Advertisement

ಉಷ್ಣಮಾರುತಕ್ಕೆ ದೇಶದಲ್ಲಿ 12,273 ಸಾವು : ಮೂರು ದಶಕಗಳ ಅಂಕಿ-ಅಂಶಗಳ ವಿಶ್ಲೇಷಣ ವರದಿ ಉಲ್ಲೇಖ

08:53 PM May 28, 2021 | Team Udayavani |

ಹೊಸದಿಲ್ಲಿ : ಕಳೆದ ಮೂರು ದಶಕಗಳಲ್ಲಿ ದೇಶಾದ್ಯಂತ ಸುಮಾರು 660 ಉಷ್ಣ ಮಾರುತಗಳು ಉಂಟಾಗಿದ್ದು, 12,273 ಮಂದಿ ಸಾವಿಗೀಡಾಗಿದ್ದಾರೆ ಎಂದು “ಕರೆಂಟ್‌ ಸೈನ್ಸ್‌’ ಸಂಶೋಧನ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಸಂಶೋಧನ ವರದಿಯಲ್ಲಿ ಹೇಳಲಾಗಿದೆ.

Advertisement

1978ರಿಂದ 2014ರ ವರೆಗೆ ದೇಶದಲ್ಲಿ ದಾಖಲಾಗಿರುವ “ಹಾನಿಕಾರಕ ಹವಾಮಾನ’ಗಳ ಅಂಕಿಅಂಶಗಳನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಈ 30 ವರ್ಷಗಳಲ್ಲಿ ದೇಶಾದ್ಯಂತ ಉಷ್ಣ ಹವೆ ದುಷ್ಪರಿಣಾಮ ಬೀರುತ್ತ ಬಂದಿದೆ. ಚಂಡೀಗಢ, ದಿಲ್ಲಿ, ಆಂಧ್ರಪ್ರದೇಶ, ಬಿಹಾರ ಮತ್ತು ಒಡಿಶಾಗಳು ಉಷ್ಣ ಹವೆಯ ದುಷ್ಪರಿಣಾಮಕ್ಕೆ ಅತೀ ಹೆಚ್ಚಾಗಿ ಈಡಾಗಿವೆ. ಉಷ್ಣಹವೆಯಿಂದಾದ ಒಟ್ಟು ಸಾವುಗಳಲ್ಲಿ ಶೇ. 80 ಈ ರಾಜ್ಯಗಳಲ್ಲೇ ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ರಾಜ್ಯಗಳಿಗೆ ಬಾಧೆಯಿಲ್ಲ!
ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮಣಿಪುರ, ಮೇಘಾಲಯ, ತ್ರಿಪುರಾ, ಸಿಕ್ಕಿಂ, ಮಿಜೋರಂ, ಉತ್ತರಾಖಂಡ, ಗೋವಾಗಳಲ್ಲಿ ಉಷ್ಣ ಹವೆಗಳಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿಲ್ಲ. ಒಳನಾಡಿನಲ್ಲಿ ಉಷ್ಣ ಹವೆಯಿಂದ ಆಗಿರುವ ಸಾವುಗಳ ಪ್ರಮಾಣ ಶೇ. 0. 66ರಷ್ಟಿದ್ದರೆ, ಗುಡ್ಡಗಾಡು ಪ್ರದೇಶಗಳಲ್ಲಿ ಶೇ. 0.02ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಆಂಧ್ರದಲ್ಲಿ ಪ್ರತೀ ಬಾರಿ 104 ಮಂದಿ ಸಾವು
ಕಳೆದ ಮೂರು ದಶಕಗಳಲ್ಲಿ ಪ್ರತೀ ಉಷ್ಣಹವೆಯ ಸಂದರ್ಭದಲ್ಲೂ ಆಂಧ್ರಪ್ರದೇಶದಲ್ಲಿ 104 ಸಾವುಗಳು ಸಂಭವಿಸಿವೆ. ಎಪ್ರಿಲ್‌, ಮೇ, ಜೂನ್‌ನಲ್ಲಿಯೇ ಇವು ಸಂಭವಿಸಿವೆ. ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಲ, ಪಂಜಾಬ್‌ನಲ್ಲೂ ಇಂಥ ಪ್ರಕರಣಗಳು ಕಂಡುಬಂದಿವೆ.

