Advertisement

ಕೋವಿಡ್ ಜತೆ ಕಾಡುವ ಬಿಸಿಲ ಬೇಗೆ

11:31 AM Mar 29, 2021 | Team Udayavani |

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆಗೆ ಉದ್ಯಾನ ನಗರಿಯ ಜನ ಹೈರಾಣಾಗುತ್ತಿದ್ದಾರೆ. ಹವಾಮಾನ ಇಲಾಖೆ ಪ್ರಕಾರ ನಗರದಲ್ಲಿ ತಾಪಮಾನ 34, 35 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟುತ್ತಿದೆ.

Advertisement

ಶಿವರಾತ್ರಿ ಮುಗಿಯುತ್ತಿದ್ದಂತೆ ಬಿಸಿಲಿನ ಶಾಖ ಎಲ್ಲರಿಗೂ ತಟ್ಟುತ್ತಿದೆ. ಈ ಮಧ್ಯೆಕೋವಿಡ್ ಹಾವಳಿ ಶುರುವಾಗಿದ್ದು, ಇವೆರಡರಿಂದ ಜನ ಹೊರಬರಲು ಹಿಂದೇಟುಹಾಕುತ್ತಿದ್ದಾರೆ. ಫೆಬ್ರವರಿ ತಿಂಗಳಿಗೆಹೋಲಿಸಿದರೆ, ಮಾರ್ಚ್‌ ತಿಂಗಳಲ್ಲಿ ತಾಪಮಾನ ಹೆಚ್ಚಾಗಿದ್ದು, ಧಗೆಗೆ ಧರೆ ಕಾದ ಹೆಂಚಾಗಿದೆ. ಮುಂದಿನ ಮೂರು ತಿಂಗಳು ಬಿಸಿಲಿನ ಪ್ರಖರತೆ ಮತ್ತಷ್ಟು ಹೆಚ್ಚುವ ಮುನ್ಸೂಚನೆ ಇದ್ದು, ಈ ಅವಧಿಯಲ್ಲಿ ಕನಿಷ್ಠ2ರಿಂದ 3 ಡಿಗ್ರಿ ಸೆಲ್ಸಿಯಸ್‌ ಏರಿಕೆ ಆಗುವನಿರೀಕ್ಷೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಭಿವೃದ್ಧಿ ನೆಪದಲ್ಲಿ ನಗರದಲ್ಲಿದ್ದ ಮರಗಳ ಮಾರಣಹೋಮದಿಂದಾಗಿ ಉದ್ಯಾನ ನಗರಿಬೆಂಗಳೂರು ಈಗ “ಬಿಸಿಲ ನಗರಿಯಾಗಿಮಾರ್ಪಡುತ್ತಿದೆ. ಅಲ್ಲಲ್ಲಿ ಜನರ ಕಣ್ಣಿಗೆತಾಗುತ್ತಿದ್ದ ಒಂದೆರಡು ಮರಗಳನ್ನೂ ಸ್ಮಾರ್ಟ್‌ಸಿಟಿ, ನಗರ ಪಾಲಿಕೆ, ಅಭಿವೃದ್ಧಿ ಕಾಮಗಾರಿನೆಪದಲ್ಲಿ ತೆರವುಗೊಳಿಸಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಾರೆ.

ಒಂದೆಡೆ ಕೋವಿಡ್ ಎರಡನೇ ಅಲೆ.ಮತ್ತೂಂದೆಡೆ ಬಿಸಿಲಿನ ಝಳ. ಇದರಿಂದ ನಗರದ ಜನ, ಮಧ್ಯಾಹ್ನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.ಯಾವುದೇ ಕೆಲಸವಿದ್ದರೂ, 12 ಗಂಟೆಯೊಳಗೆ ಮಾಡಿ ಮುಗಿಸಲು ಯೋಜಿಸುತ್ತಾರೆ. ನಿತ್ಯಹಲವು ಕೆಲಸಗಳಿಗೆ ಸರ್ಕಾರಿ ಕಚೇರಿಗಳತ್ತಹೆಜ್ಜೆ ಹಾಕುತ್ತಿದ್ದ ನಾಗರಿಕರ ಸಂಖ್ಯೆ ಕೊಂಚಇಳಿಮುಖವಾಗುತ್ತಿದೆ ಎಂದು ಸರ್ಕಾರಿಕಚೇರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬಿಳಿಸಲಿಂದಾಗಿ ಮಧ್ಯಾಹ್ನದ ವೇಳೆಗೆ ಆರ್‌.ಸಿ.ಸಿ. ಮೇಲ್ಚಾವಣಿ ಬೆಂಕಿಯಂತಾಗುತ್ತಿವೆ. ದಗೆಯಿಂದ ಮುಕ್ತಿ ಪಡೆಯಲು ಜನರು ದಿನಕ್ಕೆ ಎರಡು ಬಾರಿಸ್ನಾನ ಮಾಡುವಂತಾಗಿದೆ ಎಂದು ಪೀಣ್ಯ ನಿವಾಸಿ ಬಿ.ರಮೇಶ್‌ ಹೇಳಿದ್ದಾರೆ.

