Advertisement

Price Hike: ಮಳೆ ಅಭಾವ ಬೇಳೆಕಾಳು ದರ ಹೆಚ್ಚಳ… ಹೋಟೆಲ್‌ ಊಟ, ತಿಂಡಿ ದುಬಾರಿ ಸಾಧ್ಯತೆ

11:26 AM Aug 11, 2023 | Team Udayavani |

ದೇವನಹಳ್ಳಿ: ಮಳೆಯ ಕೊರತೆ ಹಾಗೂ ದಿನೇ ದಿನೇ ಒಂದಲ್ಲ ಒಂದು ಪದಾರ್ಥಗಳು ಏರಿಕೆ ಕಂಡಿರುವುದರಿಂದ ಹೋಟೆಲ್‌ ಉದ್ಯಮಗಳಿಗೆ ಬೆಲೆ ಏರಿಕೆ ಮಾಡುವ ಅನಿವಾರ್ಯತೆ ಬಂದಿದೆ.

Advertisement

ಪೆಟ್ರೋಲ್, ಡೀಸೆಲ್‌ ಹಾಗೂ ದಿನ ನಿತ್ಯ ಬಳಸುವ ಎಲ್ಲ ಪದಾರ್ಥಗಳು ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟುತ್ತಿದೆ. ಕಳೆದ ಒಂದು ತಿಂಗಳಲ್ಲಿ ಬೆಳೆಗಳ ದರ ಗಣನೀಯ ಏರಿಕೆ ಕಂಡಿದೆ. ತೊಗರಿ ಬೇಳೆ ಕೆ.ಜಿ.ಗೆ 160 ರಿಂದ170 ರೂ., ಉದ್ದಿನ ಬೇಳೆ 140 ರೂ., ಮಸೂರ್‌ ದಾಲ್‌ 120 ರೂ.ಹಾಗೂ ಹೆಸರು ಬೇಳೆ ದರ 150 ರಿಂದ 160 ರೂ.ತಲುಪಿದೆ. ಹಾಲಿನ ದರ ಸಹ ಹೆಚ್ಚಾಗಿದೆ. ಯಾವುದೇ ಬೇಳೆಗಳನ್ನು ತೆಗೆದುಕೊಳ್ಳುವಾಗ ಯೋಚಿಸುವ ಪರಿಸ್ಥಿತಿ ಬಂದಿದೆ. ಜೀರಿಗೆ ಅರಿಶಿನ, ದನಿಯಾ ಪುಡಿ, ಕಾಳು ಮೆಣಸಿನ ಪುಡಿ, ದರದಲ್ಲಿ ಗಣನೀಯ ಏರಿಕೆ ಕಂಡಿದೆ.

ಬೆಲೆ ಏರಿಕೆ ಬಿಸಿ: ಹೋಟೆಲ್‌ನಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಾಲಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಹೋಟೆಲ್‌ನಲ್ಲಿ ದರ ಏರಿಕೆ ಚಿಂತನೆ ನಡೆದಿದೆ. ಈಗಾಗಲೇ ಟಿಫಿ ನ್‌ 35 ರಿಂದ 50 ಪ್ಲೇಟಿಗೆ ಹಾಗೂ ಊಟಕ್ಕೆ 80 ರಿಂದ 90 ಊಟ ಇದೆ. ಇದೇ ಗ್ರಾಹಕರಿಗೆ ಕಷ್ಟವಾಗುತ್ತಿದೆ. ಮತ್ತೆ ಇದರ ಹೆಚ್ಚಳವಾದರೆ ಗ್ರಾಹಕರಿಗೆ ಕಿಸೆಗೆ ಕತ್ತರಿ ಬೀಳುವಂತಾಗುತ್ತದೆ.

ಬಡ, ಮಧ್ಯಮ ವರ್ಗಕ್ಕೆ ಹೊರೆ: ಹೋಟೆಲ್‌ ಉದ್ಯಮದಲ್ಲಿ ತರಕಾರಿ, ಬೇಳೆ-ಕಾಳುಗಳು ಹಾಗೂ ವಿದ್ಯುತ್‌ ಬಳಕೆ ಏರಿಕೆ ದರ ಏರಿಕೆಗೆ ಕಾರಣವಾಗಿದೆ. ಈಗಾಗಲೇ ಮಳೆ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ರೈತರು ಕಂಗಲಾಗಿದ್ದಾರೆ.

