Advertisement

ಆರು ತಾಲೂಕಿನ ಪತ್ರಕರ್ತರಿಗೆ ವಿಮೆ ಸೌಲಭ್ಯ

07:29 PM Dec 19, 2021 | Team Udayavani |

ಹೊಸಪೇಟೆ: ವಿಜಯನಗರ ಜಿಲ್ಲೆಯ ಆರುತಾಲೂಕಿನ ಪತ್ರಕರ್ತರಿಗೆ ಆರೋಗ್ಯ ವಿಮೆಸೌಲಭ್ಯವನ್ನು ಒದಗಿಸಿಕೊಡುವೆ. ಒಂದು ವರ್ಷದಪ್ರಿಮಿಯಂ ಸ್ವಂತ ಹಣದಲ್ಲಿ ಭರಿಸುವೆ ಎಂದುಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ಸಿಂಗ್‌ ಹೇಳಿದರು.

Advertisement

ನಗರದ ಹೋಟೆಲ್‌ ಪ್ರಿಯದರ್ಶಿನಿ ಪ್ರೈಡ್‌ನ‌ಲ್ಲಿಶನಿವಾರ ನಡೆದ ಕರ್ನಾಟಕ ಕಾರ್ಯನಿರತಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಧಾನಿಪತ್ರಕರ್ತರಿಗೆ ಹೋಲಿಸಿದರೆ ಜಿಲ್ಲಾ ಹಾಗೂಗ್ರಾಮೀಣ ಭಾಗದ ಪತ್ರಕರ್ತರು ಸಮರ್ಪಕಸೌಲಭ್ಯವಿಲ್ಲದಿದ್ದರೂ ಸಾಮಾಜಿಕ ಕಾಳಜಿಯೊಂದಿಗೆವರದಿ ಮಾಡುತ್ತಾರೆ. ಕೊರೊನಾ ಸಂಕಷ್ಟದಲ್ಲೂಉತ್ತಮ ವರದಿ ಮಾಡುತ್ತಿದ್ದಾರೆ. ಹಾಗಾಗಿವೈಯಕ್ತಿಕವಾಗಿ ಆರೋಗ್ಯ ವಿಮೆ ಸೌಲಭ್ಯ ಒದಗಿಸುವೆ ಎಂದರು.

ವಿಜಯನಗರ ಜಿಲ್ಲೆಗಾಗಿ ಈ ಭಾಗದಲ್ಲಿದಶಕಗಳಿಂದ ಹೋರಾಟ ನಡೆದಿತ್ತು. ಅದಕ್ಕೆನಾನು ಧ್ವನಿಗೂಡಿಸಿರುವೆ. ಹಾಗಾಗಿ ಆಗಿನ ಸಿಎಂಯಡಿಯೂರಪ್ಪನವರು ಆರ್ಥಿಕ ಸಂಕಷ್ಟದನಡುವೆಯೂ ಜಿಲ್ಲೆ ಮಾಡಿದ್ದಾರೆ. ಅವರಿಗೆವಿಜಯನಗರ ಜಿಲ್ಲೆಯ ಆರೂ ತಾಲೂಕಿನ ಜನರುಚಿರಋಣಿಯಾಗಿದ್ದಾರೆ ಎಂದರು.

ಪತ್ರಿಕಾರಂಗಸಂವಿಧಾನದ ನಾಲ್ಕನೆ ಅಂಗವಾಗಿದೆ ಎಂದುಎಲ್ಲ ರಾಜಕಾರಣಿಗಳು, ಜನಪ್ರತಿನಿಧಿಗಳು ಈಬಗ್ಗೆ ಮಾತನಾಡುತ್ತಾರೆ. ಆದರೆ ಪತ್ರಕರ್ತರುಅನುಭವಿಸುತ್ತಿರುವ ಸಂಕಷ್ಟಕ್ಕೆ ಯಾರೂ ಸ್ಪಂದನೆಮಾಡುತ್ತಿಲ್ಲ. ಪತ್ರಕರ್ತರಿಗೆ ಎಲ್ಲ ಸೌಲಭ್ಯದೊರೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next