ಝಳದಿಂದ ಪಾರಾಗಲು ತಜ್ಞರ ಸಲಹೆಗಳು :

  • ದ್ರವ ರೂಪದ ಆಹಾರ ಸೇವನೆ. ಇದರಿಂದ ಬೆವರಿನ ಪ್ರಮಾಣ ಹೆಚ್ಚಾಗಿ ದೇಹದ ಉಷ್ಣತೆ ಸಹಜಸ್ಥಿತಿ ತಲುಪುತ್ತದೆ.
  • ದೇಹದಲ್ಲಿ ಉಷ್ಣತೆ ಪ್ರಮಾಣ ಹೆಚ್ಚಾದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ತಲೆ ಸುತ್ತುವುದು, ವಾಕರಿಕೆ ಅಥವಾ ವಾಂತಿ ಸಾಧ್ಯತೆ
  • ಟೀ, ಕಾಫಿ ಹಾಗೂ ಮದ್ಯಪಾನ ಮಾಡಬಾರದು. ಈ ಪದಾರ್ಥಗಳ ಸೇವನೆಯಿಂದ ದೇಹದಲ್ಲಿನ ನೀರಿನ ಅಂಶವು ತ್ವರಿತವಾಗಿ ಹೊರಗೆ ಬರುತ್ತದೆ. ಇದರಿಂದ ಉಷ್ಣತೆ ಪ್ರಮಾಣ ಹೆಚ್ಚಾಗುತ್ತದೆ.
  • ಬಿಸಿಲಿನಲ್ಲಿ ಹೊರಗೆ ತೆರಳುವಾಗ ಕನ್ನಡಕ (ಸನ್‌ ಗ್ಲಾಸ್‌) ಧರಿಸಬೇಕು. ಹೆಚ್ಚು ತೆಳುವಾದ ಕಾಟನ್‌ ಉಡುಪು ಧರಿಸಬೇಕು. ಗಾಳಿಯಾಡುವಂತಹ ಪಾದರಕ್ಷೆ ಧರಿಸಬೇಕು.
  • ಬಿಸಿಲಿನಲ್ಲಿ ಕೆಲಸ ಮಾಡುವವರು(ಕಾರ್ಮಿಕರು) ಹೆಚ್ಚು (ನಾಲ್ಕು ಲೀ. ಕಾಯಿಸಿ ಆರಿಸಿದ ನೀರು) ನೀರು ಕುಡಿದು, ವಿಶ್ರಾಂತಿ ಪಡೆಯಬೇಕು.
Advertisement

ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆ ಆಗದಂತೆ ಹೆಚ್ಚು ಶುದ್ಧ ನೀರು ಸೇವಿಸಬೇಕು. ನಿಶ್ಯಕ್ತಿ ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ಆದಷ್ಟು ಮಕ್ಕಳನ್ನು ಬಿಸಿಲಿನಲ್ಲಿ ಆಟವಾಡಲು ಬಿಡಬಾರದು. ●ಡಾ.ಟಿ.ಎ.ವೀರಭದ್ರಯ್ಯ, ಆರೋಗ್ಯ ಇಲಾಖೆ ಉಪನಿರ್ದೇಶಕ

ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಕಾಯಿಸಿಆರಿಸಿದ ನೀರು ಕುಡಿಯಬೇಕು.ಸಾಂಕ್ರಾಮಿಕ ರೋಗಗಳು ಬರದಂತೆಎಚ್ಚರಿಕೆ ವಹಿಸಬೇಕು. ದೇಹದಲ್ಲಿನೀರಿನಂಶ ಕಡಿಮೆಯಾಗದಿರಲು ಪ್ರತಿಯೊಬ್ಬರು ನಾಲ್ಕು ಲೀಟರ್‌ ನೀರು ಕುಡಿಯಬೇಕು. ●ಡಾ.ಜಿ.ಎ.ಶ್ರೀನಿವಾಸ್‌ ಗೂಳೂರು, ನಗರ ಡಿಎಚ್‌ಒ

-ವಿಕಾಸ್‌ ಆರ್‌.

Advertisement

Udayavani is now on Telegram. Click here to join our channel and stay updated with the latest news.

Next