Advertisement

ವಲಸಿಗರಿಗೆ ಹಾಸ್ಟೆಲ್ ಕ್ವಾರಂಟೈನ್‌ ಕಡ್ಡಾಯ

10:37 AM May 12, 2020 | Lakshmi GovindaRaj |

ಮಂಡ್ಯ: ಲಾಕ್‌ಡೌನ್‌ ಸಡಿಲಿಕೆ ಬಳಿಕ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ತವರಿಗೆ ಮರಳುತ್ತಿದ್ದು, ಅವರ ಮೂಲಕ ಸೋಂಕು ಹರಡುವ ಸಾಧ್ಯತೆ ಗಳನ್ನು ಮನಗಂಡು  ಚೆಕ್‌ಪೋಸ್ಟ್‌ಗಳಲ್ಲೇ ಆರೋಗ್ಯ ತಪಾಸಣೆ ನಡೆಸಿ ಹಾಸ್ಟೆಲ್‌ ಕ್ವಾರಂಟೈನ್‌ ಮಾಡುವುದಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

Advertisement

ವಲಸಿಗರ ಆಗಮನದಿಂದ ಹಸಿರು ವಲ ಯದಲ್ಲೂ ಸೋಂಕಿತರ ಸಂಖ್ಯೆ  ಹೆಚ್ಚಾಗುತ್ತಿದೆ. ಇದು ಆ ಭಾಗದ ಜನರಲ್ಲಿ ಆತಂಕ ಮೂಡಿಸು ತ್ತಿದೆ. ಆದ್ದ‌ರಿಂದ ಹೊರಗಿನಿಂದ ಬಂದವರನ್ನು  ನೇರವಾಗಿ ಪ್ರವೇಶಿಸಿಕೊಳ್ಳದೆ ಚೆಕ್‌ಪೋಸ್ಟ್‌ಗಳಲ್ಲೇ ತಡೆದು ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಬಳಿಕ ಅವರನ್ನು ಮುಂಜಾ  ಗ್ರತೆಯಾಗಿ ಹಾಸ್ಟೆಲ್‌ ಕ್ವಾರಂಟೈನ್‌ನಲ್ಲಿಡು ವು ದರೊಂದಿಗೆ ಸೋಂಕು ವ್ಯಾಪಕವಾಗಿ ಹರಡುವು ದನ್ನು ತಡೆಯಲಾಗುತ್ತಿದೆ.

14 ಮಂದಿ ಗುಣಮುಖ: ಮಂಡ್ಯ  ಸೋಂಕು ಮುಕ್ತ ಜಿಲ್ಲೆಯಾಗಿತ್ತು. ತಬ್ಲೀ ಗಳು, ನಂಜನ ಗೂಡಿನ ಜುಬಿಲಿಯೆಂಟ್‌ ಕಂಪನಿ ಉದ್ಯೋಗಿಗಳು ಹಾಗೂ ಮುಂಬೈ ವಲಸಿಗರ ಆಗಮನ ದಿಂದ ಈವರೆಗೆ 28 ಸೋಂಕು ಪ್ರಕರಣಗಳು ವರದಿಯಾಗಿವೆ.  ಇವರಲ್ಲಿ 14 ಮಂದಿ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರು ವುದು ಆಶಾದಾಯಕ ಬೆಳವಣಿಗೆ. ಇನ್ನು 14 ಪ್ರಕರಣ ಮಾತ್ರ ಜಿಲ್ಲೆಯಲ್ಲಿ ಸಕ್ರಿಯವಾಗಿವೆ.

ಮುಂಬೈನಿಂದ ಕಳ್ಳ ಮಾರ್ಗದಲ್ಲಿ ಕೆಲವರು  ಜಿಲ್ಲೆಯೊ ಳಗೆ ಪ್ರವೇಶಿಸಿದರೆ, ರಾಜಕೀಯ ಪ್ರಭಾವ ಬಳಸಿಕೊಂಡು ಮತ್ತೆ ಕೆಲವರು ತವರಿಗೆ ಮರಳಿ ದರು. ಹೀಗೆ ಬಂದವರು ಸೋಂಕು ಅಂಟಿಸಿಕೊಂಡಿದ್ದ ಕಾರಣ ನಾಗಮಂಗಲ, ಪಾಂಡವ  ಪುರ ಹಾಗೂ ಕೆ.ಆರ್‌.ಪೇಟೆ ತಾಲೂಕಿನ ಗ್ರಾಮೀಣರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು.

ಪರೀಕ್ಷೆ ಮಾಡಿಯೇ ಬಿಡುಗಡೆ: ಆಯಾಯ ತಾಲೂಕಿನ ಚೆಕ್‌ಪೋಸ್ಟ್‌ಗಳಲ್ಲೇ ತಹಶೀಲ್ದಾರ್‌ ವಲಸಿಗರ ಮೇಲೆ ನಿಗಾ ವಹಿಸಿ  ಸ್ಥಳೀಯವಾಗಿರುವ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡುತ್ತಿ  ದ್ದಾರೆ. ಇವರನ್ನು ಮುಂದಿನ 14 ರಿಂದ 28 ದಿನ ಕ್ವಾರಂಟೈನ್‌ನಲ್ಲಿಟ್ಟು ರಕ್ತ, ಗಂಟಲು ದ್ರವ ಪರೀಕ್ಷೆಗೊಳಪಡಿಸಿ ನೆಗೆಟಿವ್‌ ಬಂದಲ್ಲಿ ಮಾತ್ರ  ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ.

Advertisement

ಸೋಂಕು ನಿಯಂತ್ರಣ: ಜಿಲ್ಲೆಯೊಳಗೆ ಸೋಂಕಿತರ ಪ್ರಮಾಣವೂ ನಿಯಂತ್ರಣದಲ್ಲಿ ದೆ. ಮೇ 4ರಂದು ಮುಂಬೈನಿಂದ ಬಂದಿದ್ದ  ಗರ್ಭಿಣಿ ಹಾಗೂ ಯುವತಿಯೊಬ್ಬರಲ್ಲಿ ಕೊರೊನಾ ಪಾಸಿಟಿವ್‌ ಕಂಡುಬಂದಿತ್ತು.

ಹೊರಗಿನಿಂದ ಬರುವ ವಲಸಿಗರ ಮೇಲೆ ತೀವ್ರ ನಿಗಾ ವಹಿಸಿ ಹಾಸ್ಟೆಲ್‌ ಕ್ವಾರಂಟೈನ್‌ಗೆ ಒಳಪಡಿಸಲಾ ಗುತ್ತಿದೆ. ಗಂಟಲು ದ್ರವ, ರಕ್ತ ಪರೀಕ್ಷೆಗೊಳಪಡಿಸಿ ನೆಗೆಟಿವ್‌ ಬಂದವರನ್ನು ಮಾತ್ರ ಬಿಡುಗಡೆ  ಮಾಡಲಾಗುವುದು.  ಕ್ವಾರಂಟೈನ್‌ನಲ್ಲಿ ಊಟ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಕ್ರಮ ವಹಿಸಿದೆ. 
-ಡಾ.ಮಂಚೇಗೌಡ, ಡಿಎಚ್‌ಓ

Advertisement

Udayavani is now on Telegram. Click here to join our channel and stay updated with the latest news.

Next