Advertisement

ಬಾಕಿ ವೇತನಕ್ಕೆ ಬಿಸಿಯೂಟ ತಯಾರಕರ ಒತ್ತಾಯ

01:49 PM Jan 05, 2021 | Team Udayavani |

ದಾವಣಗೆರೆ: ಕಳೆದ ನಾಲ್ಕು ತಿಂಗಳನಿಂದಬಾಕಿ ಇರುವ ವೇತನವನ್ನು ಕೂಡಲೇಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರಫೆಡರೇಷನ್‌(ಎಐಟಿಯುಸಿ) ನೇತೃತ್ವದಲ್ಲಿಬಿಸಿಯೂಟ ತಯಾರಕರು ಸೋಮವಾರಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕಳೆದ 18 ವರ್ಷದಿಂದ ಸರ್ಕಾರದ ಮಹತ್ವಾಕಾಂಕ್ಷಿತ ಮಧ್ಯಾಹ್ನದ ಉಪಹಾರಯೋಜನೆಯಡಿ ಸರ್ಕಾರಿ, ಅನುದಾನಿತಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿಅಡುಗೆಯವರಾಗಿ ಕೆಲಸ ಮಾಡುತ್ತಿರುವರಿಗೆ ಕೋವಿಡ್ ಕಾರಣ ನೀಡಿ ವೇತನವನ್ನೇನೀಡಿರಲಿಲ್ಲ. ನಿರಂತರ ಹೋರಾಟದ ಫಲವಾಗಿಈಚೆಗೆ ಮೂರು ತಿಂಗಳ ವೇತನ ಬಿಡುಗಡೆಮಾಡಲಾಗಿದೆ. ಬಾಕಿ ಇರುವ ಇನ್ನೂ ನಾಲ್ಕುತಿಂಗಳ ವೇತನ ಬಿಡುಗಡೆ ಮಾಡಬೇಕು ಎಂದುಪ್ರತಿಭಟನಾಕಾರರು ಒತ್ತಾಯಿಸಿದರು. ರಾಜ್ಯ ಸರ್ಕಾರ ಕಳೆದ ಸೆಪ್ಟಂಬರ್‌, ಅಕ್ಟೋಬರ್‌,ನವಂಬರ್‌ ಮತ್ತು ಡಿಸೆಂಬರ್‌ ತಿಂಗಳ ವೇತನನೀಡಿಲ್ಲ. ಹಾಗಾಗಿ ಬಿಸಿಯೂಟ ತಯಾರಕರಜೀವನ ನಿರ್ವಹಣೆ ಬಹಳ ಕಷ್ಟವಾಗುತ್ತಿದೆ.

ವೇತನವನ್ನೇ ನಂಬಿಕೊಂಡು ಜೀವನನಡೆಸುತ್ತಿರುವರ ಸಂಕಷ್ಟ ಹೇಳುವಂತಿಲ್ಲ. ಬಿಸಿಯೂಟ ಕೆಲಸಗಾರರು ಯಾವುದಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೋರಾಟಮಾಡುತ್ತಿಲ್ಲ . ಬದಲಿಗೆ ತಾವು ಮಾಡಿರುವಕೆಲಸದ ವೇತನಕ್ಕೆ ಹೋರಾಟ ಮಾಡುವಂತವಾತಾವರಣ ನಿರ್ಮಾಣವಾಗಿರುವುದುನಿಜಕ್ಕೂ ದುರಂತ. ಕೂಡಲೇ ಬಾಕಿ ಇರುವ 4ತಿಂಗಳ ವೇತನ ಬಿಡುಗಡೆ ಮಾಡುವ ಮೂಲಕಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ತಯಾರಕರಿಗೆ ಕನಿಷ್ಠ ಕೂಲಿ ಜಾರಿ, ಪ್ರತಿ ತಿಂಗಳ ವೇತನ ಪಾವತಿ, ಕಲ್ಯಾಣಮಂಡಳಿ ರಚನೆ, ಆರೋಗ್ಯ ವಿಮೆ, ಭವಿಷ್ಯ ನಿಧಿ ಸೌಲಭ್ಯ, ಆಪಘಾತಕ್ಕೆ ಒಳಗಾದವರು,ಮರಣ ಹೊಂದಿದ ಕುಟುಂಬಕ್ಕೆ 5 ಲಕ್ಷಪರಿಹಾರ, ಬಿಸಿಯೂಟ ತಯಾರಕರನ್ನ ಶಾಲಾ ಸಿಬ್ಬಂದಿಯನ್ನಾಗಿ ಪರಿಗಣನೆ, ನಿವೃತ್ತಿ ವೇತನಒಳಗೊಂಡಂತೆ ಇತರೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌(ಎಐಟಿಯುಸಿ) ರಾಜ್ಯ ಅಧ್ಯಕ್ಷಎಚ್‌.ಕೆ. ರಾಮಚಂದ್ರಪ್ಪ, ಆವರಗೆರೆ ಚಂದ್ರು,ಆವರಗೆರೆ ವಾಸು, ಗದಿಗೇಶ್‌, ರುದ್ರಮ್ಮ,ಜ್ಯೋತಿಲಕ್ಷ್ಮಿ, ಜಯಮ್ಮ, ಲಲಿತಮ್ಮ, ರಮೇಶ್‌, ಜಯಮ್ಮ. ಮಂಗಳಗೌರಿ, ಅನ್ನಪೂರ್ಣಮ್ಮ, ಸರೋಜಾ, ಪದ್ಮಾ, ರಾಧಮ್ಮ, ವನಜಾಕ್ಷಮ್ಮ, ಅರುಣಾ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next