ಇದನ್ನೂ ಓದಿ :ಕೋವಿಡ್‌ ಕರ್ತವ್ಯದಲ್ಲಿರುವ ಶಿಕ್ಷಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಒತ್ತಾಯ

Advertisement

ಪ್ಯಾರಿಸ್‌ ಒಪ್ಪಂದ ಉಲ್ಲಂಘನೆ ಶೇ. 40ರಷ್ಟು ಸಾಧ್ಯತೆ!
ಜಾಗತಿಕ ಉಷ್ಣಾಂಶ ಹೆಚ್ಚಾಗುವುದನ್ನು ತಡೆಯುವುದಾಗಿ 2015ರ ಪ್ಯಾರಿಸ್‌ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಜಗತ್ತಿನ ಪ್ರಮುಖ ದೇಶಗಳು ಮಾಡಿರುವ ಪ್ರತಿಜ್ಞೆ ಉಲ್ಲಂಘನೆಯಾಗುವ ಸಾಧ್ಯತೆ ಶೇ. 40ರಷ್ಟಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲೂéಎಂಒ) ಎಚ್ಚರಿಸಿದೆ. ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳು ತಮ್ಮಲ್ಲಿನ ಉಷ್ಣಾಂಶವನ್ನು ಕೈಗಾರಿಕಾ ಪೂರ್ವ ಪ್ರಪಂಚದಲ್ಲಿದ್ದ ಉಷ್ಣಾಂಶಕ್ಕಿಂತ 1.5 ಡಿಗ್ರಿ ಸೆ. ದಾಟದಂತೆ ಕಾಪಾಡಿಕೊಳ್ಳಬೇಕು ಎಂಬ ಒಪ್ಪಂದದ ಅಂಶಕ್ಕೆ ಬದ್ಧವಾಗಿರಬೇಕು. ಆದರೆ, ಜಗತ್ತಿನಲ್ಲಿ ಹೆಚ್ಚುತ್ತಿರುವ ಪರಿಸರ ವಿರೋಧಿ ಕ್ರಮಗಳಿಂದಾಗಿ ಸದ್ಯದಲ್ಲೇ 1.5 ಡಿ.ಸೆ. ಉಷ್ಣಾಂಶ ದಾಟುವ ಸಾಧ್ಯತೆಗಳು ಶೇ. 40ರಷ್ಟು ಹೆಚ್ಚಾಗಿದೆ ಎಂದು ಡಬ್ಲೂéಎಂಒ ಹೇಳಿದೆ.

ಅಂಕಿ-ಅಂಶ.
ಶೇ. 42 – ಆಂಧ್ರದಲ್ಲಿ ಮೂರು ದಶಕದಲ್ಲಿ ಆಗಿರುವ ಸಾವಿನ ಪ್ರಮಾಣ.
ಶೇ. 0.66 – ದೇಶದ ಒಳನಾಡಿನಲ್ಲಿ ಆಗಿರುವ ಸಾವಿನ ಪ್ರಮಾಣ.
ಶೇ. 0.02 – ಗುಡ್ಡಗಾಡು ಪ್ರದೇಶಗಳಲ್ಲಿ ಉಂಟಾಗಿರುವ ಸಾವಿನ ಪ್ರಮಾಣ.
ಆಂಧ್ರದಲ್ಲಿ ಅತಿ ಹೆಚ್ಚು ಸಾವು; ಕರ್ನಾಟಕದಲ್ಲಿ 6 ಸಾವು.
ಐದು ರಾಜ್ಯಗಳಲ್ಲಿ ದೇಶದ ಶೇ. 80ರಷ್ಟು ಸಾವು.

Advertisement

Udayavani is now on Telegram. Click here to join our channel and stay updated with the latest news.

Next