Advertisement

ಮಾನವನ ದುರಾಸೆಗೆ ಇಡೀ ಪರಿಸರವೇ ಕಲುಷಿತ

05:18 PM Dec 16, 2019 | Naveen |

ಹೊಸಪೇಟೆ: ಮಾನವನ ದುರಾಸೆಗೆ ಮೈ-ಮನ ಮಾತ್ರ ಕಲುಷಿತಗೊಂಡಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರವೂ ಕೂಡ ಕಲುಷಿತಗೊಳ್ಳುತ್ತಿದೆ ಎಂದು ಹಂಪಿ ವಿದ್ಯಾರಣ್ಯ ಪೀಠಾಧ್ಯಕ್ಷ ಶ್ರೀ ಶಂಕರಾಚಾರ್ಯ ವಿದ್ಯಾರಣ್ಯ ಭಾರತಿ ಸ್ವಾಮಿಜಿ ಬೇಸರ ವ್ಯಕ್ತಪಡಿಸಿದರು.

Advertisement

ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ಫ‌ಲಪೂಜಾ ಮಹೋತ್ಸವದ ಅಂಗವಾಗಿ ಕಡ್ಡಿರಾಂಪುರದ ಶ್ರೀ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದವತಿಯಿಂದ ವಿರೂಪಾಕ್ಷ ದೇವಸ್ಥಾನ ಪ್ರಾಂಗಣದಲ್ಲಿ ಭಾನುವಾರ ರಾತ್ರಿ 22ನೇ ವರ್ಷದ ಭಕ್ತಿಭಾವನಾ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯವಹಿಸಿ ಆರ್ಶಿವಚನ ನೀಡಿದರು.

ನಾವು ದೇವರಿಗೆ ಏನನ್ನು ಕೊಡಬೇಕಾಗಿಲ್ಲ. ದೇವರೇ ಕುರುಣಿಸಿರುವ ಪ್ರಕೃತಿ ಸಂಪತ್ತನ್ನು ರಕ್ಷಣೆ ಮಾಡಿದರೆ ಸಾಕು. ದೇವರು, ನಮ್ಮಿಂದ ಏನು ಬೇಡುವುದಿಲ್ಲ.ದೇವರೇ ಸೃಷ್ಟಿಸಿರುವ ಗಿಡ-ಮರಗಳನ್ನು ಉಳಿಸಿಕೊಂಡರೆ, ಇಡೀ ವಿಶ್ವವೇ ಆರೋಗ್ಯ ಪೂರ್ಣವಾಗಿರುತ್ತದೆ ಎಂದರು. ಆಧ್ಯಾತ್ಮ ಕಾರ್ಯಕ್ರಮಗಳಿಂದ ಮನಸ್ಸು ಮಾತ್ರ ಶುದ್ಧವಾಗಿರುತ್ತದೆ. ನಮ್ಮ ಜೀವ ಜಲಮೂಲ, ಗಿಡಮರಗಳನ್ನು ಕಾಪಾಡಿಕೊಂಡರೆ, ನಮ್ಮ ದೇಹ-ಮನಸ್ಸು
ಎರಡೂ ಚೆನ್ನಾಗಿರುತ್ತದೆ. ಹೀಗಾಗಿ ಪ್ರತಿ ಯೊಬ್ಬರು, ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಹೆಚ್‌. ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆನೇಗುಂದಿ ರಾಜವಂಸ್ಥ ಕೃಷ್ಣದೇವರಾಯ ಆಗಮಿಸಿದ್ದರು. ಕಲಾವೃಂದದ ಅಂಗಡಿ ವಾಮದೇವ ಪುರೋಹಿತ, ಚಿಕ್ಕಮೋಹನ್‌ ಭಟ್‌, ಉಪಸ್ಥಿತರಿದ್ದರು.

ಕನ್ನಡ ವಿ.ವಿ.ಸಂಗೀತ ವಿಭಾಗದ ವಿಜಯಕುಮಾರ್‌ ಹಾಗೂ ಮಲ್ಲಿಕಾರ್ಜುನ ಬಡಿಗೇರ್‌ ತಂಡದಿಂದ ಸುಗಮ ಸಂಗೀತ, ಅಂಜಲಿ ಭರತನಾಟ್ಯ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ, ಅಭಿನವ ಭರತನಾಟ್ಯ ಕಲಾತಂಡದ ಸದಸ್ಯರಿಂದ ಜಾನಪದ ನೃತ್ಯ, ಅಂಗಡಿ ಸಮರ್ಥ, ಕುಮಾರಿ ನವ್ಯ ಅಂಗಡಿ, ಕುಮಾರಿ ರಕ್ಷಾ ಇವರಿಂದ ಭಕ್ತಿಗೀತೆ, ಯಲ್ಲಪ್ಪ ಬಂಡಾರ್‌ದಾರ್‌ ಇವರಿಂದ ಜಾನಪದ ಗೀತೆ ಜನ ಮನ ಸೊರೆ ಗೊಂಡವು. ದೊಡ್ಡ ಬಸಪ್ಪ ಅಂಗಡಿ, ಕೆ.ಪಂಪನಗೌಡ ನಿರೂಪಿಸಿದರು. ಕುಶಾಲ್‌ ಜಿಂಗಾಡೆ, ದೇವಸ್ಥಾನದ ಬಿ.ಜಿ. ಶ್ರೀನಿವಾಸ ಉಪಸ್ಥಿತರಿದ್ದರು. ನಂತರ ಕನ್ನಡ ವಿ.ವಿ. ಸಂಗೀತ ವಿಭಾಗವತಿಯಿಂದ ವಿಜಯಕುಮಾರ್‌, ಮಲ್ಲಿಕಾರ್ಜುನ ಬಡಿಗೇರ್‌, ಸುಗಮ ಸಂಗೀತ, ಅಂಜಲಿ ಭರತನಾಟ್ಯ ಕಲಾಕೇಂದ್ರದಿಂದ ಭರತನಾಟ್ಯ, ಹಂಪಿಯ ಅಭಿನವ ಕಲಾತಂಡದಿಂದ ಜಾನಪದ ನೃತ್ಯ ಜನ ಮನ ಸೊರೆಗೊಂಡಿತು. ದೇಶ-ವಿದೇಶದ ಸಹಸ್ರಾರು ಜನರು ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next