Advertisement

ಕೊಟ್ಟೂರು ಸ್ವಾಮಿ ಮಠದಲ್ಲಿ ಅಂತಿಮ ದರ್ಶನ

03:16 PM Nov 23, 2021 | Team Udayavani |

ಹೊಸಪೇಟೆ: ನಗರದ ಕೊಟ್ಟೂರುಸ್ವಾಮಿಸಂಸ್ಥಾನಮಠದಲ್ಲಿ ಮಠಾ ಧೀಶರು,ರಾಜಕಾರಣಿಗಳು, ಅಪಾರ ಭಕ್ತರುಡಾ| ಸಂಗನಬಸವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

Advertisement

ಕೊಟ್ಟೂರುಸ್ವಾಮಿ ಮಠದಲ್ಲಿ ಸದ್ಭಕ್ತರುಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು.ಶ್ರೀ ಮಠದಲ್ಲಿ ಸಂಜೆ 6 ಗಂಟೆಯಿಂದರಾತ್ರಿ 7 ಗಂಟೆವರೆಗೆ ಅಂತಿಮ ದರ್ಶನ ಪಡೆಯಲಾಯಿತು.

ಮೈಸೂರಿನ ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಚಿತ್ತರಗಿ ವಿಜಯ್‌ ಮಹಾಂತೇಶ ಸ್ವಾಮೀಜಿ,ಮರಿಯಮ್ಮನಹಳ್ಳಿ ಗುರುಪಾದದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ, ನಂದಿಪುರ ಶ್ರೀಗಳು, ಕಾನಾಮಡಗುಐಮುಡಿ ಸ್ವಾಮೀಜಿ, ಹಿರೇಹಡಗಲಿಯಕಾಲಿರಪ್ಪಜ್ಜ ಸೇರಿದಂತೆ ವಿವಿಧ ಮಠಾಧಿಧೀಶರು ಅಂತಿಮ ದರ್ಶನ ಪಡೆದರು.ಪ್ರವಾಸೋದ್ಯಮಸಚಿವ ಆನಂದ್‌ ಸಿಂಗ್‌, ಶಾಸಕರಾದತುಕಾರಾಂ, ಸೋಮಶೇಖರ ರೆಡ್ಡಿ, ಶಾಸಕಜೆ.ಎನ್‌. ಗಣೇಶ್‌, ಎಂಎಲ್ಸಿ ಅಲ್ಲಂವೀರಭದ್ರಪ್ಪ, ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯ, ಹಂಪನಗೌಡ ಬಾದರ್ಲಿ,ಮುಖಂಡರಾದ ಎಂ.ಪಿ. ವೀಣಾ, ಚಾನಾಳ್‌ಶೇಖರ್‌, ಭರತ್‌ ರೆಡ್ಡಿ, ರಾಣಿಸಂಯುಕ್ತಾಸಿಂಗ್‌, ಕೆ.ಬಿ. ಶ್ರೀನಿವಾಸರೆಡ್ಡಿ, ಬಿ.ಎಸ್‌.ಜಂಬಯ್ಯ ನಾಯಕ, ವಿಶ್ವನಾಥ ಹಿರೇಮಠ,ಮಲ್ಲೆ ದೊಡ್ಡಪ್ಪ, ಪಲ್ಲೆದ ಪಂಪಾಪತಿ, ಹರವಿಬಸವನಗೌಡ ಮತ್ತಿತರ ಗಣ್ಯರು ಅಂತಿಮನಮನ ಸಲ್ಲಿಸಿದರು.

ಶ್ರೀಮಠದ ರಾಣಿಚನ್ನಮ್ಮ ಶಾಲೆವಿದ್ಯಾರ್ಥಿಗಳು ಶಿಕ್ಷಕರು ಕಣ್ಣೀರು ಹಾಕಿದರು.ಅಂತಿಮ ದರ್ಶನದ ಬಳಿಕ ಗದಗ ಜಿಲ್ಲೆಯಗಜೇಂದ್ರಗಡದ ಹಾಲಕೆರೆಯ ಮಠಕ್ಕೆಪಾರ್ಥಿವ ಶರೀರದ ಮೆರವಣಿಗೆ ಸಾಗಿತು.ಮಠಕ್ಕೆ ಶ್ರೀಗಳ ಪಾರ್ಥಿವ ಶರೀರ: ಜಗದ್ಗುರುಶ್ರೀ ಡಾ| ಸಂಗನಬಸವ ಸ್ವಾಮೀಜಿಅವರ ಪಾರ್ಥಿವ ಶರೀರ ಸೋಮವಾರಸಂಜೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿಶ್ರೀಮಠದ ಭಕ್ತರು ಹಾಗೂ ವಿವಿಧ ಜಾನಪದಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕಮೂಲಮಠಕ್ಕೆ ಕರೆತರಲಾಯಿತು.

ನಗರದಸಣ್ಣಕ್ಕಿ ವೀರಭದ್ರೇಶ್ವರ ದೇಗುಲದ ಬಳಿಯಿಂದಆರಂಭಗೊಂಡ ಮೆರವಣಿಗೆ ನಗರದ ವಿವಿಧಬೀದಿಗಳಲ್ಲಿ ಸಂಚರಿಸಿ ಕೊಟ್ಟೂರುಸ್ವಾಮಿಮಠದವರೆಗೆ ಸಾಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next