Advertisement

ಯುವ ಜೋಡಿಗಳ ಸರಳ ವಿವಾಹ!

05:55 PM Apr 19, 2020 | Naveen |

ಹೊಸಪೇಟೆ: ಕೊರೊನಾ ಭೀತಿ ನಡುವೆ ಸರಳ ವಿವಾಹಕ್ಕೆ ಮೊರೆಹೋದ ಯುವ ಜೋಡಿಗಳು ಕೆಲವೇ ಕೆಲ ಬಂಧು-ಮಿತ್ರರ ಸಮಕ್ಷಮದಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.

Advertisement

ನಗರದ ಸಿಪಿಎಂ ಹಿರಿಯ ಮುಖಂಡ ಎಂ. ಜಂಬಯ್ಯ ನಾಯಕ ಅವರ ಪುತ್ರ ಸಂಗ್ರಾಮ್‌ ನಾಯಕ ಮತ್ತು ನಗರದ ಹೊಸಗೇರಿ ಶಿವಮೂರ್ತೆಯಪ್ಪ ಇವರ ಪುತ್ರಿ ಅಕ್ಷತಾ ತಮ್ಮ ಮನೆಯಲ್ಲಿ ಆಯೋಜಿಸಿದ್ದ ಸರಳ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟರು. ಸರಳ ವಿವಾಹದಲ್ಲಿ ಮಾಸ್ಕ್ ಧರಿಸಿಕೊಂಡೆ ಮಧುಮಗ ತಾಳಿ ಕಟ್ಟಿದರೆ, ಇನ್ನು ವಿವಾಹದಲ್ಲಿ ಭಾಗಿಯಾಗಿದ್ದ ವಧು-ವರರ ಎರಡೂ ಕುಟುಂಬದ ಸದಸ್ಯರು, ಮಾಸ್ಕ್ ಧರಿಸಿ, ನವ-ವಧುವರರು ಆಶೀರ್ವದಿಸಿದರು.

ಇವರ ಮದುವೆ ಕಳೆದ ಮಾರ್ಚ್‌ ತಿಂಗಳಲ್ಲಿ ನಿಶ್ಚಯವಾಗಿತ್ತು. ಲಾಕ್‌ಡೌನ್‌ ಜಾರಿಯಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಮ್ಮ
ಮನೆಯಲ್ಲಿ ಕೆಲವೇ ಕೆಲ ಬಂಧು-ಮಿತ್ರರ ನಡುವೆ ಸರಳ ವಿವಾಹವನ್ನು ನೆರವೇರಿಸಲಾಯಿತು ಎಂದು ವರನ ತಂದೆ ಎಂ. ಜಂಬಯ್ಯ ನಾಯಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next