Advertisement
ಉತ್ತರ ಕರ್ನಾಟಕ ಮಾತ್ರವಲ್ಲದೆ ದಖ್ಖನ್ ಪ್ರಸ್ಥಭೂಮಿಯಲ್ಲಿರುವ ನೆರೆಯ ಆಂಧ್ರದ ರಾಯಲಸೀಮಾ, ಯಾಣಂ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ರಾಜಸ್ಥಾನ, ಪಂಜಾಬ್,ಹರಿಯಾಣ, ಚಂಡೀಗಢ, ದಿಲ್ಲಿ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿಯೂ ಬಿಸಿಗಾಳಿ ಬೀಸಲಿದೆ ಎಂದು ಐಎಂಡಿ ಎಚ್ಚರಿಸಿದೆ.
ರವಿವಾರವೇ ಕರ್ನಾಟಕ ಮತ್ತು ದೇಶದ ಹಲವೆಡೆ ಗರಿಷ್ಠ ಉಷ್ಠಾಂಶ ಏರಿಕೆಯಾಗಿದೆ. ಪಶ್ಚಿಮ ರಾಜಸ್ಥಾನದ ಚುರುವಿನಲ್ಲಿ 47.4 ಡಿಗ್ರಿ ಸೆ. ದಾಖಲಾಗಿತ್ತು. ಕಲಬು ರಗಿಯಲ್ಲಿ ರವಿವಾರ ಬಿಸಿಲಿನ ಝಳ ಜೋರಾಗಿಯೇ ಇತ್ತು. ಇಲ್ಲಿ ರಾಜ್ಯದ ಅತಿ ಗರಿಷ್ಠ 44.5 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಗರಿಷ್ಠ ತಾಪ ಮಾನದಲ್ಲಿ 4.2 ಡಿಗ್ರಿ ಸೆ. ಹೆಚ್ಚಳವಾಗಿದೆ. ರಾಯಚೂರಿನಲ್ಲಿ 43 ಡಿಗ್ರಿ ಸೆ. ಮತ್ತು ವಿಜಯಪುರದಲ್ಲಿ 41.8 ಡಿ.ಸೆ. ತಾಪಮಾನ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.