Advertisement

Hospital; ದೇಶಾದ್ಯಂತ ಏಕ ಚಿಕಿತ್ಸಾ ವೆಚ್ಚ ನಿಗದಿಗೊಳಿಸಿ: ಸುಪ್ರೀಂ

12:38 AM Mar 05, 2024 | Team Udayavani |

ಹೊಸದಿಲ್ಲಿ: ದೇಶಾದ್ಯಂತ ನಗದು ರಹಿತ ವಿಮೆ ವಿತರಣೆ ಮಾಡುವುದ ಕ್ಕಾಗಿ ಮೊದಲಿಗೆ ದೇಶಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿ ಒಂದೇ ರೀತಿಯ ಚಿಕಿತ್ಸಾ ವೆಚ್ಚವನ್ನು ನಿಗದಿ ಮಾಡುವತ್ತ ಗಮನ ಹರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

Advertisement

ಪ್ರಸ್ತುತ ವಿವಿಧ ಆಸ್ಪತ್ರೆಗಳು ಚಿಕಿತ್ಸೆಗೆ ವಿವಿಧ ರೀತಿಯ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಹೀಗಾದರೆ ನಗದು ರಹಿತ ವಿಮೆ ಸೌಲಭ್ಯವನ್ನು ದೇಶಾ ದ್ಯಂತ ಒದಗಿಸುವುದು ಕಷ್ಟವಾಗಲಿದೆ. ಇದಕ್ಕಾಗಿ ಮುಂದಿನ 6 ವಾರಗಳಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ ಯೊಂದಿಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಎನ್‌ಜಿಒವೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಮಯದಲ್ಲಿ ಸುಪ್ರೀಂ ಕೋರ್ಟ್‌ ಈ ಸೂಚನೆ ನೀಡಿದೆ.

ದೇಶದ ನಾಗರಿಕರ ಆರೋಗ್ಯ ವಿಮೆಗಾಗಿ ಕೇಂದ್ರ ಸರಕಾರ1 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ಆದರೆ ದೇಶದ ಎಲ್ಲ ಆಸ್ಪತ್ರೆಗಳು ಒಂದೇ ರೀತಿಯ ಚಿಕಿತ್ಸಾ ವೆಚ್ಚವನ್ನು ಹೊಂದಿಲ್ಲ. ಹೀಗಾಗಿ ಇಂತಹ ರೋಗಕ್ಕೆ ಇಷ್ಟು ಹಣ ಎಂದು ಒದಗಿಸುವುದು ಕಷ್ಟವಾಗಲಿದೆ. ಇದರಿಂದ ನಾಗರಿಕರಿಗೆ ಸಮಸ್ಯೆ ಯಾಗಲಿದೆ ಎಂದು ಎನ್‌ಜಿಒ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next