Advertisement

ಕಮಲಾಪುರದಲ್ಲಿ ಮಾಸ್ಕ್ ದಿನಾಚರಣೆ

05:41 PM Jun 19, 2020 | Naveen |

ಹೊಸಪೇಟೆ: ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್‌ ಠಾಣೆ ವತಿಯಿಂದ ಗುರುವಾರ ಮಾಸ್ಕ್ ದಿನಾಚರಣೆ ಆಚರಿಸಲಾಯಿತು.

Advertisement

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿದ ಪಟ್ಟಣ ಪಂಚಾಯ್ತಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಮಾಸ್ಕ್ ಕುರಿತು ಜಾಗೃತಿ ಮೂಡಿಸಿದರು. ವಾಲ್ಮೀಕಿ ವೃತ್ತ, ಊರಮ್ಮ ಬಯಲು, ಹಳೆ ಬಸ್‌ ನಿಲ್ದಾಣ, ಹೊಸ ಬಸ್‌ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ್‌ ವೃತ್ತದ ಮೆರವಣಿಗೆ ಅಂತ್ಯಗೊಂಡಿತು. ಮುಖ್ಯಾಧಿಕಾರಿ ನಾಗೇಶ್‌, ನೋಡಲ್‌ ಎಂಜಿನೀಯರ್‌ ಹನುಮಂತಪ್ಪ, ಎಎಸ್‌ಐಗಳಾದ ಬಸವರಾಜ, ಬಾಬು, ರಫೀಕ್‌, ಎನ್‌.ಹನುಮಂತಪ್ಪ, ಸಿಬ್ಬಂದಿ ಗುರುಬಸವರಾಜ, ತಿಪ್ಪೇಸ್ವಾಮಿ, ಹರೀಶ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next