Advertisement
ಸಂಶೋಧನಾ ವಿದ್ಯಾರ್ಥಿಗಳ ಬಾಕಿ ಉಳಿಸಿಕೊಂಡಿರುವ ಮಾಸಿಕ ಸಹಾಯ ಧನ ಹಾಗೂ ಅಪೂ ರ್ಣಗೊಂಡ ಎಸ್‌ಸಿ, ಎಸ್‌ಟಿ ವಸತಿ ನಿಲಯ ಪೂರ್ಣಗೊಳಿಸುವುದು ಹಾಗೂ ಬಿಸಿಎಂ ವಸತಿ ನಿಲಯಕ್ಕೆ ನೂತನ ಕಟ್ಟಡ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ನಗರದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮುಷ್ಕರ ನಡೆಸಿದರು.
Related Articles
Advertisement
ನಂತರ ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮಾಸಿಕ ಸಹಾಯಧನ ನೀಡಲು ಮುಂದಾಗಿತ್ತು. 2016-17ನೇ ಸಾಲಿನಲ್ಲಿ ನಾಲ್ಕು ತಿಂಗಳು ಮತ್ತು 2017-18ನೇ ಸಾಲಿನಲ್ಲಿ 19 ತಿಂಗಳ ಮಾಸಿಕ ಸಹಾಯಧನವನ್ನು ಕೂಡಲೇ ಹಣ ವಿತರಣೆ ಮಾಡ ಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
ಬೇಡಿಕೆ: ಕನ್ನಡ ವಿಶ್ವವಿದ್ಯಾಲಯವು ಬಾಕಿ ಉಳಿಸಿಕೊಂಡಿರುವ ಎಸ್ಸಿ, ಎಸ್ಟಿ ಸಂಶೋಧನಾರ್ಥಿಗಳ ಸಹಾಯಧನವನ್ನು ಕೂಡಲೇ ನೀಡಬೇಕು. ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಇಲಾಖೆಗಳು ನೀಡುವಂತೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೂ ಆನ್‌ಲೈನ್ ಮೂಲಕವೇ ಮಾಸಿಕ ಸಹಾಯಧನವನ್ನು ನೀಡಬೇಕು.
ಮೂರು ವರ್ಷಗಳ ಬದಲಿಗೆ ಐದು ವರ್ಷಗಳಿಗೆ ಹೆಚ್ಚಿಸಬೇಕು. ಸಂಶೋಧನಾರ್ಥಿಗಳಿಗೆ ಈಗ ನೀಡುತ್ತಿರುವ ಆರ್ಥಿಕ ಸಹಾಯಧನವನ್ನು 10 ಸಾವಿರದಿಂದ 20 ಸಾವಿ ರ ರೂಗೆ ಹೆಚ್ಚಿಸಬೇಕು. ನಿರ್ಮಾಣ ಹಂತದಲ್ಲಿರುವ ವಸತಿ ನಿಲಯವನ್ನು ಈ ಕೂಡಲೇ ತೆರೆದು ಎಸ್ಸಿ ಎಸ್ಟಿ ಸಂಶೋಧನಾರ್ಥಿಗಳಿಗೆ ವಸತಿ ನಿಲಯ ವ್ಯವಸ್ಥೆ ಕಲ್ಪಿಸಬೇಕು. ಹಿಂದುಳಿದ ವರ್ಗದ ಸಂಶೋಧನಾರ್ಥಿಗಳಿಗೆ ವಸತಿ ನಿಲಯದ ಹೊಸ ಕಟ್ಟಡವನ್ನು ನಿರ್ಮಿಸಿ ಸೌಲಭ್ಯ ಕಲ್ಪಿಸಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು ಈ ಭಾಗದ ಎಸ್ಸಿ, ಎಸ್ಟಿ ಓಬಿಸಿ ಮತ್ತು ಮೈನಾರಿಟಿ ಸಂಶೋಧನಾರ್ಥಿಗಳಿಗೆ ಸಂಶೋಧನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸಹಾಯಧನವನ್ನು ಮತ್ತು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅನುದಾನವನ್ನು ನೀಡಬೇಕು.
ಇತರೆ ವಿಶ್ವವಿದ್ಯಾಲಯಗಳಿಗೆ ಇರುವಂತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಅನ್ಯ ಆದಾಯ ಮೂಲಗಳು ಇಲ್ಲದೆ ಇರುವುದರಿಂದ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಭಾರತ ವಿದ್ಯಾರ್ಥಿ ಫೆಡರೇಶನ್, ಅಖೀಲ ಭಾರತ ವಿದ್ಯಾರ್ಥಿ ಫೆಡರೇಶನ್, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳ ಮುಷ್ಕರದಲ್ಲಿ ಭಾಗಿಯಾಗಿವೆ. ಎಸ್‌ಎಫ್ಐ ರಾಜ್ಯಾಧ್ಯಕ್ಷ ವಿ.ಅಂಬರೀಷ್, ರಾಜ್ಯ ಕಾರ್ಯದರ್ಶಿ ರಮೇಶ್ ನಾಯಕ್, ಎಐ ಡಿ ಎಸ್‌ಓ ಜಿಲ್ಲಾಧ್ಯಕ್ಷ ಸುರೇಶ್, ಕೆವಿಎಸ್ ರಾಜ್ಯ ಸಂಚಾಲಕ ಸರೋವರ ಬೆಂಕಿಕೆರೆ ಇತರರು ಮುಂಚೂಣಿಯಲ್ಲಿದ್ದಾರೆ.