Advertisement

ಮಹಾರಾಷ್ಟ್ರದಲ್ಲಿ ನಾಳೆಯಿಂದ ಹೊಟೇಲ್‌ ತೆರೆಯಲು ಅವಕಾಶ

12:44 PM Jul 07, 2020 | mahesh |

ಮುಂಬಯಿ: ಕೋವಿಡ್ ಲಾಕ್‌ಡೌನ್‌ ನಿಯಮ­ಗಳನ್ನು ಮತ್ತಷ್ಟು ಸಡಿಲಿಸಿರುವ ಮಹಾರಾಷ್ಟ್ರ ಸರಕಾರ, ಕಂಟೈನ್‌ಮೆಂಟ್‌ ವಲಯ ಹೊರತು­ಪಡಿಸಿ, ಇತರೆಡೆಯಲ್ಲಿರುವ ಹೊಟೇಲ್‌ ಮತ್ತು ಇತರ ವಸತಿ ಗೃಹಗಳನ್ನು ಬುಧವಾರದಿಂದ ತೆರೆಯಲು ಅವಕಾಶ ನೀಡಿದೆ. ಲಾಡ್ಜ್ಗಳು ಮತ್ತು ಅತಿಥಿಗೃಹಗಳಿಗೂ ಇದು ಅನ್ವಯವಾಗಲಿದೆ. ಆದರೆ, ಒಟ್ಟು ಸಾಮ­ರ್ಥ್ಯದ ಶೇ.33ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ಮಾರ್ಗ­ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಷರತ್ತು ವಿಧಿಸಿದೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ­ಯವರು ಹೊಟೇಲ್‌ ಹಾಗೂ ಇನ್ನಿತರ ಸಂಘಟ­ನೆಗಳ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಒಂದು ದಿನದ ನಂತರ ಸರಕಾರದ ಈ ಆದೇಶ ಹೊರಬಿದ್ದಿದೆ. ಈ ಮಧ್ಯೆ, ರಾಜ್ಯದಲ್ಲಿ ಲಾಕ್‌ಡೌನ್‌ ಜುಲೈ 31ರವರೆಗೂ ಮುಂದುವರಿ­ಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next