Advertisement

ಹೋರಾಟಕ್ಕೆ ಹೊಸಪೇಟೆಯೇ ದಕ್ಷಿಣದ ಹೆಬ್ಬಾಗಿಲು

03:12 PM May 29, 2022 | Team Udayavani |

ಹೊಸಪೇಟೆ: ಸ್ವಾತಂತ್ರ್ಯ ಸಂಗ್ರಾಮದ ಇಡೀ ದಕ್ಷಿಣ ಭಾರತದ ಹೋರಾಟಕ್ಕೆ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯೇ ಹೆಬ್ಟಾಗಿಲು ಆಗಿತ್ತು ಎಂದು ನಿವೃತ್ತ ಪ್ರಾಧ್ಯಾಪಕ ಎನ್‌. ಬಸವರಾಜ ಹೇಳಿದರು. ನಗರದ ಮುನ್ಸಿಪಲ್‌ ಕ್ರೀಡಾಂಗಣದಲ್ಲಿ ಆಜಾದಿ ಕಾ ಅಮೃತ್‌ ಮಹೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಉತ್ತರ ಭಾರತದಲ್ಲಿ ಆರಂಭವಾಗಿ ಒಂದು ವರ್ಷದ ಬಳಿಕ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದು, ಹೊಸಪೇಟೆ ಸೇರಿದಂತೆ ಅಖಂಡ ಬಳ್ಳಾರಿ ಜಿಲ್ಲೆ ಸಂಗ್ರಾಮಕ್ಕೆ ಅಣಿಯಾಗಿದ್ದು, ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು. ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಕಾಂಗ್ರೆಸ್‌ ಅಧಿವೇಶನ ವಿಜಯನಗರ ವೇದಿಕೆ, ಹಕ್ಕ-ಬುಕ್ಕು ಮಾರ್ಗ, ಬನ್ನಿ ಹಿಂದೂ ಸಂಸ್ಕೃತಿಯನ್ನು ಒಟ್ಟಾಗಿ ಉಳಿಸೋಣ ಎಂದು ದ್ಯೇಹವಾಕ್ಯದೊಂದಿಗೆ ಆರಂಭವಾಗಿದ್ದು, ಕನ್ನಡಿಗರಾದ ನಾವು ಹೆಮ್ಮ ಪಡುವಂತ ವಿಷಯ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಅವರು ಹೊಸಪೇಟೆಯಲ್ಲಿ ಎರಡು ಗಂಟೆ ಪಾದಯಾತ್ರೆ ನಡೆಸಿದರು. ಈ ಭಾಗದಿಂದ ಸ್ವತಂತ್ರದ ಕ್ರಾಂತಿಕಾರರ ಹೋರಾಟಗಳು ನಡೆದಿವೆ. ಈ ಭಾಗದಲ್ಲಿ ಇರುವ ಸ್ವಾತಂತ್ರ್ಯ ಹೋರಾಟಗಾರನ್ನು ನೆನೆಯುದೇ ಮರಿಯುತ್ತಿದೇವೆ ಎಂದರು.

ಸಂಸದ ವೈ.ದೇವೇಂದ್ರಪ್ಪ ಉದ್ಘಾಟಿಸಿ ಮಾತನಾಡಿ, ಈ ದೇಶ ಮೇಲೇ ಆಕ್ರಮಣ ಮಾಡಿದ ಹಲವರು ಖಾಲಿ ಕೈಯಲ್ಲಿ ಹಿಂದಕ್ಕೆ ಹೋಗಿದ್ದಾರೆ. ಇನ್ನೂ ಯಾರು ಬಂದರು ಎನು ಮಾಡಲ್ಲ. ಪ್ರಧನಿ ನರೇಂದ್ರ ಮೋದಿ ಅವರು ಈ ದೇಶ ರಕ್ಷಣೆಗೆ ಹಲವು ರೀತಿಯ ಯೋಜನೆ, ತಂತ್ರಗಳನ್ನು ರೂಪಿಸಿದ್ದಾರೆ ಎಂದರು.

ಎಸ್ಪಿ ಡಾ| ಕೆ.ಅರುಣ್, ಜಿಪಂ ಸಿಇಒ ಹರ್ಷಲ್‌ ಭೋಯರ್‌ ನಾರಾಯಣ್‌ ರಾವ್‌, ಸ್ವಾತಂತ್ರ್ಯ ಹೋರಾಟಗಾರ ದೇಸಾಯಿ ಗುಂಡಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ತಹಶೀಲ್ದಾರ್‌ ವಿಶ್ವಜೀತ್‌ ಮೆಹೆತಾ, ಪೌರಾಯುಕ್ತ ರಮೇಶ್‌, ಡಿಡಿಪಿಐ ಕೋಟ್ರೇಶ್‌, ಪಿಡಬ್ಲ್ಯೂಡಿ ಎಂಜಿನಿಯರ್‌ ಕಿಶೋರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್‌, ಹುಡಾ ಅಧ್ಯಕ್ಷ ಅಶೋಕ ಜೀರೆ ಇನ್ನಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next