Advertisement

Hoskote; ಪ್ರಸಾದ ಸೇವಿಸಿದ ಬಳಿಕ ನೂರಾರು ಮಂದಿ ಅಸ್ವಸ್ಥ: ಮಹಿಳೆ ಮೃತ್ಯು

06:30 PM Dec 25, 2023 | Team Udayavani |

ಹೊಸಕೋಟೆ: ಪಟ್ಟಣದ ದೇವಸ್ಥಾನವೊಂದರಲ್ಲಿ ಪ್ರಸಾದ ಸೇವಿಸಿದ ಬಳಿಕ ಹಲವಾರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಪೈಕಿ 60 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಕಳವಳಕಾರಿ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

Advertisement

ಶನಿವಾರ ಬಹುತೇಕರು ಹೊಸಕೋಟೆ ಪಟ್ಟಣದ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಪ್ರಸಾದವಾಗಿ ವಿತರಿಸಲಾಗಿದ್ದ ಪುಳಿಯೋಗರೆ, ಪಾಯಸ ಮತ್ತು ಲಾಡು ಸೇವಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಂದು ದಿನದ ನಂತರ, ಕೆಲವರು ಭೇದಿ ಮತ್ತು ವಾಂತಿ ಎಂದು ಹೇಳಿದ್ದು ನಂತರ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಧಾವಿಸಿದ್ದಾರೆ. ಅದೇ ರೋಗಲಕ್ಷಣಗಳನ್ನು ದೂರಿದ ಮಹಿಳೆ ಭಾನುವಾರ ಮಧ್ಯಾಹ್ನ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು, ಅವರು ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮೃತ ದುರ್ದೈವಿ ಹೊಸಕೋಟೆಯ ಕಾವೇರಿನಗರ ನಿವಾಸಿ ಸಿದ್ದಗಂಗಮ್ಮ ಎನ್ನುವವರಾಗಿದ್ದಾರೆ.

ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು. ಸದ್ಯಕ್ಕೆ, ಇದು ವಿಷ ಆಹಾರದ ಪ್ರಕರಣ ಎಂದು ಶಂಕಿಸಲಾಗಿದೆ, ಆದರೆ ತನಿಖೆ ಆರಂಭಿಕ ಹಂತದಲ್ಲಿರುವುದರಿಂದ, ಸದ್ಯಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲಾಗುವುದಿಲ್ಲ ಎಂದುಅಧಿಕಾರಿಗಳು ಹೇಳಿದ್ದಾರೆ.

ಅಸ್ವಸ್ಥಗೊಡಿರುವವರಿಗೆ ಹೊಸಕೋಟೆ, ಕೋಲಾರ ಮತ್ತು ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು 22ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 70ಕ್ಕೂ ಹೆಚ್ಚು ಮಂದಿ ಪಡೆದು ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next