Advertisement

ಕೋವಿಡ್ ಹಾಟ್ ಸ್ಪಾಟ್ ಆದ ಚೆನ್ನೈನ ಐಷಾರಾಮಿ ಹೋಟೆಲ್: 85 ಮಂದಿ ಸಿಬ್ಬಂದಿಗೆ ಸೋಂಕು ದೃಢ

01:30 PM Jan 03, 2021 | Team Udayavani |

ಚೆನ್ನೈ: ಇಲ್ಲಿನ ಐಷಾರಾಮಿ ಹೋಟೆಲ್ ಒಂದು ಇದೀಗ ಕೋವಿಡ್ ಹಾಟ್ ಸ್ಪಾಟ್ ಆಗಿದೆ. ಕಳೆದ ಡಿ.15ರಿಂದ ಇಲ್ಲಿಯವರೆಗೆ ಹೋಟೆಲ್ ನ 85 ಮಂದಿ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢವಾಗಿದೆ.

Advertisement

ಹೋಟೆಲ್ ನಲ್ಲಿ ಇದುವರೆಗೆ ಒಟ್ಟು 609 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, 85 ಜನರಿಗೆ ಸೋಂಕು ದೃಢವಾಗಿದೆ.

ಹೋಟೆಲ್ ನಲ್ಲಿ ಎಲ್ಲಾ ಅತಿಥಿಗಳ ಪರೀಕ್ಷೆನಡೆಸಲು ಗ್ರೇಟರ್ ಚೆನ್ನೈ ನಿಗಮಕ್ಕೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ತಿಳಿಸಿದ್ದಾರೆ.

ಗರಿಷ್ಠ ಸಾಮಾಜಿಕ ಅಂತರ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಭಾಂಗಣದ ಶೇಕಡಾ 50 ರಷ್ಟು ಸಾಮರ್ಥ್ಯವನ್ನು ಮಾತ್ರ ಬಳಸಲಾಗುತ್ತಿದೆ ಎಂದು ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ದೇಶದಲ್ಲಿ ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆ ಬಳಸಲು ಅನುಮತಿ

Advertisement

ಘಟನೆಯ ಬಳಿಕ ಚೆನ್ನೈನ ಎಲ್ಲಾ ಹೋಟಲ್ ಗಳ ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಗ್ರೇಟರ್ ಚೆನ್ನೈ ನಿಗಮಕ್ಕೆ ಸೂಚಿಸಲಾಗಿದೆ ಎಂದು ಜೆ ರಾಧಾಕೃಷ್ಣನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next