ಹೊಸಪೇಟೆ: ನಗರದ ಸುರಂಗ ಮಾರ್ಗದ (ರಾ.ಹೆ 50) ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬ ಏಳು ಜನ ಸ್ಥಳದಲ್ಲಿ ಮೃತಪಟ್ಟಿದ್ದು, ಓರ್ವ ಮಗು ಗಂಭೀರವಾಗಿ ಗಾಯಗೊಂಡ ದಾರುಣ ಘಟನೆ ಸೋಮವಾರ ನಡೆದಿದೆ.
ನಗರದ ಉಕ್ಕಡಕೇರಿ ನಿವಾಸಿಗಳಾದ ಗೋಣಿಬಸಪ್ಪ (65), ಬೀಮಲಿಂಗ (50), ಯುವರಾಜ (4) ಅನಿಲ್ (30), ಭಾಗ್ಯ (32) ಕೆಂಚವ್ವ (80) ಉಮಾ (45) ಎಂಬುವರರು ಅಪಘಾತದಲ್ಲಿ ಮೃತಪಟ್ಟ ರ್ದುದೈವಿಗಳು.
ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕೂಲಹಳ್ಳಿ ಗ್ರಾಮದ ಗೋಣಿ ಬಸವೇಶ್ವರ ದೇವಾಲಯಕ್ಕೆ ದರ್ಶನಕ್ಕಾಗಿ ಕ್ರೂಸರ್ ವಾಹನದಲ್ಲಿ ಪ್ರಯಾಣ ಬೆಳಿಸಿದ್ದಾರೆ. ಮರಳಿ ಬರುವ ಸಂದರ್ಭದಲ್ಲಿ ಟಿಪ್ಪರ್ ಲಾರಿಯೊಂದು ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಆವಘಡ ಸಂಭವಿಸಿದೆ. ಘಟನೆಯಲ್ಲಿ ಕ್ರೂಸರ್ ವಾಹನ ನಜ್ಜುಗುಜ್ಜಾಗಿದೆ.
ಇದನ್ನೂ ಓದಿ:Kantara 2: ವರ್ಷಾಂತ್ಯಕ್ಕೆ ʼಕಾಂತಾರ-2ʼ ಶೂಟಿಂಗ್ ಆರಂಭ.. ಇಲ್ಲಿದೆ ಕುತೂಹಲಕಾರಿ ಮಾಹಿತಿ
ನಗರದ ಉಕ್ಕಡಕೇರಿ ನಿವಾಸಿ ಗೋಣಿಬಸಪ್ಪ ತಮ್ಮ ಮೊಮ್ಮಗನ ಜವಳ ಕಾರ್ಯಕ್ಕಾಗಿ ಗೋಣಿಬಸಪ್ಪ ದೇವಾಲಯಕ್ಕೆ ರವಿವಾರ ತೆರಳಿದ್ದರು. ಸೋಮವಾರ ಪೂಜೆ ನೆರವೇರಿಸಿಕೊಂಡು ಮನೆ ಕಡೆ ಬರುತ್ತಿರುವ ವೇಳೆಯಲ್ಲಿ ಗುಂಡ ಉದ್ಯಾನವನದ ಬಳಿ ಯಮನಂತೆ ಎರಗಿದ ಟಿಪ್ಪರ್ ಲಾರಿ ಏಳು ಜನರನ್ನು ಬಲಿ ಪಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿನಯ್ (3) ಎಂಬ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶಾಸಕರ ಭೇಟಿ: ಸ್ಥಳಕ್ಕೆ ದೌಡಾಯಿಸಿ ಬಂದ ಶಾಸಕ ಎಚ್.ಆರ್.ಗವಿಯಪ್ಪ, ಕುಟುಂಬಸ್ಥರಿಗೆ ಸ್ವಾಂತನ ಹೇಳಿದರು. ಜಿಲ್ಲಾ ವರಿಷ್ಠಾಧಿಕಾರಿ ಶ್ರೀ ಹರಿಬಾಬು, ಡಿವೈಎಸ್‌ಪಿ ಟಿ.ಮಂಜುನಾಥ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.