದಾರೆ.
ಕಡಿಮೆಯಾದ ಪ್ರವಾಸಿಗರು: ಮಲೆನಾಡಿನವಾತಾವರಣ ಸವಿಯಲು ಬರುತ್ತಿದ್ದ ಪ್ರವಾಸಿಗರಸಂಖ್ಯೆ ಕಡಿಮೆಯಾಗುತ್ತಿದ್ದು ಸದಾ ಹಸಿರಿನಿಂದತುಂಬಿರುತ್ತಿದ್ದ ಗುಡ್ಡ ಬೆಟ್ಟಗಳು ಇದೀಗ ಅತಿಯಾದಬಿಸಿಲಿನಿಂದ ಸೊಬಗನ್ನು ಕಳೆದುಕೊಂಡಿದ್ದು ಇದು ಪ್ರವಾಸಿಗರಿಗೆ ಬೇಸರ ತಂದಿದೆ.
ಪರಿಸರ ನಾಶ ಮಲೆನಾಡಿನ ವಿನಾಶ :
ಮಲೆನಾಡಿನಲ್ಲಿ ರಸ್ತೆಗಳ ಹೆಸರಿನಲ್ಲಿ ಮರ ಕಡಿಯುವಿಕೆ, ಟಿಂಬರ್ ಮಾಫಿಯಾ, ಎತ್ತಿನಹೊಳೆಯೋಜನೆ, ಕಿರು ವಿದ್ಯುತ್ ಯೋಜನೆಗಳು, ರೆಸಾರ್ಟ್‌ಗಳ ನಿರ್ಮಾಣ ಒಟ್ಟಾರೆಯಾಗಿ ಅಭಿವೃದ್ಧಿಯಹೆಸರಿನಲ್ಲಿ ಕಾಡುಗಳನ್ನು ನಾಶ ಮಾಡುತ್ತ ಬಂದಿರುವುದು ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದೆ.ಇದರ ಜೊತೆಗೆ ಜಾಗತಿಕ ತಾಪಮಾನ ಏರಿಕೆಯು ಸಹ ಮಲೆನಾಡಿನ ಬಿಸಿಲ ಧಗೆ ಏರಲು ಕಾರಣವಾಗಿದೆ. ಒಟ್ಟಾರೆಯಾಗಿ ಮಲೆನಾಡಿನ ಪರಿಸರ ನಾಶದಿಂದ ಮಲೆನಾಡಿನ ತಂಪು ವಾತಾವರಣ ಸಂಪೂರ್ಣವಾಗಿ ಮಾಯ ವಾಗುತ್ತಿದೆ. ದೂರದ ಬಳ್ಳಾರಿ, ರಾಯಚೂರು, ಹುಬ್ಬಳ್ಳಿ,ಬಾಗಲಕೋಟೆಯಲ್ಲಿ ಉಂಟಾಗುತ್ತಿದ್ದ ವಾತಾವರಣ ಮಲೆನಾಡಿನಲ್ಲಿ ಕಾಣುತ್ತಿದ್ದು ಒಟ್ಟಾರೆಯಾಗಿ ತಾಲೂಕಿನಲ್ಲಿ ಮಳೆ ಬಂದು ತಂಪು ವಾತಾವರಣ ಮೂಡಲಿ ಎಂಬುದು ಜನ ಬಯಸುತ್ತಿದ್ದಾರೆ.
ಈ ಹಿಂದೆ ಸಕಲೇಶಪುರಕ್ಕೆ ಬರುವಾಗ ಖುಷಿಯಾಗುತ್ತಿತ್ತು.ಇಲ್ಲಿನ ವಾತಾವರಣ ನೋಡಿ ಇಲ್ಲಿಕಾಫಿ ತೋಟವೊಂದನ್ನು ಖರೀದಿಸಿದ್ದೆ.ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿನ ವಾತಾವರಣ ನನಗೆ ನಿರಾಸೆ ತಂದಿದೆ. – ಶಂಕರ್, ಉದ್ಯಮಿ ಹಾಗೂ ಕಾಫಿ ತೋಟದ ಮಾಲಿಕ
ಮಲೆನಾಡಿನಲ್ಲಿ ಪರಿಸರ ಸಂರಕ್ಷಣೆಗೆಯಾರೂ ಮುಂದಾಗದ ಕಾರಣ ಈರೀತಿಯ ಪರಿಸ್ಥಿತಿ ಉಂಟಾಗಿದೆ. ಮನೆಗೊಂದುಮರ ಊರಿಗೊಂದು ವನ ಎಂಬ ಮಾತನ್ನುಪ್ರತಿಯೊಬ್ಬರೂ ಪಾಲಿಸಲು ಮುಂದಾಗಬೇಕು ಹಾಗೂ ದೊಡ್ಡ ದೊಡ್ಡ ಯೋಜನೆಗಳಿಗೆ ಇಲ್ಲಿ ಅನುಮತಿ ನೀಡಬಾರದು. – ಇತಿಹಾಸ್, ಪರಿಸರ ಹೋರಾಟಗಾರ
– ಸುಧೀರ್ ಎಸ್.ಎಲ್