ಚಂಡಿಗಢ: ಬ್ಲ್ಯಾಕ್ ಮೇಲ್ ಮಾಡಿ,ಹಣ ವಸೂಲಿ ಮಾಡಿದ ಆರೋಪದ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವಿ ( Instagram influencer ) ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಸ್ನೀತ್ ಕೌರ್ ಅಲಿಯಾಸ್ ರಾಜ್ಬೀರ್ ಕೌರ್ ಎಂಬಾಕೆ ಬಂಧಿತ ಯುವತಿ.
ಬ್ಲ್ಯಾಕ್ ಮೇಲ್; ಸಿರಿವಂತರೇ ಟಾರ್ಗೆಟ್: ಸುಮಾರು 2 ಲಕ್ಷಕ್ಕೂ ಅಧಿಕ ಇನ್ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದಿರುವ ಜಸ್ನೀತ್ ಕೌರ್ ಗಮನ ಸೆಳೆಯುವ ನಿಟ್ಟಿನಲ್ಲಿ ಹಾಟ್ ಫೋಟೋ, ವಿಡಿಯೋಗಳನ್ನು ಆಪ್ಲೋಡ್ ಮಾಡುತ್ತಿರುತ್ತಾರೆ. ಇದಾದ ಬಳಿಕ ಹಣ ಇರುವ ವ್ಯಕ್ತಿಯ ಜೊತೆ ನಿಧಾನವಾಗಿ ಚಾಟಿಂಗ್ ಆರಂಭಿಸುತ್ತಾರೆ. ಆ ಬಳಿಕ ಅವರ ಗಮನ ಸೆಳೆಯಲು ತನ್ನ ಹಾಟ್ ಹಾಗೂ ಬೆತ್ತಲೆ ಫೋಟೋಗಳನ್ನು ಕಳುಹಿಸುತ್ತಾರೆ. ಚಾಟಿಂಗ್ ಮಾಡುವ ವ್ಯಕ್ತಿಗೆ ಗೊತ್ತಾಗದ ರೀತಿಯಲ್ಲಿ ಮೊದಲೇ ಎಲ್ಲಾ ಚಾಟ್ ಗಳನ್ನು ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಂಡು ಇರುತ್ತಾರೆ. ಇದಾದ ಬಳಿಕ ಅವರಿಂದ ಹಣವನ್ನು ಕೇಳಲು ಶುರು ಮಾಡುತ್ತಾರೆ. ಯಾವಾಗ ಹಣ ನೀಡಲು ನಿರಾಕರಿಸುತ್ತಾರೋ ಆಗ ಚಾಟ್ ಸ್ಕ್ರೀನ್ ಶಾಟ್ ಗಳಿಂದ ಬ್ಲ್ಯಾಕ್ ಮೇಲ್ ಮಾಡಿ, ಅದಕ್ಕೂ ಬಗ್ಗದೇ ಇದ್ದರೆ ಕೆಲ ಗ್ಯಾಂಗ್ ಸ್ಟರ್ ಗಳಿಂದ ಬೆದರಿಕೆಯನ್ನು ಹಾಕಿಸಿ, ಹಣ ಲೂಟಿ ಮಾಡಲು ಇಳಿಯುತ್ತಾರೆ.
ಇದನ್ನೂ ಓದಿ: World Cup ಕನಸು ಕಿತ್ತ ಗಾಯ! ವಿಶ್ವಕಪ್ ನಿಂದಲೂ ಹೊರಬಿದ್ದ ಕಿವೀಸ್ ನಾಯಕ
ಸಿಕ್ಕಿ ಬಿದ್ದದ್ದು ಹೇಗೆ?: ಜಸ್ನೀತ್ ಕೌರ್ ಜೊತೆ ಚಾಟ್ ಮಾಡುತ್ತಿದ್ದ ಲೂಧಿಯಾನ ಮೂಲದ 33 ವರ್ಷದ ಉದ್ಯಮಿಗೆ ಕಳೆದ ನವೆಂಬರ್ ನಲ್ಲಿ ವಾಟ್ಸಾಪ್ ಗೆ ಅಪರಿಚಿತ ನಂಬರ್ ನಿಂದ ಕರೆಯೊಂದು ಬರುತ್ತದೆ. ಹಣ ನೀಡಿ ಇಲ್ಲದಿದ್ರೆ ಕುಟುಂಬಕ್ಕೆ ಏನಾದರೂ ಮಾಡುತ್ತೇನೆ ಎಂದು ಹೇಳಿದ್ದಾನೆ. ಕಳೆದ ಕೆಲ ಸಮಯದಿಂದ ಇದೇ ರೀತಿಯ ಬ್ಲ್ಯಾಕ್ ಮೇಲ್ ಬೆದರಿಕೆಯನ್ನು ಎದುರಿಸುತ್ತಿದ್ದ. ಏ. 1 ರಂದು ಜಸ್ನೀತ್ ಕೌರ್ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಆಕೆಯನ್ನು ಬಂಧಿಸಿ, ಆಕೆಯ ದುಬಾರಿ ಕಾರು,ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದಾರೆ.
ಇದಲ್ಲದೇ ಆಕೆಯ ಆಪ್ತ, ಬೆದರಿಕೆಯನ್ನು ಹಾಕುತ್ತಿದ್ದ ಲಕ್ಕಿ ಸಂಧು ಎಂಬಾತನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಸಂಧು ಸದ್ಯ ಪರಾರಿಯಾಗಿದ್ದಾನೆ.
2008 ರಲ್ಲಿ ಮೊಹಾಲಿಯಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಜಸ್ನೀತ್ ಕೌರ್ ಅರೆಸ್ಟ್ ಆಗಿದ್ದರು. ಬ್ಲ್ಯಾಕ್ ಮೇಲ್ ಮಾಡಿಕೊಂಡು ಆಕೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಳು. ಇನ್ಸ್ಟಾಗ್ರಾಮ್ ಹಾಗೂ ಟೆಲಿಗ್ರಾಮ್ ನಲ್ಲಿ ಆಕೆ ಖಾತೆಯನ್ನು ಹೊಂದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.