ದುಬಾರಿ ಬೆಲೆ ಏರಿಕೆ ನಡುವೆ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಹೊರೆ ಬೀಳುತ್ತಿದೆ. ಟೊಮ್ಯಾಟೋ ದರ ಗಗನಕ್ಕೇರಿದೆ. ಹುರುಳಿಕಾಯಿ, ಬೆಳ್ಳುಳ್ಳಿ, ಶುಂಠಿ, ಕ್ಯಾಪ್ಸಿಕಂ, ಹಸಿ ಬಟಾಣಿ, ಕ್ಯಾರೆಟ್, ಮೆಣಸಿನಕಾಯಿ, ಸೊಪ್ಪುಗಳು ಸೇರಿದಂತೆ ಬಹುತೇಕ ತರಕಾರಿ ಹೆಚ್ಚಳವಾಗುತ್ತಿದೆ. ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆಯುವ ರೀತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಡುಗೆ ಎಣ್ಣೆ ದರ ಇಳಿ ಮುಖ ವಾಗಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿಗಳ ಕೊರತೆಯೂ ಇದೆ. ಈಗಾಗಲೇ ಸರ್ಕಾರ ವಿದ್ಯುತ್‌ ಬಿಲ್‌ ಏರಿಕೆ ಮಾಡಿದೆ. ಕಾಂಗ್ರೆಸ್‌ ಸರ್ಕಾರ ವಿದ್ಯುತ್‌ ನೀಡುವ ಯೋಜನೆ ಜಾರಿ ಆಗುವ ಜತೆಗೆ ವಿದ್ಯುತ್‌ ದರ ಏರಿಕೆ ಆಗಿದೆ. ಹೋಟೆಲ್‌ ಮಾಲಿಕರಿಗೆ ಬಹುತೇಕ ಹೋಟೆಲ್‌ಗ‌ಳು ಬಾಡಿಗೆ ಕಟ್ಟಡದಲ್ಲಿವೆ. ಕಟ್ಟಡ ಮಾಲೀಕರು ಬಾಡಿಗೆ ಹೆಚ್ಚಳ ಮಾಡಿಲ್ಲ. ಆದರೆ, ಕೆಲವು ಕಡೆ ಬಾಡಿಗೆ ಹೆಚ್ಚಳಕ್ಕೆ ಮುಂದಾಗಿರುವುದು. ಸಂಕಷ್ಟಕ್ಕೆ ಸಿಲುಕು ಉಂಟಾಗಿದೆ. ಇಷ್ಟೆಲ್ಲ ಬೆಲೆ ಏರಿಕೆ ನಡುವೆ ಹೋಟೆಲ್‌ಗ‌ಳ ಬೆಲೆ ಏರಿಕೆ ಮಾಡಲಾಗಿದೆ.

Advertisement

ಪ್ರತಿಯೊಂದು ತರಕಾರಿ ಮತ್ತು ಬೇಳೆ-ಕಾಳುಗಳ ದರ ಹೆಚ್ಚಾಗಿದೆ. ಅದರಲ್ಲೂ ಸಹ ಹೋಟೆಲ್‌ ಉದ್ಯಮ ಮಾಡಿಕೊಂಡು ಬರಲಾಗುತ್ತಿದೆ. ಒಂದು ಬಾರಿ ಬೆಲೆ ಇಳಿಕೆಯಾಗುತ್ತದೆ. ಆಗಲೂ ಸಹ ಅದೇ ದರದಲ್ಲಿ ತಿಂಡಿ ತಿನಿಸುಗಳನ್ನು ನೀಡುತ್ತೇವೆ. ದರ ಹೆಚ್ಚಾದಾಗ ಸಹ ಧರ ಏರಿಸದೆ ಅದೇ ದರಕ್ಕೆ ನೀಡುತ್ತೇವೆ. ಟೊಮ್ಯಾಟೋ, ಹುರುಳಿ, ಕ್ಯಾರೆಟ್‌ ಬೆಲೆ ಗಗನಮುಖೀಯಾಗಿದೆ. ಇತರೆ ತರಕಾರಿಗಳು ಹೆಚ್ಚಳಗೊಂಡಿದೆ. ಆದರೂ ಸಹ ಗ್ರಾಹಕರಿಗೆ ಉತ್ತಮ ರೀತಿಯ ತಿಂಡಿ ತಿನಿಸುಗಳನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೋಟೆಲ್‌ ತಿನಿಸುಗಳ ದರ ಹೆಚ್ಚಿಸುವುದು ಅನಿವಾರ್ಯವಾಗಲಿದೆ.
– ವಿಜಯ್‌ ರಾವ್‌, ನಂದಿ ಉಪಚಾರ ಜನರಲ್‌ ಮ್ಯಾನೇಜರ್‌

ದಿನನಿತ್ಯ ಬಳಸುವ ಪದಾರ್ಥಗಳು ಹೆಚ್ಚಳವಾಗುತ್ತಿರುವುದರಿಂದ ಮಾಧ್ಯಮ ವರ್ಗದವರಿಗೆ ದರದ ಹೆಚ್ಚಳದ ಬಿಸಿ ತಟ್ಟುತ್ತಿದೆ. ಇತ್ತೀಚೆಗೆ ಸರ್ಕಾರ ಹಾಲಿನ ದರವನ್ನು ಸಹ 3ರೂ. ಹೆಚ್ಚಿಸಿದೆ. ಹೋಟೆಲ್‌ಗ‌ಳಲ್ಲಿ ಬೆಲೆ ಏರಿಕೆ ಆಗುತ್ತಿರುವುದರಿಂದ ಗ್ರಾಹಕರ ಜೋಬಿಗೆ ಕತ್ತರಿ ಬೀಳಲಿದೆ.
– ಶ್ರೀನಿವಾಸ್‌, ಗ್ರಾಹಕ

– ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next