Advertisement

ಹೊಸ್ಮಠ, ಬಿಳಿನೆಲೆ ಸೇತುವೆ ಮುಳುಗಡೆ

07:05 AM Aug 29, 2017 | Team Udayavani |

ಕಡಬ: ಘಟ್ಟದ ಮೇಲೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಗುಂಡ್ಯ ಹೊಳೆಯಲ್ಲಿ ನೆರೆ ನೀರಿನ ಮಟ್ಟ ಏರಿಕೆಯಾಗಿದೆ. ಸೋಮವಾರ ಸಂಜೆ ವೇಳೆಗೆ ಕಡಬ ಸಮೀಪದ ಹೊಸ್ಮಠ ಸೇತುವೆ ನೀರಿನಲ್ಲಿ ಮುಳುಗಡೆಯಾಗಿ ಕಡಬದ ಮೂಲಕ ಹಾದು ಹೋಗುವ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಯಲ್ಲಿ  ವಾಹನ ಸಂಚಾರ ವ್ಯತ್ಯಯಗೊಂಡಿತು.

Advertisement

ಸಂಜೆ ಸುಮಾರು 6 ಗಂಟೆಯ ವೇಳೆಗೆ ಮುಳುಗಡೆ ಯಾಗಿರುವ ಸೇತುವೆಯ ಮೇಲಿನಿಂದ ರಾತ್ರಿಯ ತನಕವೂ ನೆರೆನೀರು ಇಳಿದಿರಲಿಲ್ಲ. ಸೇತುವೆಯ ಇಕ್ಕೆಲೆಗಳಲ್ಲಿ ರಕ್ಷಣಾ ಗೇಟುಗಳನ್ನು ಮುಚ್ಚಲಾಗಿದ್ದು, ಕಡಬ ಪೊಲೀಸರು ಹಾಗೂ ಗೃಹರಕ್ಷಕ ಸಿಬಂದಿ ಕಾವಲು ನಿರತರಾಗಿದ್ದಾರೆ.

ಬಿಳಿನೆಲೆ ಸೇತುವೆ ಮುಳುಗಡೆ
ಕಡಬದ ಹೊಸಮಠ ಸೇತುವೆ ಮುಳುಗಡೆ ಯಾಗುವುದಕ್ಕೆ ಮೊದಲೇ ನೆಟ್ಟಣ ಹಾಗೂ ಬಿಳಿನೆಲೆ ಪೇಟೆಯ ನಡುವೆ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಯಲ್ಲಿ ಬರುವ ಬಿಳಿನೆಲೆ ಮುಳುಗು ಸೇತುವೆಯೂ ನೆರೆನೀರಿನಿಂದ ಮುಳುಗಡೆಯಾಗಿದೆ. ಸಂಜೆ 5 ಗಂಟೆಯ ವೇಳೆಗೆ ಸೇತುವೆಯ ಮೇಲಿನಿಂದ ರಾತ್ರಿಯ ತನಕವೂ ನೆರೆನೀರು ಇಳಿದಿರಲಿಲ್ಲ. ಸೇತುವೆ ಮುಳುಗಡೆ ಯಿಂದಾಗಿ ಧರ್ಮಸ್ಥಳ-ಸುಬ್ರಹ್ಮಣ್ಯ ಮಾರ್ಗ ದಲ್ಲಿ ಸಂಚರಿಸುವ ವಾಹನಗಳು ಸಂಚಾರ ಮುಂದುವರಿಸಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next